ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಬಿಗ್ ಶಾಕ್​.. ದಿಢೀರ್ ಸೀರಿಯಲ್​ನಿಂದ ಆಚೆ ಬಂದ ಮತ್ತೊಬ್ಬ ಸ್ಟಾರ್‌ ನಟಿ!

author-image
Veena Gangani
Updated On
1000 ಸಂಚಿಕೆ ಪೂರೈಸುತ್ತಿದ್ದಂತೆ ವೀಕ್ಷಕರಿಗೆ ಶಾಕಿಂಗ್ ಸುದ್ದಿ; ಪುಟ್ಟಕ್ಕನ ಮಕ್ಕಳು ಮುಕ್ತಾಯ ಆಗುತ್ತಾ?
Advertisment
  • ಪುಟ್ಟಕ್ಕನ ಮಕ್ಕಳು ಸೀರಿಯಲ್​ ವೀಕ್ಷಕರಿಗೆ ಬಿಗ್​ ಶಾಕ್
  • ಸ್ನೇಹಾ ಪಾತ್ರಕ್ಕೆ ಜೀವ ತುಂಬಲು ಬಂದ ಮತ್ತೊಬ್ಬ ನಟಿ
  • ಸೀರಿಯಲ್​ನಿಂದ ಆಚೆ ಬಂದಿದ್ದೇಕೆ ಅಪೂರ್ವ ನಾಗರಾಜ್?

ಪುಟ್ಟಕ್ಕನ ಮಕ್ಕಳು ಸೀರಿಯಲ್​ ವೀಕ್ಷಕರಿಗೆ ಮತ್ತೊಂದು ಶಾಕ್​ ಎದುರಾಗಿದೆ. ಈಗಾಗಲೇ ಸ್ನೇಹಾ ಪಾತ್ರ ಮುಕ್ತಾಯಗೊಂಡು ಬಹಳ ದಿನಗಳು ಕಳೆದು ಹೋಗಿದೆ. ಆದ್ರೆ, ಡಿಸಿ ಸ್ನೇಹಾ ಸಾಯೋ ಮೊದಲು ಅಂಗಾಗ ದಾನ ಮಾಡಿರುತ್ತಾಳೆ. ಸ್ನೇಹಾಳ ಹೃದಯವನ್ನ ಸಾವು ಬದುಕಿನ ನಡುವೆ ಹೊರಾಡುತ್ತಿದ್ದ ಮತ್ತೊಂದು ಜೀವಕ್ಕೆ ಕಸಿ ಮಾಡಲಾಯ್ತು. ಆ ಹೃದಯವನ್ನ ಪಡೆದುಕೊಂಡು ಪುಟ್ಟಕನ ಮನೆಯಲ್ಲೇ ವಾಸಿಸುತ್ತಿದ್ದಳು ಸ್ನೇಹ.

ಇದನ್ನೂ ಓದಿ:ರಾಮಾಚಾರಿ ಸೀರಿಯಲ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್; ​ನಟಿ ದೇವಿಕಾ ಭಟ್ ಸೀರಿಯಲ್ ಬಿಡೋದಕ್ಕೆ ಕಾರಣ ಇದೇನಾ?

publive-image

ಇದೀಗ ಡಿಸಿ ಸ್ನೇಹಾಳ ಹೃದಯವನ್ನು ಪಡೆದುಕೊಂಡು ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್​ ಸೀರಿಯಲ್​ನಿಂದ ಆಚೆ ಬಂದಿದ್ದಾರೆ. ಹೌದು, ಜೀ ಕನ್ನಡ ರಿಲೀಸ್​ ಮಾಡಿದ ಹೊರ ಪ್ರೋಮೋದಲ್ಲಿ ಅಪೂರ್ವ ನಾಗರಾಜ್ ಬದಲು ಮತ್ತೊಬ್ಬ ನಟಿಯ ಎಂಟ್ರಿಯಾಗಿದೆ.

publive-image

ಈ ಹಿಂದೆ ಸ್ನೇಹಾ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಅಪೂರ್ವ ನಾಗರಾಜ್ ದಿಢೀರ್​ ಅಂತ ಆಚೆ ಬಂದಿದ್ದು ಏಕೆ ಅಂತ ತಿಳಿದು ಬಂದಿಲ್ಲ. ಆದ್ರೆ, ಅಪೂರ್ವ ನಾಗರಾಜ್ ಪಾತ್ರಕ್ಕೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ರಾಮಾಚಾರಿ ಸೀರಿಯಲ್​ ನಟಿ ಆಗಮನವಾಗಿದೆ. ಹೌದು, ರಾಮಾಚಾರಿ ಸೀರಿಯಲ್​ನಲ್ಲಿ ಕಿಟ್ಟಿ ಹೆಂಡತಿ ರುಕ್ಮಿಣಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಇದೀಗ ರಾಮಾಚಾರಿ ಸೀರಿಯಲ್​ ನಟಿ ವಿದ್ಯಾ ರಾಜ್ ಅವರು ಅಚ್ಚರಿ ಎಂಬಂತೆ ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

publive-image

ನಟಿ ವಿದ್ಯಾ ರಾಜ್ ಅವರು ಕನ್ನಡ ಹಾಗೂ ತೆಲುಗಿನ ಸೀರಿಯಲ್‌ಗಳಲ್ಲಿ ಮಿಂಚಿದ್ದಾರೆ. ಈ ಹಿಂದೆ ಕನ್ನಡದ 'ಕನ್ಯಾದಾನ' ಸೀರಿಯಲ್‌ನಲ್ಲಿ ನಟಿ ವಿದ್ಯಾ ರಾಜ್ ಅಭಿನಯಿಸಿದ್ದರು. ಕನ್ನಡದ ನಮಸ್ತೆ ಘೋಸ್ಟ್, ಬಹದ್ದೂರ್ ಗಂಡು ಚಿತ್ರಗಳಲ್ಲಿ ವಿದ್ಯಾ ರಾಜ್ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment