Advertisment

ಟಿ20 ವಿಶ್ವಕಪ್​​ ಬಳಿಕ ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್.. ಪಾಂಡ್ಯ, ಸೂರ್ಯ, ಅಯ್ಯರ್​​ಗೆ ಬಿಗ್ ಶಾಕ್..!

author-image
Ganesh
Updated On
ಟಿ20 ವಿಶ್ವಕಪ್​​ ಬಳಿಕ ಟೀಂ ಇಂಡಿಯಾಗೆ ಹೊಸ ಕ್ಯಾಪ್ಟನ್.. ಪಾಂಡ್ಯ, ಸೂರ್ಯ, ಅಯ್ಯರ್​​ಗೆ ಬಿಗ್ ಶಾಕ್..!
Advertisment
  • ವಿಶ್ವಕಪ್​​ ಬಳಿಕ ರೋಹಿತ್ ಟಿ20 ಕ್ರಿಕೆಟ್ ಆಡೋದು ಡೌಟ್
  • ಹೊಸ ನಾಯಕನ ಹುಡುಕಾಟದಲ್ಲಿ ಬಿಸಿಸಿಐ, ತೀವ್ರ ಕುತೂಹಲ
  • ಈಗಾಗಲೇ ಓರ್ವ ಯಂಗ್​ ಗನ್ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಟಿ20 ವಿಶ್ವಕಪ್ ಆಡುತ್ತಿದೆ. ರೋಹಿತ್ ಶರ್ಮಾ ಮೂರು ಮಾದರಿಯ ಕ್ರಿಕೆಟ್​​ಗೆ ನಾಯಕರಾಗಿದ್ದಾರೆ. ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾಗೆ ನಾಯಕ ಯಾರು ಎಂಬ ಪ್ರಶ್ನೆ ಮೂಡಿದೆ. ವರದಿ ಒಂದರ ಪ್ರಕಾರ ಶುಬ್ಮನ್ ಗಿಲ್​ರನ್ನು ಟೀಂ ಇಂಡಿಯಾದ ನಾಯಕರನ್ನಾಗಿ ಮಾಡಲಾಗುತ್ತಿದೆ ಎನ್ನಲಾಗಿದೆ.

Advertisment

ಇದನ್ನೂ ಓದಿ:ಜೂನ್ 27 ರಂದು 2ನೇ ಸೆಮಿ ಫೈನಲ್.. ಭಾರತದ ಎದುರಾಳಿ ತಂಡ ಯಾವುದು ಗೊತ್ತಾ..?

T20 ವಿಶ್ವಕಪ್ ಮುಗಿದ ನಂತರ ಭಾರತವು ಜಿಂಬಾಬ್ವೆ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಶುಭ್ಮನ್ ಗಿಲ್​ರನ್ನು ಭಾರತದ ನಾಯಕರನ್ನಾಗಿ ಮಾಡಬಹುದು ಎಂದು ವರದಿಯಾಗಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಅಧಿಕೃತ ಸುದ್ದಿ ಹೊರಬಿದ್ದಿಲ್ಲ.
ಟೀಂ ಇಂಡಿಯಾದ ಹಿರಿಯ ಆಟಗಾರರು ಜಿಂಬಾಬ್ವೆ ಪ್ರವಾಸಕ್ಕೆ ತೆರಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಯುವ ಆಟಗಾರನಿಗೆ ಮಾತ್ರ ತಂಡದ ನಾಯಕತ್ವವನ್ನು ನೀಡಬಹುದು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಹಾರ್ದಿಕ್ ಅನುಪಸ್ಥಿತಿಯಲ್ಲಿ, ಸೂರ್ಯಕುಮಾರ್ ಯಾದವ್ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ, ರೋಹಿತ್ ಇಬ್ಬರೂ ಫೇಲ್.. ಜೈಸ್ವಾಲ್ ಕಣಕ್ಕಿಳಿಯುವ ನಿರೀಕ್ಷೆ.. ಕೊಕ್ ಯಾರಿಗೆ?

Advertisment

ಇದೀಗ ಗಿಲ್ ಅವರನ್ನೂ ನಾಯಕರನ್ನಾಗಿ ನೋಡಬಹುದು. ಬಿಸಿಸಿಐ ಇನ್ನೂ ತಂಡವನ್ನೂ ಪ್ರಕಟಿಸಿಲ್ಲ. ಜುಲೈ 6 ರಿಂದ ಪಂದ್ಯಗಳು ಆರಂಭವಾಗಲಿದೆ. ಎರಡನೇ ಪಂದ್ಯವು ಜುಲೈ 7 ರಂದು ನಡೆದ್ರೆ, ಮೂರನೇ ಪಂದ್ಯ ಜುಲೈ 10 ರಂದು ನಡೆಯಲಿದೆ. ನಾಲ್ಕನೇ ಪಂದ್ಯ ಜುಲೈ 13 ರಂದು ಮತ್ತು ಐದನೇ ಪಂದ್ಯ ಜುಲೈ 14 ರಂದು ನಡೆಯಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ:ಭಾರತದ ವಿರುದ್ಧ ಸೋತರೂ ಆಸ್ಟ್ರೇಲಿಯಾಗೆ ಸೆಮಿ ಫೈನಲ್​​ಗೆ ಹೋಗಲು ಇದೆ ಅವಕಾಶ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment