/newsfirstlive-kannada/media/post_attachments/wp-content/uploads/2023/10/Netanyahu.jpg)
ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವೆ ಭಾರೀ ಗುಂಡಿನ ಕಾಳಗ ಮುಂದುವರದಿದ್ದು, ಇಸ್ರೇಲ್ ದಾಳಿಗೆ ಹೆಜ್ಬುಲ್ಲಾ ರಾಕೆಟ್ ದಾಳಿಯ ಉತ್ತರ ಕೊಟ್ಟಿದೆ. ಇದೆಲ್ಲದರ ನಡುವೆ ನೆತನ್ಯಾಹು ಹೆಜ್ಬುಲ್ಲಾ ಜೊತೆ ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ಮತ್ತೆ ಕೆಣಕಿದ ಹೆಜ್ಬುಲ್ಲಾ.. ಇಸ್ರೇಲ್ ಮೇಲೆ ಭೀಕರ ದಾಳಿ
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನೇ ದಿನೇ ಹೆಚ್ಚಳವಾಗ್ತಿದೆ. ಇಸ್ರೇಲ್ ಮತ್ತು ಗಾಜಾ.. ಇಸ್ರೇಲ್ ಮತ್ತು ಇರಾನ್.. ಇಸ್ರೇಲ್ ಮತ್ತು ಲೆಬನಾನ್.. ಹೀಗೆ ಒಂದು ದೇಶ ಮೂರ್ಮೂರು ಕಡೆ ಯುದ್ಧ ಮಾಡ್ತಾ ಟಕ್ಕರ್ ಕೊಡ್ತಿದೆ. ಹೀಗೆ ಮೂರು ಕಡೆಯ ಉಗ್ರರನ್ನ ನಡುಗಿಸ್ತಿರೋ ಇಸ್ರೇಲ್ ಅನ್ನ ಹೆಜ್ಬುಲ್ಲಾ ಮತ್ತೆ ಕೆಣಕಿದೆ. ಇಸ್ರೇಲ್ ಮೇಲೆ ಹೆಜ್ಬುಲ್ಲಾ 250 ರಾಕೆಟ್ ದಾಳಿ ನಡೆಸಿದೆ.
ಇದನ್ನೂ ಓದಿ:ತಾರಕಕ್ಕೇರಿದ ಸಂಘರ್ಷ; ಇಸ್ರೇಲ್ ಪ್ರಧಾನಿ ಮನೆ ಮೇಲೆ ದಿಢೀರ್ ದಾಳಿ; ಏನಾಯ್ತು?
ಹೆಜ್ಬುಲ್ಲಾ ದಾಳಿಯಲ್ಲಿ ಸೆಂಟ್ರಲ್ ಇಸ್ರೇಲ್ನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಸುಮಾರು ಏಳುಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪ್ರಕರಣೆ ಹೊರಡಿಸಿರುವ ಹೆಜ್ಬುಲ್ಲಾ, ಮೊದಲ ಬಾರಿ ಇಸ್ರೇಲ್‌ನ ನೌಕಾ ನೆಲೆ ಮೇಲೆ ಡ್ರೋನ್ ಬಳಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಹೇಳಿಕೊಂಡಿದೆ. ಇಸ್ರೇಲ್‌ನ ಐರನ್ ಡೋಮ್ ಹೆಜ್ಬುಲ್ಲಾ ಹಾರಿಸಿದ ಕೆಲವು ರಾಕೆಟ್‌ಗಳನ್ನ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇನ್ನುಳಿದ ಕೆಲವು ರಾಕೆಟ್‌ಗಳು ಟೆಲ್ ಅವೀವ್‌ನಲ್ಲಿ ಭಾರಿ ಕಟ್ಟಡಗಳನ್ನ ಧ್ವಂಸ ಮಾಡಿದೆ.
ಇಸ್ರೇಲ್ ಹಾಗೂ ಲೆಬನಾನ್ನ ಹೆಜ್ಬುಲ್ಲಾ ಸಂಘಟನೆಗಳ ನಡುವೆ ನಡೆಯುತ್ತಿದ್ದ ಯುದ್ಧ ಅಂತ್ಯ ಕಾಣುವ ಸಾಧ್ಯತೆ ಇದೆ. ಇದೀಗ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೆಜ್ಬುಲ್ಲಾ ಜೊತೆ ತಾತ್ಕಾಲಿಕ ಕದನ ವಿರಾಮಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ, ಇಸ್ರೇಲ್‌ನ ನೆತನ್ಯಾಹು ಹೆಜ್ಬೊಲ್ಲಾ ಜೊತೆ ತಾತ್ವಿಕ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಿದ್ದಾರೆ ಎಂದು ಹೇಳಲಾಗ್ತಿದೆ. ಹೀಗಾಗಿ ಲೆಬನಾನ್ ಜೊತೆಗಿನ ಕದನಕ್ಕೆ ನೇತನ್ಯಾಹು ಅಂತ್ಯ ಹಾಡ್ತಾರಾ ಅನ್ನೋದು ಅಧಿಕೃತವಾಗಿ ಘೋಷಣೆ ಆಗಬೇಕಿದೆ.
ಇದನ್ನೂ ಓದಿ:ನೆಕ್ಸ್ಟ್ ಲೆವೆಲ್ ತಲುಪಿದ ಸಂಘರ್ಷ.. ಇಸ್ರೇಲ್ ಮೇಲೆ 160ಕ್ಕೂ ಹೆಚ್ಚು ರಾಕೆಟ್ ದಾಳಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ