newsfirstkannada.com

ಇನ್ಸ್​ಸ್ಟಾದಲ್ಲಿ ವಿಡಿಯೋ ಬೇಕಾ; ಪ್ರಜ್ವಲ್​ರದ್ದು ಎನ್ನಲಾದ ವಿಡಿಯೋ ಕಳಿಸಿ ಕಿಡಿಗೇಡಿಗಳಿಂದ ಹಣಕ್ಕೆ ಡಿಮ್ಯಾಂಡ್!

Share :

Published June 6, 2024 at 6:27am

Update June 6, 2024 at 6:30am

    ಹಣಕ್ಕಾಗಿ ವಿಡಿಯೋ ದಂಧೆಗಿಳಿದಿರುವ ಕೆಲ ಕಿಡಿಗೇಡಿಗಳು

    ಫೇಮಸ್​ ನಟಿಯರ ಫೋಟೋ ಬಳಸಿ ಮಾಡ್ತಿದ್ದಾರೆ ದಂಧೆ

    ಆ ವಿಡೀಯೋಗಳನ್ನ ಪಡೆಯಲು ಮುಗಿಬಿದ್ದಿರುವ ಕಾಮುಕರು

ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಾಯಿದೆ. ಅತ್ತ ಪೆನ್​ಡ್ರೈವ್​ ಸದ್ದು ಜೋರಾಗ್ತಾಯಿದ್ದಂತೆ​ ಇತ್ತ, ಪ್ರಜ್ವಲ್​ ನಾಪತ್ತೆ ಆಗಿದ್ರು. ಇದೀಗ ಮತ್ತೆ ಭಾರತಕ್ಕೆ ಮರಳಿದ್ದು ಎಸ್​ಐಟಿ ಕೈಯಲ್ಲಿ ಬಂಧಿಯಾಗಿದ್ದಾರೆ. ಆದ್ರೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ವೀಡಿಯೋ ಬೇಕಾ ಡಿಎಂ (ಡೈರೆಕ್ಟ್ ಮೆಜೇಜ್) ಮಾಡಿ ಎಂಬ ಹೊಸ ಹಸಿಬಿಸಿ ದಂಧೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ರಾಜಾ ರಾಣಿ ಶೋಗೆ ಮತ್ತಷ್ಟು ಮೆರಗು.. ಬಿಗ್​ಬಾಸ್​ ವಿನಯ್​ ಗೌಡ್​ ಸೇರಿ ಯಾರೆಲ್ಲಾ ಇದ್ದಾರೆ?

  • ಪ್ರಜ್ವಲ್ ರೇವಣ್ಣನ ಎಲ್ಲಾ ವಿಡೀಯೋಗಳಿವೆ
  • ಡಿಎಂ ಮಾಡುವುದರ ಜೊತೆಗೆ ನಮ್ಮ ಪೇಜ್ ಲೈಕ್ ಮಾಡಿ
  • ಪ್ರಜ್ವಲ್​ ವಿಡಿಯೋ ಬೇಕಿದ್ರೆ ಈಗ್ಲೇ ಡಿಎಂ ಮಾಡಿ ಜೊತೆಗೆ ನಮ್ಮ ಖಾತೆಗೆ ಹಣ ಕಳಿಸಿ

ಹೀಗೊಂದು ಪೋಸ್ಟ್​​ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಟ್ರೆಂಡ್​​ನಲ್ಲಿದೆ. ಒಂದು ಕಡೆ ಎಸ್​ಐಟಿ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಆರೋಪಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣರನ್ನ ತೀವ್ರ ವಿಚಾರಣೆ, ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ತೊಡಗಿದ್ರೆ, ಇತ್ತ ಕಿಡಿಗೇಡಿಗಳು ಪ್ರಜ್ವಲ್​ ರೇವಣ್ಣ ಹೆಸರನ್ನ ಬಳಸಿಕೊಂಡು ದಂಧೆಗಿಳಿದಿದ್ದಾರೆ. ಇಲ್ಲೊಂದು ವಿಚಾರವನ್ನ ನಾವು ಪ್ರಸ್ತಾಪಿಸಲೇಬೇಕು. ಸಂತ್ರಸ್ತೆಯರ ಮಾನಹಾನಿಯಾಗಬಾರದು ಎಂಬ ಕಾರಣಕ್ಕೆ ಎಸ್​ಐಟಿ ಅಶ್ಲೀಲ ವಿಡಿಯೋ ಹಂಚಿಕೆ ಮಾಡದಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಹಂಚಿಕೆ ಮಾಡಿದವರನ್ನ ಅರೆಸ್ಟ್​ ಕೂಡ ಮಾಡಿದೆ. ಆದ್ರೆ, ಇಷ್ಟಾದ್ರೂ ಬುದ್ಧಿ ಕಲಿಯದ ಕೆಲವರು ಇದನ್ನೇ ಹಣ ಗಳಿಸುವ ದಂಧೆ ಮಾಡ್ಕೊಂಡಿದ್ದಾರೆ.

ಲೈಕ್ಸ್​ ಹಾಗೂ ವೀವ್ಸ್​ ಹಣಕ್ಕಾಗಿ ಪ್ರಜ್ವಲ್​ ರೇವಣ್ಣರದ್ದು ಎನ್ನಲಾದ ವಿಡೀಯೋ ಮಾರಾಟ ಮಾಡ್ತಿದ್ದಾರೆ. ಇದಕ್ಕಾಗಿ ಸೋಶಿಯಲ್​ ಮೀಡಿಯಾವನ್ನು ಬಳಸಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತ್ರಸ್ತೆಯರ ಫೊಟೋ ಬಳಸಿ, ತೆಲುಗು ನಾಯಕ ನಟಿಯರ ಫೋಟೋ ಬಳಸಿ ವಿಡಿಯೋ ಇದೆ. ನಿಮಗೆ ಆ ವಿಡಿಯೋ ಬೇಕಾದರೇ ಡಿಎಂ ಮಾಡಿ ಅಂತ ನೀಚ ಕೃತ್ಯ ನಡೆಸ್ತಿದ್ದಾರೆ. ವಿಪರ್ಯಾಸ ಅಂದ್ರೆ, ಕಿಡಿಗೇಡಿಗಳು ವಿಡಿಯೋಗಳನ್ನ ಹಣಕ್ಕಾಗಿ, ಲೈಕ್​ಗಾಗಿ ಬಳಕೆ ಮಾಡ್ತಾಯಿದ್ರೆ, ಇತ್ತ, ಪ್ರಜ್ವಲ್​ರದ್ದು ಎನ್ನಲಾದ ವಿಡಿಯೋ ಪಡೆಯಲು ಕಾಮುಕರು ಕೂಡ ಮುಗಿಬಿದ್ದಾರೆ. ಸದ್ಯ, ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಸ್​ಸ್ಟಾದಲ್ಲಿ ವಿಡಿಯೋ ಬೇಕಾ; ಪ್ರಜ್ವಲ್​ರದ್ದು ಎನ್ನಲಾದ ವಿಡಿಯೋ ಕಳಿಸಿ ಕಿಡಿಗೇಡಿಗಳಿಂದ ಹಣಕ್ಕೆ ಡಿಮ್ಯಾಂಡ್!

https://newsfirstlive.com/wp-content/uploads/2024/06/insta.jpg

Load More