/newsfirstlive-kannada/media/post_attachments/wp-content/uploads/2025/06/ChatGPT.jpg)
2022 ರಲ್ಲಿ ಪ್ರಾರಂಭವಾದ ChatGPT ತುಂಬಾನೇ ಜನಪ್ರಿಯತೆ ಪಡೆದುಕೊಂಡಿದೆ. ವರದಿಗಳ ಪ್ರಕಾರ ಈ ತಂತ್ರಜ್ಞಾನವನ್ನು ಪ್ರತಿದಿನ 1 ಬಿಲಿಯನ್ ಬಾರಿ ಹುಡುಕಲಾಗುತ್ತದೆ. ಇದು Google ಗಿಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ವೇದಿಕೆ.
ಕೃತಕ ಬುದ್ಧಿಮತ್ತೆ (AI) ನಿಂದ ನಡೆಸಲ್ಪಡುವ ChatGPT ಇಂದು ಜನರು ಮತ್ತು ಕಂಪನಿಗಳಿಗೆ ಬರವಣಿಗೆ, ಕೋಡಿಂಗ್, ಸಂಶೋಧನೆ ಮತ್ತು ಗ್ರಾಹಕ ಸೇವೆಯಂತಹ ಅನೇಕ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದೆ. ಹೀಗಿದ್ದೂ ChatGPTಯಲ್ಲಿ ನೀವು ಕೆಲವು ವಿಚಾರಗಳನ್ನು ಕೇಳಬಾರದು. ಒಂದು ವೇಳೆ ನೀವು ಅಂತಹ ವಿಚಾರಗಳನ್ನ ಕೇಳಿದರೆ ಅಪಾಯಕ್ಕೆ ಸಿಲುಕೋದು ಪಕ್ಕಾ.
ಇದನ್ನೂ ಓದಿ: ಉದ್ಯಮ ಆರಂಭಿಸುವ ಆಸೆ ನಿಮಗಿದ್ಯಾ..? ಹಾಗಾದ್ರೆ ಬ್ಯುಸಿನೆಸ್ ಮಾಡೋ ವಿಧಾನ ತಿಳಿದುಕೊಳ್ಳಿ..!
ಆರೋಗ್ಯ ಸಲಹೆ ಬೇಡ..
ChatGPT ಪ್ರತಿಯೊಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತದೆಯಾದರೂ ಅದು ವೈದ್ಯನಾಗಿರಲು ಸಾಧ್ಯವಿಲ್ಲ. ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅಸಲಿ ವೈದ್ಯರ ಸಲಹೆ ತುಂಬಾನೇ ಅಗತ್ಯ. ChatGPT ಯಿಂದ ಆರೋಗ್ಯ ಸಲಹೆ ತೆಗೆದುಕೊಂಡರೆ ಅಪಾಯಕ್ಕೆ ಸಿಲುಕುತ್ತಿರಿ..
ಹ್ಯಾಕಿಂಗ್ ಸಂಬಂಧಿತ ಪ್ರಶ್ನೆಗಳು..
ಬೇರೆಯವರ ಸಾಮಾಜಿಕ ಮಾಧ್ಯಮ ಅಥವಾ ಇ-ಮೇಲ್ ಹೇಗೆ ಹ್ಯಾಕ್ ಮಾಡುವುದು ಅಂತಾ ನೀವು ChatGPT ಕೇಳಬಾರದು. ಹ್ಯಾಕಿಂಗ್ ಕಾನೂನು ಬಾಹಿರ. ChatGPT ನಂತಹ AI ಟೂಲ್ಗಳು ಅಂತಹ ಮಾಹಿತಿ ನೀಡುವುದನ್ನು ನಿಷೇಧಿಸಲಾಗಿದೆ. ಒಮ್ಮೆ ನೀವು ಕೇಳಿದರೂ ಅದು ತಿರಸ್ಕರಿಸುತ್ತದೆ.
ಕಾನೂನು ಸಲಹೆ ಪಡೆಯುವುದು ಅಪಾಯಕಾರಿ..
ಕಾನೂನು ವಿಷಯಗಳ ಸಂಕೀರ್ಣತೆ ಮತ್ತು ಗಂಭೀರತೆಯನ್ನು ಗಮನಿಸಿದರೆ ChatGPT ಯಿಂದ ಪಡೆದ ಕಾನೂನು ಸಲಹೆಯು ತಪ್ಪಾಗಿರುವ ಸಾಧ್ಯತೆ ಇದೆ. ಈ ವಿಷಯವು ಸಾಮಾನ್ಯ ಮಾಹಿತಿಗೆ ಸೀಮಿತವಾಗಿದ್ದರೆ ಮಾತ್ರ ಚೆನ್ನಾಗಿರುತ್ತದೆ. ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವ ಮೊದಲು ವಕೀಲರನ್ನು ಸಂಪರ್ಕಿಸಬೇಕು..
ಹಣಕಾಸು ಅಥವಾ ಹೂಡಿಕೆ ನಿರ್ಧಾರ ಬೇಡ
ನೀವು ChatGPT ಮೂಲಕ ಷೇರು ಮಾರುಕಟ್ಟೆ ಅಥವಾ ಹೂಡಿಕೆಗಳಿಗೆ ಸಂಬಂಧಿಸಿದ ಭವಿಷ್ಯವಾಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. AI-ಚಾಲಿತ ಮಾಹಿತಿಯು ಕೆಲವೊಮ್ಮೆ ಅಪೂರ್ಣ ಅಥವಾ ಹಳೆಯ ಡೇಟಾ ಆಧರಿಸಿರಬಹುದು. ಅಂತಹ ನಿರ್ಧಾರ ತೆಗೆದುಕೊಳ್ಳುವ ಮೊದಲು ತಜ್ಞರ ಸಲಹೆ ತುಂಬಾನೇ ಮುಖ್ಯವಾಗಿರುತ್ತದೆ..
ಅಪಾಯಕಾರಿ, ಹಿಂಸಾತ್ಮಕ ಮಾಹಿತಿ ಬೇಡ
ಉದಾಹರಣೆಗೆ ಬಾಂಬ್ ತಯಾರಿಸುವುದು ಹೇಗೆ ಎಂಬಂತಹ ಪ್ರಶ್ನೆಗಳನ್ನು ಕೇಳಬಾರದು. ಅಂತಹ ಮಾಹಿತಿ ಕೇಳಿದ ತಕ್ಷಣ ಅದು ತಿರಸ್ಕರಿಸುತ್ತದೆ. ಈ ಟೂಲ್ ಸುರಕ್ಷತೆ ಮತ್ತು ನೀತಿಶಾಸ್ತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತದೆ. ಇದು ಹಿಂಸಾತ್ಮಕ ಅಥವಾ ಕಾನೂನುಬಾಹಿರ ಮಾಹಿತಿಯನ್ನು ನೀಡುವುದಿಲ್ಲ.
ChatGPT ಎಲ್ಲಿ ಸಹಾಯ ಮಾಡಬಹುದು?
ಕೆಲವು ಮಿತಿಗಳ ಹೊರತಾಗಿಯೂ ಪ್ರಯಾಣ ಯೋಜನೆಗಳನ್ನು ರೂಪಿಸುವುದು. ಹೊಸ ನಗರದ ಬಗ್ಗೆ ಮಾಹಿತಿ ಪಡೆಯುವುದು. ಅಧ್ಯಯನಕ್ಕೆ ಸಹಾಯ ChatGPT ಪಡೆಯಬಹುದು. ಅದು ವರ್ಚುವಲ್ ಶಿಕ್ಷಕರಂತೆ ಕಾರ್ಯನಿರ್ವಹಿಸುತ್ತದೆ. ಇದು ನಿಮಗೆ ವಿಷಯಗಳನ್ನು ವಿವರಿಸಬಹುದು. ಪ್ರಶ್ನೆಗಳನ್ನು ರೂಪಿಸಬಹುದು. ಇದು ನಿಮ್ಮ ಉತ್ತರಗಳನ್ನು ಸಹ ವಿಶ್ಲೇಷಿಸಬಹುದು. ನಿಷೇಧಿತ ಪಟ್ಟಿಯಲ್ಲಿರುವ ವಿಷಯಗಳನ್ನು ನೀವು ಕೇಳಿದರೆ ತೊಂದರೆಗೆ ಸಿಲುಕಬಹುದು. ಹುಷಾರಾಗಿರಿ!
ಇದನ್ನೂ ಓದಿ: ಟೆಸ್ಲಾ ಹೊಸ ಚಮತ್ಕಾರ.. ಚಾಲಕನಿಲ್ಲದೇ 30 ನಿಮಿಷ ನಗರ ಸುತ್ತಿ ಗ್ರಾಹಕನ ಮನೆ ತಲುಪಿದ ಟೆಸ್ಲಾ ಕಾರು..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ