/newsfirstlive-kannada/media/post_attachments/wp-content/uploads/2025/04/Wing-Commander-attack.jpg)
ಕನ್ನಡಿಗನ ಮೇಲೆ ಹಲ್ಲೆ ಮಾಡಿ ಕನ್ನಡ ಮಾತನಾಡಲಿಲ್ಲ ಅಂತ ಹೊಡೆದಿದ್ದಾರೆ ಅಂತ ಕಥೆ ಕಟ್ಟಿದ್ದ ಐಎಎಫ್ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಅಸಲಿ ಬಣ್ಣ ಬಯಲಾಗಿದೆ. ಶಿಲಾದಿತ್ಯ ಬೋಸ್ ಕನ್ನಡಿಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡ್ತಿರುವ ಸಿಸಿಟಿವಿ ದೃಶ್ಯ ಹೊರಬೀಳುತ್ತಿದ್ದಂತೆ ಕನ್ನಡಿಗರು ಸಿಡಿದೆದ್ದಿದ್ದಾರೆ.
ವಿಂಗ್ ಕಮಾಂಡರ್ ಆರೋಪ ಏನು?
ಇದೇನಾ ಕರ್ನಾಟಕದಲ್ಲಿ ಆಗ್ತಿರೋದು.. ನನಗೆ ಕನ್ನಡದ ಮೇಲೆ ನಂಬಿಕೆ ಇದೆ.. ನೈಜ ಸ್ಥಿತಿ ನೋಡಿದ್ರೆ ಕರ್ನಾಟಕ ಹಾಟ್ಲ್ಯಾಂಡ್ ಆಗಿದೆ. ನನಗೆ ನಂಬೋಕೆ ಆಗ್ತಿಲ್ಲ.. ಆ ದೇವರು ಕಾಪಾಡಿದ.. ದೇವರು ಶಕ್ತಿ ಕೊಟ್ಟಿರೋದು ಪ್ರತೀಕಾರ ತೀರಿಸಿಕೊಳ್ಳೋದಕ್ಕಲ್ಲ.. ನಾಳೆ ಇಲ್ಲಿನ ಲಾ ಅಂಡ್ ಆರ್ಡರ್ ನನಗೆ ಖಂಡಿತಾ ಸಹಾಯ ಮಾಡಲ್ಲ -ಶಿಲಾದಿತ್ಯ ಬೋಸ್, ವಿಂಗ್ ಕಮಾಂಡರ್
ವಿಂಗ್​ ಕಮಾಂಡರ್​​ ಶಿಲಾದಿತ್ಯ ಬೋಸ್ ಹಾಗೂ ಆತನ ಸತ್ಯವಂತ ಹೆಂಡ್ತಿ ಹೇಳಿದ್ದನ್ನ ನಿಜ ಅಂತಾ ನಂಬಿದ ಪೊಲೀಸರು, ಕನ್ನಡದ ಯುವಕನ ಮೇಲೆ ಕೇಸ್​ ದಾಖಲಿಸಿದ್ರು. ಆ ಯುವಕನ್ನ ಬಂಧಿಸಿದ್ರು. ಈಗ ಹಿಂದಿ ಆಫೀಸರ್​ ಮಾಡಿರೋ ಸುಳ್ಳಿನ ನಾಟಕ ಸಿಸಿಟಿವಿಯಲ್ಲಿ ಬಯಲಾಗ್ತಿದೆ.
ಇದನ್ನೂ ಓದಿ: ಮುಖದಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ.. ಪರಪ್ಪನ ಅಗ್ರಹಾರ ಸೇರುವಾಗ ಓಂ ಪ್ರಕಾಶ್ ಪತ್ನಿ ಹೇಳಿದ್ದೇನು..?
/newsfirstlive-kannada/media/post_attachments/wp-content/uploads/2025/04/WING.jpg)
ಸತ್ಯ ಏನು..?
ಆರೋಪ ದೃಶ್ಯ 1 : ನೀವೆಲ್ಲಾ DRDO ಜನ್ರು ಅಂತ ಕನ್ನಡದಲ್ಲಿ ಕೆಟ್ಟದಾಗಿ ಏನೋ ನಿಂದಿಸಿದ್ದ
ನಿಜಾಂಶ ದೃಶ್ಯ 1 : ದಡಿದಾಂಡಿಗನಂತೆ ಮುಗಿ ಬಿದ್ದು ಮನ ಬಂದಂತೆ ಹಲ್ಲೆ ಮಾಡಿದ ಅಧಿಕಾರಿ
ಆರೋಪ ದೃಶ್ಯ 2 : ಕೈಯಲ್ಲಿದ್ದ ಕೀನಿಂದ ನನ್ನ ಮುಖಕ್ಕೆ ಪಂಚ್​ ಮಾಡಿದ
ನಿಜಾಂಶ ದೃಶ್ಯ 2 : ಬೂಟ್​ ಕಾಲಿನಿಂದ ಹಿಗ್ಗಾಮುಗ್ಗಾ ಥಳಿಸಿರೋ ಕಮಾಂಡರ್​
ಆರೋಪ ದೃಶ್ಯ 3 : ಘಟನೆ ಆಗ್ತಿರುವಾಗ ಎಲ್ರೂ ನಿಂತು ಕೊಂಡು ನೋಡ್ತಿದ್ರು
ನಿಜಾಂಶ ದೃಶ್ಯ 3 : ಸುತ್ತು ಇದ್ದ ಜನ ತಡೀತಿದ್ರು ಮೇಲೇರಿ ಮೇಲೇರಿ ಬಂದು ಹೊಡೆದ
ಆಗಿದ್ದೇನು..?
- ದೃಶ್ಯ 01 : ಯುವಕ ಹೆಲ್ಮೆಟ್​ ಬಿಚ್ಚೂದಕ್ಕೂ ಮುಂಚೆನೇ ಹಲ್ಲೆ
- ದೃಶ್ಯ 02 : ರಸ್ತೆ ಮೇಲೆ ಫುಟ್​ಬಾಲ್​ನಂತೆ ಯುವಕನಿಗೆ ಥಳಿತ
- ದೃಶ್ಯ 03 : ಹಲ್ಲೆ ಮಾಡಿದ್ದು ಸಾಲ್ದು ಅಂತಾ ಫೋನ್​ ಕಿತ್ತೆಸೆದ
- ದೃಶ್ಯ 04 : ಹೊಡೀತಿರೋದು ಗಂಡ.. ರೆಕಾರ್ಡ್​ ಮಾಡ್ತಿರೋದು ಹೆಂಡ್ತಿ
ಸಂಜೆ ಹೊತ್ತಿಗೆ ಸಿಸಿಟಿವಿ ಫೊಟೇಜ್ ವಿಂಗ್​​​ ಕಮಾಂಡರ್​ನ ಮುಖವಾಡ ಕಳಚಿದೆ.. ಅದ್ಹೇನೆ ಇರಲಿ.. ಕಾನೂನು ಎಲ್ಲರಿಗೂ ಒಂದೇ. ಒದೆ ತಿಂದ ಸಾಫ್ಟ್​ವೇರ್ ಕಂಪನಿ ಉದ್ಯೋಗಿ ವಿಕಾಸ್ ಬೈಯಪ್ಪನಹಳ್ಳಿ ಪೊಲೀಸ್​ ಸ್ಟೇಷನ್​ನಲ್ಲಿದ್ದಾನೆ. ಹಿಗ್ಗಾಮುಗ್ಗಾ ಥಳಿಸಿದ ಶಿಲಾದಿತ್ಯ ಬೋಸ್​ನ ಶೌರ್ಯ, ಪರಾಕ್ರಮದ ಬೀದಿ ಜಗಳದ ಸಿಸಿಟಿವಿ ದೃಶ್ಯ ನೋಡಿದ ಮೇಲೆ ಪೊಲೀಸರು ಕೇಸ್​ ದಾಖಲಿಸುತ್ತಾರಾ ಅಂತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us