ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ಅಂತಾ ಲಂಡನ್ ವಿಮಾನ ಹತ್ತಿದ್ದಳು.. ಕೊನೆಯ ವಿಡಿಯೋ

author-image
Ganesh
ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ಅಂತಾ ಲಂಡನ್ ವಿಮಾನ ಹತ್ತಿದ್ದಳು.. ಕೊನೆಯ ವಿಡಿಯೋ
Advertisment
  • ವಿಮಾನ ದುರಂತದಲ್ಲಿ ಜೀವ ಕಳೆದುಕೊಂಡ ವಧು
  • ಮೊದಲ ಬಾರಿ ಪತಿಯ ಭೇಟಿಯಾಗಲು ಹೊಟಿದ್ದಳು
  • 242 ಪ್ರಯಾಣಿಕರಲ್ಲಿ ಓರ್ವ ಮಾತ್ರ ಬದುಕಿದ್ದಾರೆ

ಸಪ್ತಸಾಗರದಾಚೆಯಿದ್ದ ಗಂಡನ ಭೇಟಿಯಾಗಲು ವಿಮಾನ ಹತ್ತಿದ್ದ ನವವಧು ವಿಮಾನ ದುರಂತದಲ್ಲಿ ಕಣ್ಮುಚ್ಚಿದ್ದಾಳೆ. ರಾಜಸ್ಥಾನದ ಬಲೋತಾರಾ ಜಿಲ್ಲೆಯ ಅರಬಾ ಗ್ರಾಮದ ನಿವಾಸಿ ಖುಷ್ಬೂ ರಾಜ್​ಪುರೋಹಿತ್ ( Khushboo Rajpurohit) ಎಂಬಾಕೆ ಇದೇ ವರ್ಷದ ಜನವರಿಯಲ್ಲಿ, ಮನ್ಫೂಲ್ ಸಿಂಗ್ ಅನ್ನೋರ ಮದುವೆ ಆಗಿದ್ದರು. ಮದುವೆಯ ನಂತರ ಆಕೆಯ ಪತಿ ಲಂಡನ್​ನಲ್ಲಿ ವ್ಯಾಸಾಂಗ ಮಾಡುತ್ತಿದ್ದರಂತೆ. ಹೀಗಾಗಿ ಪತಿಯನ್ನ ಮೊದಲ ಬಾರಿ ಭೇಟಿಯಾಗಲು ಖುಷ್ಬು ಲಂಡನ್​ ಫ್ಲೈಟ್​ ಹತ್ತಿದ್ದರು..

ಇದನ್ನೂ ಓದಿ: ವಿಜಯ್ ರೂಪಾನಿ ದುರಂತ ಅಂತ್ಯ.. ಶೋಕದಲ್ಲಿ ಮುಳುಗಿದ ಗುಜರಾತ್..

publive-image

ಅಹ್ಮದಾಬಾದ್​ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ 171 ವಿಮಾನ ಟೇಕ್​ಆಫ್ ಆದ ಕೆಲವೇ ನಿಮಿಷಗಳ ನೆಲಕ್ಕುರುಳಿ ಬೆಂಕಿ ಉಗುಳಿತ್ತು. ಈ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದಲ್ಲಿ 10 ಗಂಟೆಗಳ ಪ್ರಯಾಣಕ್ಕಾಗಿ 80-90 ಟನ್‌ಗಳಿಗಿಂತ ಹೆಚ್ಚು ಇಂಧನ ತುಂಬಲಾಗಿತ್ತು. ವಿಮಾನ ಪತನಗೊಂಡ ಕೂಡಲೇ ಅಷ್ಟೂ ಇಂಧನಕ್ಕೆ ಬೆಂಕಿ ತಗುಲಿ ದೊಡ್ಡ ಅನಾಹುತ ಸಂಭವಿಸಿದೆ.

ಖುಷ್ಬೂ ಅವರಂತೆ.. ಯುಕೆಯಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದವರು, ಬಿಸ್ನೆಸ್​​ ಮಾಡಲು ತೆರಳುತ್ತಿದ್ದವರು, ಉದ್ಯೋಗಕ್ಕಾಗಿ ಹೋಗುತ್ತಿದ್ದವರು ಅನೇಕರಿದ್ದರು. ಕನಸುಗಳ ಬುತ್ತಿ ಕಟ್ಟಿ ಲಂಡನ್ ವಿಮಾನ ಹತ್ತಿದವರು ಶಾಶ್ವತವಾಗಿ ಕಣ್ಮುಚ್ಚಿದ್ದಾರೆ. ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಇದ್ದರು. ಅವರಲ್ಲಿ ಓರ್ವ ಮಾತ್ರ ಬದುಕುಳಿದಿದ್ದಾರೆ.

ಇದನ್ನೂ ಓದಿ: ‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..

https://twitter.com/Surajrawat097/status/1933191930097160539

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment