/newsfirstlive-kannada/media/post_attachments/wp-content/uploads/2024/06/NEET_EXAM.jpg)
ವಿವಾದದ ಬಳಿಕ NEET-PG ಪರೀಕ್ಷೆಗೆ ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಂ (NBEMS) ಹೊಸ ದಿನಾಂಕವನ್ನು ನಿಗದಿ ಮಾಡಿದೆ. ಈ ಮೊದಲು ಜೂನ್ 15 ರಂದು ನೀಟ್ ಪಿಜಿ ಪರೀಕ್ಷೆ ನಿಗದಿಯಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದ ಬಳಿಕ ನೀಟ್ ಪಿಜಿ ಪರೀಕ್ಷೆಯನ್ನು ಆಗಸ್ಟ್ 3ರಂದು ನಡೆಸಲು ನಿರ್ಧಾರ ಮಾಡಲಾಗಿದೆ.
ಹೊಸ ದಿನಾಂಕ ನಿಗದಿಗೆ ಕಾರಣವೇನು?
ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಂ NEET-PG ಪರೀಕ್ಷೆಗೆ ಹೊಸ ದಿನಾಂಕ ನಿಗದಿ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಭದ್ರತೆಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಸಮಯಾವಕಾಶ ಬೇಕು. ಜೊತೆಗೆ ಪರೀಕ್ಷಾ ಅಭ್ಯರ್ಥಿಗಳಿಗೂ ಪರೀಕ್ಷಾ ಕೇಂದ್ರಗಳ ಬಗ್ಗೆ ತಿಳಿಸಲು ಸಮಯ ಬೇಕು. ಹೀಗಾಗಿ ನೀಟ್ ಪಿಜಿ ಪರೀಕ್ಷಾ ದಿನಾಂಕವನ್ನು ಎನ್‌ಬಿಇ ಮುಂದೂಡಿದೆ.
ಇದನ್ನೂ ಓದಿ: ಕೈಗೆಟುಕುವ ದರದಲ್ಲಿ MBBS ಸೀಟ್.. ಆದರೂ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗೋದು ಯಾಕೆ..?
ಜೂನ್ 15ರಂದು 2 ಶಿಫ್ಟ್‌ನಲ್ಲಿ ನೀಟ್ ಪಿಜಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಸುಪ್ರೀಂಕೋರ್ಟ್ ಒಂದೇ ಶಿಫ್ಟ್‌ನಲ್ಲಿ ಪರೀಕ್ಷೆ ನಡೆಸಲು ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಆಗಸ್ಟ್ 3 ರಂದು ನೀಟ್ ಪಿಜಿ ಪರೀಕ್ಷೆ ನಡೆಸುವುದಾಗಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಲಾಗಿದೆ.
ಆಗಸ್ಟ್ 3ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ NEET-PG 2025 ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಂ ಮುಂದಾಗಿದೆ. TCS ಅನ್ನು ಟೆಕ್ನಾಲಜಿ ಪಾರ್ಟನರ್ ಮಾಡಿಕೊಂಡಿದ್ದು, ದೇಶಾದ್ಯಂತ ಈಗ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ