newsfirstkannada.com

‘ಶೇ.55 ರಷ್ಟು ಅಪ್ಪನ ಆಸ್ತಿ ಸರ್ಕಾರ ಕಿತ್ತುಕೊಳ್ಳುತ್ತೆ’- ಕಾಂಗ್ರೆಸ್ ನಾಯಕನಿಂದ ಹೊಸ ವಿವಾದ

Share :

Published April 24, 2024 at 12:47pm

    ’ವ್ಯಕ್ತಿ ಸಾವಿನ ನಂತರ ಶೇ.55 ರಷ್ಟು ಆಸ್ತಿ ಸರ್ಕಾರಕ್ಕೆ ಮಕ್ಕಳಿಗೆ ಉಳಿದಿದ್ದು’

    ರಾಹುಲ್ ಗಾಂಧಿ ಆಪ್ತ, ರಾಜೀವ್ ಗಾಂಧಿ ಸಲಹೆಗಾರ ಆಗಿದ್ದ ಸ್ಯಾಮ್ ಪಿತ್ರೋಡಾ

    ಪಿತ್ರಾರ್ಜಿತ ತೆರಿಗೆ ಪದ್ದತಿ ಬಗ್ಗೆ ಕಾಂಗ್ರೆಸ್ ನಾಯಕ ವಿವಾದಾತ್ಮಕ ಹೇಳಿಕೆ

ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆ ಕಾವೇರಿದ ಸಮಯದಲ್ಲೇ ಕಾಂಗ್ರೆಸ್ ನಾಯಕ ಸ್ಯಾಮ್‌ ಪಿತ್ರೋಡಾ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಆಸ್ತಿ, ಸಂಪತ್ತು ಸಂಗ್ರಹಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅಮೆರಿಕಾದಲ್ಲಿ ಇರುವಂತಹ ಪಿತ್ರಾರ್ಜಿತ ತೆರಿಗೆ ಪದ್ದತಿ ಭಾರತದಲ್ಲಿ ಇಲ್ಲ. ಅದರ ಬಗ್ಗೆಯೂ ಚರ್ಚೆಯಾಗಬೇಕು ಎಂದಿದ್ದಾರೆ. ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಬಿಜೆಪಿ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಿದೆ.

ಸ್ಯಾಮ್‌ ಪಿತ್ರೋಡಾ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ಸಲಹೆಗಾರರಾಗಿದ್ದರು. ಸದ್ಯ ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷರಾಗಿರುವ ಸ್ಯಾಮ್ ಪಿತ್ರೋಡಾ ಕಾಂಗ್ರೆಸ್ ರಾಹುಲ್ ಗಾಂಧಿಗೆ ಆಪ್ತರಾಗಿದ್ದಾರೆ. ಇವರು ನೀಡಿರೋ ಹೇಳಿಕೆ ತೀವ್ರ ಚರ್ಚೆಗೆ ಗುರಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಸವಾಲ್; ಅಧಿಕಾರಕ್ಕೆ ಸಂಪತ್ತು ಮರು ಹಂಚಿಕೆ ಮಾಡ್ತೇವೆ ಎಂದ ರಾಹುಲ್

ಸ್ಯಾಮ್ ಪಿತ್ರೋಡಾ ಹೇಳಿದ್ದೇನು?
ಅಮೆರಿಕಾದಲ್ಲಿ ಪಿತ್ರಾರ್ಜಿತ ತೆರಿಗೆ ಪದ್ದತಿಯಡಿ ವ್ಯಕ್ತಿಯ ಸಾವನ್ನಪ್ಪಿದರೆ ಆತನ ನಿಧನ ನಂತರ ಶೇ.55 ರಷ್ಟು ಆಸ್ತಿ ಸರ್ಕಾರಕ್ಕೆ ಹೋಗುತ್ತೆ. ಪಿತ್ರಾರ್ಜಿತ ತೆರಿಗೆ ಪದ್ದತಿಯಡಿ ವ್ಯಕ್ತಿಯ ನಿಧನ ನಂತರ ಶೇ.45ರಷ್ಟು ಆಸ್ತಿ ಮಾತ್ರ ಮಕ್ಕಳಿಗೆ ಸಿಗುತ್ತದೆ. ಇದರ ಬಗ್ಗೆ ಭಾರತದಲ್ಲೂ ಚರ್ಚೆಯಾಗಬೇಕು ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದರು.

ಇದೇ ವೇಳೆ, ಶ್ರೀಮಂತರಾಗಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವ ಸ್ಯಾಮ್ ಪಿತ್ರೋಡಾ ಅವರು ಭಾರತದಲ್ಲಿ 10 ಬಿಲಿಯನ್ ಆಸ್ತಿ ಇರುವ ವ್ಯಕ್ತಿ ಸಾವನ್ನಪ್ಪಿದರೆ ಮಕ್ಕಳಿಗೆ 10 ಬಿಲಿಯನ್ ಆಸ್ತಿ ಸಿಗುತ್ತೆ. ಸಾರ್ವಜನಿಕರಿಗೆ, ಸರ್ಕಾರಕ್ಕೆ ಏನೂ ಸಿಗಲ್ಲ. ಇವುಗಳ ಬಗ್ಗೆ ಜನರು ಚರ್ಚೆ ಹಾಗೂ ಸಂವಾದ ಮಾಡಬೇಕು. ನಾವು ಸಂಪತ್ತಿನ ಮರು ಹಂಚಿಕೆ ಬಗ್ಗೆ ಮಾತನಾಡುತ್ತಿದ್ದೇವೆ. ಜನರ ಹಿತಾಸಕ್ತಿ ದೃಷ್ಟಿಯಿಂದ ಸಂಪತ್ತಿನ ಮರು ಹಂಚಿಕೆ ಬಗ್ಗೆ ಮಾತನಾಡುತ್ತಿದ್ದೇವೆಯೇ ಹೊರತು ಸೂಪರ್ ಶ್ರೀಮಂತರ ದೃಷ್ಟಿಯಿಂದಲ್ಲ ಎಂದಿದ್ದರು.

ಸ್ಯಾಮ್‌ ಪಿತ್ರೋಡಾ ಅವರು ಈ ಹೇಳಿಕೆ ದೇಶದಲ್ಲಿ ವಿವಾದ ಸೃಷ್ಟಿಸಿದ್ದು, ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಅವರು ಸ್ಪಷ್ಟನೆ ನೀಡಿದ್ದಾರೆ. ಸ್ಯಾಮ್ ಪಿತ್ರೋಡಾ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆ, ಪಕ್ಷದ ನಿಲುವು ಅಲ್ಲ ಎಂದ ಜೈರಾಮ್ ರಮೇಶ್ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಸ್ಪಷ್ಟನೆ!
ಶೇ.55 ರಷ್ಟು ಅಪ್ಪನ ಆಸ್ತಿ ಸರ್ಕಾರದ ಪಾಲಾಗುವ ಪಿತ್ರಾರ್ಜಿತ ತೆರಿಗೆ ಪದ್ದತಿ ಬಗ್ಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ಅವರ ತಮ್ಮ ಹೇಳಿಕೆ ಸ್ಪಷ್ಟನೆ ನೀಡಿದ್ದಾರೆ. ಶೇ.55 ರಷ್ಟು ಸಂಪತ್ತನ್ನು ಕಿತ್ತುಕೊಳ್ಳಲಾಗುತ್ತೆ ಎಂದು ಹೇಳಿದ್ದು ಯಾರು? ಈ ರೀತಿ ಭಾರತದಲ್ಲಿ ಮಾಡಲಾಗುತ್ತೆ ಎಂದು ಹೇಳಿದ್ದು ಯಾರು? ಬಿಜೆಪಿ ಭಯಗೊಂಡಿರುವುದು ಏಕೆ? ಸಾಮಾನ್ಯ ಚರ್ಚೆಯ ವೇಳೆ ಅಮೆರಿಕಾದ ಪಿತ್ರಾರ್ಜಿತ ತೆರಿಗೆ ಬಗ್ಗೆ ಉಲ್ಲೇಖಿಸಿದ್ದೇನೆ. ಕಾಂಗ್ರೆಸ್ ಪಕ್ಷ ಸೇರಿದಂತೆ ಯಾವುದೇ ಪಕ್ಷದ ನೀತಿ, ನಿಲುವಿಗೆ ಇದಕ್ಕೂ ಸಂಬಂಧವಿಲ್ಲ. ನನ್ನ ಹೇಳಿಕೆಯನ್ನು ತಿರುಚಿ, ಗಮನವನ್ನು ಬೇರೆಡೆ ಸೆಳೆಯಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಶೇ.55 ರಷ್ಟು ಅಪ್ಪನ ಆಸ್ತಿ ಸರ್ಕಾರ ಕಿತ್ತುಕೊಳ್ಳುತ್ತೆ’- ಕಾಂಗ್ರೆಸ್ ನಾಯಕನಿಂದ ಹೊಸ ವಿವಾದ

https://newsfirstlive.com/wp-content/uploads/2024/04/Sam-Pitroda-Congress-1.jpg

Load More