/newsfirstlive-kannada/media/post_attachments/wp-content/uploads/2024/07/women-sleep.jpg)
ಸೋಷಿಯಲ್ ಮಿಡಿಯಾದ ಈ ಕಾಲಘಟ್ಟದಲ್ಲಿ ಒಂದಿಲ್ಲೊಂದು ಹೊಸ ಸಂಗತಿಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಯಾವುದಾದ್ರೂ ಹೊಸ ಪ್ರಯತ್ನ, ಹೊಸ ಸಲಹೆ ಹೀಗೆ ಎಲ್ಲವೂ ಅಂದ್ರೆ ಎಲ್ಲವೂ ಟ್ರೆಂಡ್ ಆಗುತ್ತಲೇ ದೈನಂದಿನ ಚಟುವಟಿಕೆಯ ಒಂದು ಭಾಗವಾಗುತ್ತಲೇ ಸಾಗುತ್ತವೆ. ಅದೇ ರೀತಿ ಈಗ ಶುರುವಾಗಿದೆ ಒಂದು ಟ್ರೆಂಡ್ ಅದು ಸ್ಲೀಪಿಂಗ್ ಟ್ರೆಂಡ್, ಮಲಗುವ ಮುನ್ನ ತಮ್ಮ ಬಾಯಿಗೆ ಟೇಪ್ ಅಂಟಿಸಿಕೊಂಡು ನಿದ್ರಿಸುವ ಹೊಸ ನಿದ್ರಾ ವಿಧಾನ ಈಗ ಶುರುವಾಗಿದೆ. ಇದರಿಂದ ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಅನುಕೂಲಗಳಿವೆ. ಹಾಗಿದ್ರೆ ಏನಿದು ಸ್ಲೀಪಿಂಗ್ ಟ್ರೆಂಡ್. ಇತ್ತೀಚೆಗೆ ಶುರುವಾಗಿದ್ದು ಹೇಗೆ ಅನ್ನೋದನ್ನ ನೋಡ್ತಾ ಹೋಗುವುದಾದ್ರೆ.
ಮಲಗಿದಾಗ ಗೊರಕೆ ಹೊಡೆಯುವುದಕ್ಕೆ ಬ್ರೇಕ್ ಹಾಕಲು ಹಾಗೂ ಕೇವಲ ಮೂಗಿನಿಂದ ಮಾತ್ರ ಉಸಿರಾಡುವ ಮೂಲಕ ಉಸಿರಾಟದ ಸಮಸ್ಯೆಯನ್ನು ತಡೆಯಲು ಆರೋಗ್ಯ ವಲಯದಲ್ಲಿ ಇಂತಹದೊಂದು ಟ್ರೆಂಡ್ ಶುರುವಾಗಿದೆ. ಮಲಗಲು ಹೋಗುವ ಮುನ್ನ ಬಾಯಿಗೆ ಅಂಟಿನ ಟೇಪ್ ಹಾಕಿಕೊಂಡು ನಿದ್ರಿಸಿದರೆ ನಿಮ್ಮ ನಿದ್ದೆಯ ಗುಣಮಟ್ಟವು ಉತ್ತಮವಾಗುತ್ತದೆ ಎನ್ನುತ್ತಾರೆ ಏಷಿಯನ್ ಹಾಸ್ಪಿಟಲ್​ನ ವೈದ್ಯರಾದ ಡಾ ಮಾನವ್ ಮಂಚಂಡಾ. ಉತ್ತಮ ಗುಣಮಟ್ಟದ ಟೇಪ್​ನ್ನು ನಿಮ್ಮ ಬಾಯಿಗೆ ಅಂಟಿಸಿಕೊಂಡು ನಿತ್ಯವೂ ನೀವು ನಿದ್ದೆ ಮಾಡಿದ್ರೆ, ನಿಮಗಿರುವ ಉಸಿರಾಟದ ತೊಂದರೆ, ನಿದ್ರಾಹೀನತೆ ಹಾಗೂ ಗೊರಕೆ ಹೊಡೆಯುವ ಸಮಸ್ಯೆಯನ್ನು ದೂರಗೊಳಿಸಬಹುದು ಎಂದು ಹೇಳಿದ್ದಾರೆ
/newsfirstlive-kannada/media/post_attachments/wp-content/uploads/2024/07/taping-mouth1.jpg)
ಎಲ್ಲರೂ ಪ್ರಯತ್ನಿಸುವ ಟ್ರೆಂಡ್ ಇದಲ್ಲ.
ಇನ್ನೂ ಈ ಒಂದು ಟ್ರೆಂಡ್​ನ್ನು ಎಲ್ಲರೂ ಪ್ರಯತ್ನಿಸಲು ಹೋಗಬಾರದು. ಕಿವಿಯ ಇನ್ಫೆಕ್ಷನ್​ನಿಂದ ಬಳಲುವವರು, ಶೀತವಾದಾಗ ಹಾಗೂ ಒಡೆದ ತುಟಿಗಳಿದ್ದಾಗ ಈ ಒಂದು ಟ್ರೆಂಡ್​ನ ಫಾಲೋವ್ ಮಾಡುವುದರಿಂದ ಅನಾನಕೂಲಗಳೇ ಜಾಸ್ತಿ ಇವೆ ಎಂದು ಪರಿಣತ ವೈದ್ಯರು ಹೇಳುತ್ತಾರೆ. ನಿಜಕ್ಕೂ ನಿದ್ದೆಯ ಗುಣಮಟ್ಟ ಉತ್ತಮಪಡಿಸುತ್ತಾ ಈ ಟ್ರೆಂಡ್
ಇದನ್ನೂ ಓದಿ: ಸದೃಢ ಆರೋಗ್ಯಕ್ಕೆ ಬೇಕು ಸರಿಯಾದ ನಿದ್ರೆ: ಯಾವ ವಯಸ್ಸಲ್ಲಿ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ..?
ಆಕಾಶ್ ಹೆಲ್ತ್​ಕೇರ್​​ನ ಡಾ. ಆಕಾಶ್ ಭಾರದ್ವಾಜ್​ ಅವರು ಹೇಳುವ ಪ್ರಕಾರ ಇದು ಕ್ಲಿನಿಕಲ್ಲಿ ಸಾಬೀತುಗೊಂಡಿಲ್ಲವಾದರೂ ಕೂಡ ಬಾಯಿಯಿಂದ ಉಸಿರಾಡುವುದಕ್ಕಿಂತ, ಕೇವಲ ಮೂಗಿನಿಂದ ಉಸಿರಾಟ ಮಾಡುವುದರಿಂದ ಅನೇಕ ಲಾಭಗಳಿವೆ. ಈಗಾಗಲೇ ಹೇಳಿದಂತ ಸಮಸ್ಯೆಗಳಿಂದ ನಾವು ಪಾರು ಆಗಬಹುದು ಎಂದು ಹೇಳಿದ್ದಾರೆ. ಈ ಒಂದು ಸ್ಲೀಪಿ ಟ್ರೆಂಡ್ ಮೂಲಕ ನಾವು ಬಾಯಿಯ ದುರ್ಗವನ್ನು ದೂರಗೊಳಿಸಬಹುದು ಅದರ ಜೊತೆ ಜೊತೆಗೆ ಉತ್ತಮ ನಿದ್ದೆಯನ್ನು ಪಡೆಯಲು ಉತ್ತಮ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us