ಬೌಲರ್ಗಳನ್ನು ಜಾಹೀರಾತು ಮೂಲಕ ಆಹ್ವಾನಿಸಿದ ನೆದರ್ಲ್ಯಾಂಡ್
ಸಲೆಕ್ಟೆಡ್ ಪ್ಲೇಯರ್ಸ್ ವೆಚ್ಚವೆಲ್ಲ ಅಸೋಸಿಯೇಷನ್ ನೋಡಿಕೊಳ್ಳುತ್ತೆ
ಕ್ರಿಕೆಟ್ ಆಸಕ್ತರು ಕೂಡಲೇ ಇ-ಮೇಲ್ ಮೂಲಕ ಅಪ್ಲೆ ಮಾಡಬಹುದು
ಅಕ್ಟೋಬರ್ನಿಂದ ಪ್ರಾರಂಭವಾಗುವ ಏಕದಿನ ವಿಶ್ವಕಪ್ಗೆ ಭಾರತ ಸೇರಿದಂತೆ ವಿಶ್ವದ ಇತರೆ ದೇಶಗಳು ಭರ್ಜರಿ ತಯಾರಿ ನಡೆಸಿವೆ. ಟೂರ್ನಿಯಲ್ಲಿ ಒಟ್ಟು 10 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು ಇದರಲ್ಲಿ ನೆದರ್ಲ್ಯಾಂಡ್ ಕೂಡ ಭಾಗಿಯಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ನಡೆಯುವ 5 ದಿನಗಳ ಪ್ರಿ-ಕಪ್ ಕ್ಯಾಂಪ್ಗಾಗಿ ನೆಟ್ ಬೌಲರ್ಗಳನ್ನು ಜಾಹೀರಾತು ಮೂಲಕ ಡಚ್ ಕ್ರಿಕೆಟ್ ಬೋರ್ಡ್ ಆಹ್ವಾನಿಸಿದೆ.
ಇದೇ ಸೆಪ್ಟೆಂಬರ್ 20 ರಿಂದ 24ರ ವರೆಗೆ ಬೆಂಗಳೂರಿನ ಆಲೂರಿನಲ್ಲಿ 5 ದಿನಗಳ ಕಾಲ ಪ್ರಿ-ಕಪ್ ಕ್ಯಾಂಪ್ ನಡೆಯಲಿದೆ. ಈ ಕ್ಯಾಂಪ್ನಲ್ಲಿ ಆಡುವ ನೆದರ್ಲ್ಯಾಂಡ್ ಟೀಮ್ಗೆ ಒಳ್ಳೆಯ ನೆಟ್ ಬೌಲರ್ಗಳು ಬೇಕಾಗಿದ್ದಾರೆ. ಒಬ್ಬ ಎಡಗೈ ಬೌಲರ್, ಬಲಗೈ ಬೌಲರ್, ಮಿಸ್ಟರಿ ಸ್ಪಿನ್ನರ್ ಹಾಗೂ ಎಡಗೈ ಸ್ಪಿನ್ನರ್ ಬೇಕು ಎಂದು ಡಚ್ ಟೀಮ್ ತನ್ನ ಅಧಿಕೃತ ಎಕ್ಸ್ನಲ್ಲಿ ಜಾಹೀರಾತು ಆಹ್ವಾನಿಸಿದೆ. ಸಲೆಕ್ಟ್ ಆಗುವ ಪ್ಲೇಯರ್ಸ್ಗೆ ಪ್ರಯಾಣದ ವೆಚ್ಚ, ವಸತಿ-ಊಟದ ಸೌಲಭ್ಯವನ್ನೆಲ್ಲ ರಾಯಲ್ ನೆದರ್ಲ್ಯಾಂಡ್ಸ್ ಕ್ರಿಕೆಟ್ ಅಸೋಸಿಯೇಷನ್ ನೋಡಿಕೊಳ್ಳಲಿದೆ ಎಂದು ತಿಳಿಸಲಾಗಿದೆ.
ಆಸ್ಟ್ರೇಲಿಯಾ ಮೂಲದ ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್ ತಂಡವು ಆಗಸ್ಟ್ನಲ್ಲಿ ಬೆಂಗಳೂರಿಗೆ ಬಂದಿತ್ತು. ಆದ್ರೆ ಬ್ಯಾಟಿಂಗ್ ಪ್ರಾಕ್ಟೀಸ್ ಮಾಡಲು ತಂಡದಲ್ಲಿ ನೆಟ್ ಬೌಲರ್ಗಳನ್ನು ಕರೆ ತಂದಿಲ್ಲ. ಹೀಗಾಗಿ ಜಾಹೀರಾತು ಮೂಲಕ ನೆಟ್ ಬೌಲರ್ಗಳನ್ನು ಆಹ್ವಾನಿಸಿದೆ. ಆಸಕ್ತರು ಅಪ್ಲೇ ಮಾಡಬಹುದು.
If you can bowl and want to be a part of the team's ICC Men's ODI World Cup 2023 preparations, then head over to the link below and upload your videohttps://t.co/cQYjcW7bQq pic.twitter.com/S4TX8ra7pN
— Cricket🏏Netherlands (@KNCBcricket) September 7, 2023
ಆಟಗಾರನು ಈ ಕೆಳಗಿನ ಅಂಶಗಳನ್ನು ಹೊಂದಿರಬೇಕು
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ