ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ

author-image
Veena Gangani
Updated On
ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಬಿಗ್​ ಶಾಕ್​.. ಇಂಟರ್ವ್ಯೂಗೂ ಎಂಟ್ರಿ ಕೊಟ್ಟ AI ತಂತ್ರಜ್ಞಾನ
Advertisment
  • ಅಭ್ಯರ್ಥಿಗಳು AI ಜೊತೆ ಎಷ್ಟು ಕೆಲಸ ಮಾಡಬಹುದಾಗಿದೆ?
  • ಈ AI ತಂತ್ರಜ್ಞಾನದಿಂದ ಏನೆಲ್ಲಾ ಬದಲಾವಣೆ ಆಗಲಿದೆ?
  • AI​ ಇಂದಿನ ಸಾಫ್ಟ್‌ವೇರ್ ಅಭಿವೃದ್ಧಿಯ ಅವಿಭಾಜ್ಯ ಅಂಗ

ಇದು ಎಐ ಜಮಾನ. ಕಂಪನಿಗಳಲ್ಲಿ ಈಗ ಎಐ ಸಹಾಯದಿಂದ ಕೋಡಿಂಗ್ ಸಂದರ್ಶನ ಪ್ರಕ್ರಿಯೆ ಶುರು ಮಾಡಲಾಗಿದೆ ಅನ್ನೋದು ಶಾಕಿಂಗ್​ ವಿಚಾರ. ಅದರಲ್ಲೂ ಕೆಲ ಭಾರತೀಯ ಸಂಸ್ಥೆಗಳು ಈ ಹೊಸತನದ ಪರಿಪಾಠವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿವೆ.

ಇದನ್ನೂ ಓದಿ:ಅಂತಿಂಥ ಹೆಣ್ಣು ಇವಳಲ್ಲ..! ರೈಲು ಹಳಿ ಮೇಲೆ ಕಾರು ಓಡಿಸಿ ದಿಗಿಲು ಹುಟ್ಟಿಸಿದ ಲೇಡಿ -VIDEO

publive-image

Canva ಅಂತೂ ಎಂಜಿನಿಯರಿಂಗ್ ಅಭ್ಯರ್ಥಿಗಳಿಗೆ ತಾಂತ್ರಿಕ ಸಂದರ್ಶನದ ವೇಳೆಯಲ್ಲಿ Copilot, Cursor ಮತ್ತು Replit Cloud ಸೇರಿದಂತೆ ವಿವಿಧ ಎಐ ಪರಿಕರಗಳನ್ನು ಬಳಸಲು ಪ್ರೋತ್ಸಾಹ ನೀಡುತ್ತಿದೆ. ಇದರಿಂದ ನೇಮಕಾತಿ, ಸಮಯ ಉಳಿತಾಯ ಮತ್ತು ಆಫೀಸ್​ನಲ್ಲಿ ಹೆಚ್‌ಆರ್‌ಗಳ ಕೆಲಸದ ಒತ್ತಡ ಕಡಿಮೆ ಆಗಲಿದೆ. ಜತೆಗೆ ಹಲವರ ಕೆಲಸಗಳು ಹೋಗಲಿದೆ ಎನ್ನುವುದು ಆಘಾತಕಾರಿ ಸುದ್ದಿ. ಇನ್ನೂ, ನಾವು ಇದರ ವಿರುದ್ಧ ಹೋರಾಡಲು ಆಗೋದಿಲ್ಲ. ಬದಲಿಗೆ AI ಅನ್ನು ಹೇಗೆ ಪಾರದರ್ಶಕತೆಯಿಂದ ಬಳಸಬೇಕು ಅನ್ನೋದನ್ನು ಕಲಿಯಬೇಕು. ಅಭ್ಯರ್ಥಿಗಳು AI ಜೊತೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಅಳೆಯುವುದು ನಮ್ಮ ಉದ್ದೇಶ ಎಂದು Canva ತಿಳಿಸಿದೆ.

ಅಭ್ಯರ್ಥಿಗಳು ನೈಜ ಕೋಡಿಂಗ್ ಪರಿಸರದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ ಎಂದು ಅರ್ಥ ಮಾಡಿಕೊಳ್ಳಲು ಎಐ ಸಖತ್​​ ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. AI ಟೂಲ್ಸ್​​ ಇಂದಿನ ಸಾಫ್ಟ್‌ವೇರ್ ಅಭಿವೃದ್ಧಿಯ ಅವಿಭಾಜ್ಯ ಅಂಗ. ಸಂದರ್ಶನಗಳಲ್ಲೂ ಅವುಗಳ ಬಳಕೆ ಸಾಮಾನ್ಯ. ಇದು ನೇಮಕಾತಿ ಪ್ರಕ್ರಿಯೆಗಿಂತಲೂ ವೇಗ ಮತ್ತು ಸಮರ್ಥವಾಗಿ ಕೆಲಸ ಮಾಡಲಿದೆ ಎಂದಿದೆ Canva. ಇಂದಿನ ಎಂಜಿನಿಯರಿಂಗ್ ಕಾರ್ಯ ಬಹುಪಾಲು ಕೋಡ್ ಬರೆಯುವುದಕ್ಕಿಂತ ಹೆಚ್ಚು ಕೋಡ್ ಓದುವುದು ಮತ್ತು ಅನಲೈಸ್​ ಮಾಡುವುದೇ ಆಗಿದೆ. AI ಟೂಲ್ಸ್​ ಆರಂಭಿಕ ಕೋಡ್ ಅನ್ನು ಬರೆಯಲು ಸಹಾಯ ಮಾಡುವಷ್ಟು ಶಕ್ತಿಶಾಲಿಗಳಾಗಿವೆ. ಆ ಕೋಡ್ ಅನ್ನು ಓದಿ, ಅರ್ಥಮಾಡಿಕೊಂಡು ಸುಧಾರಿಸುವಷ್ಟು ಸಾಮರ್ಥ್ಯವೂ ಹೊಂದಿದೆ.

Canva ಅಷ್ಟೇ ಅಲ್ಲ, Mastercard ಕೂಡ ತನ್ನ ಅಧಿಕೃತ ಉದ್ಯೋಗ ಪುಟದಲ್ಲಿ ಕೆಲವು ನಿರ್ದಿಷ್ಟ ಹುದ್ದೆಗಳಿಗೆ ತಾಂತ್ರಿಕ ಮೌಲ್ಯಮಾಪನದ ಭಾಗವಾಗಿ ಎಐ ಉಪಕರಣಗಳನ್ನು ಬಳಸಲು ಅವಕಾಶವಿದೆ ಎಂದು ತಿಳಿಸಿದೆ. ಸಂದರ್ಶಕರಿಗೆ ಸಹ ಅನುಕೂಲವಾಗುವಂತೆ AI ಉಪಕರಣಗಳ ಸಮರ್ಪಕ ಬಳಕೆಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಇದು ಎಐ ಯುಗದಲ್ಲಿ ನಡೆಯುತ್ತಿರುವ ಉದ್ಯೋಗ ಶೋಧನೆಯ ಹೊಸ ಮುಖವಾಗಿದೆ. ಅಲ್ಲಿ ಆಳವಾದ ಜ್ಞಾನ ಹಾಗೂ ತಂತ್ರಜ್ಞಾನ ಸಂಯೋಜನೆಯು ಕೇವಲ ಉಪಕರಣ ಬಳಕೆಯಿಂದ ಮೀರಿ, ನೈಜ ಸಾಮರ್ಥ್ಯಗಳ ನಿರ್ವಹಣೆಯವರೆಗೂ ಪ್ರಗತಿಯಾಗುತ್ತಿದೆ.

ಯಾವುದೇ ಹುದ್ದೆಯಾಗಲಿ ಅಭ್ಯರ್ಥಿಗಳಿಗೆ ತಾಂತ್ರಿಕ ಸಂದರ್ಶನಗಳಲ್ಲಿ ChatGPT ಮುಂತಾದ ಎಐ ಪರಿಕರಗಳನ್ನು ಬಳಸಲು ಅವಕಾಶ ನೀಡಲಾಗಿದೆ. ‘ಪ್ರಾಂಪ್ಟಿಂಗ್’ ಎಂಬುದು ಈಗ ಒಂದು ಪ್ರತ್ಯೇಕ ಕೌಶಲ್ಯ. AIಗೆ ಸರಿಯಾದ ಮತ್ತು ಪರಿಣಾಮಕಾರಿ ಪ್ರಶ್ನೆಗಳನ್ನು ಕೇಳುವುದು ಕ್ರಿಯೇಟಿವಿಟಿ ಕೋಡಿಂಗ್‌ಗಿಂತ ಕಡಿಮೆ ಅಲ್ಲ. ಆದರೆ ಇದು ಅಲ್ಲಿಗೆ ಮುಗಿಯುವುದಿಲ್ಲ. ಉತ್ತಮ ಅಭ್ಯರ್ಥಿಗಳು ಕೇವಲ ಕೋಡ್ ರಚನೆ ಮಾಡದೆ, ಅದರ ಸುರಕ್ಷತೆ, ಸಂಪೂರ್ಣತೆ, ಮತ್ತು ಗುಣಮಟ್ಟವನ್ನು ವಿಶ್ಲೇಷಿಸುತ್ತಾರೆ. ಅವರು ಸಮಸ್ಯೆಗಳನ್ನು ಮುಂಚಿತವಾಗಿ ಅಂದಾಜಿಸುತ್ತಾರೆ ಮತ್ತು ಫಲಿತಾಂಶ ಸುಧಾರಣೆಗೆ ಎಐ ಬಳಸುತ್ತಾರೆ. ಈ ನೈಪುಣ್ಯತೆಗೆಗಳು ಎಂಜಿನಿಯರ್‌ಗಳಿಗೆ ಮಾತ್ರವಲ್ಲ, ಉತ್ಪನ್ನ ನಿರ್ವಹಣೆ ಮತ್ತು ಡಾಕ್ಯುಮೆಂಟೇಶನ್‌ಗೂ ಅನ್ವಯಿಸುತ್ತವೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ನ್ಯೂಯಾರ್ಕ್​ ಮೇಯರ್ ಎಲೆಕ್ಷನ್​​ನಲ್ಲಿ ಭಾರತ ಮೂಲದ ಮಮ್ದಾನಿಗೆ ಗೆಲುವು.. ಕಂಗನಾ ಆಕ್ರೋಶ, ಹೇಳಿದ್ದೇನು..?

ಮೂಲಭೂತ ಕೋಡಿಂಗ್ ಜ್ಞಾನ ಮತ್ತು GenAI ಉಪಕರಣಗಳ ಸಮರ್ಪಕ ಬಳಕೆ ಎರಡನ್ನೂ ಮೌಲ್ಯಮಾಪನ ಮಾಡುವಂತೆ ಸಂದರ್ಶನ ಪ್ರಕ್ರಿಯೆಗಳೂ ಬದಲಾಗಬೇಕು. ಈ ದ್ವಂದ್ವತೆಯನ್ನು ಪ್ರತಿಬಿಂಬಿಸುವ ನವೀಕೃತ ಸಂದರ್ಶನ ಶೈಲಿಗಳ ಅಗತ್ಯ ಈಗ ಕೇವಲ ಆಯ್ಕೆ ಅಲ್ಲ, ಅವಶ್ಯಕತೆ ಎನ್ನಬಹುದು. ಇದು ಕೆಲವರ ಕೆಲಸಕ್ಕೂ ಕುತ್ತು ತರಬಹುದು. ಅಷ್ಟೇ ಅಲ್ಲ ಎಐ ಯಾವ ಪ್ರಶ್ನೆ ಬೇಕಾದ್ರೂ ಕೇಳಬಹುದು. ಇದರಿಂದ ಇಂಜಿನಿಯರ್ಸ್​​​ ಹೇಗೆ ಎಐ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ನೋಡಬೇಕು. ಅಭ್ಯರ್ಥಿಗಳು AI ಕೇಳಿದ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರ ನೀಡದಿದ್ರೆ ಕೆಲಸ ಸಿಗೋದು ಡೌಟ್​​. ಇದರಿಂದ ಇಂಜಿನಿಯರ್ಸ್​ಗೆ ಅವಕಾಶಗಳೇ ಸಿಗದೇ ಹೋಗಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment