newsfirstkannada.com

ಜಸ್ಟ್​ ಮೂರೇ ತಿಂಗಳ ಅಂತರದಲ್ಲಿ ನಾಲ್ಕು ದುರಂತಗಳು; ಏನಿದು ಮೆಟ್ರೋ ಕಥೆ..?

Share :

Published March 23, 2024 at 6:11am

    ಜಸ್ಟ್​ ಮೂರೇ ತಿಂಗಳ ಅಂತರದಲ್ಲಿ ನಾಲ್ಕು ದುರಂತಗಳು

    ಪದೇ ಪದೆ ಮೆಟ್ರೋದಲ್ಲಿ ದುರಂತಗಳು ಆಗ್ತಿರೋದೇಕೆ?

    ಸೋಷಿಯಲ್ ಮೀಡಿಯಾದಲ್ಲಿ ಮೆಟ್ರೋ ವಿರುದ್ಧ ಅಭಿಯಾನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮೊನ್ನೆ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ನಡೆದ ಅದೊಂದು ಸಾವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅದಲ್ಲದೇ, ಜಸ್ಟ್​ ಮೂರೇ ತಿಂಗಳ ಅಂತರದಲ್ಲಿ ನಾಲ್ಕು ದುರಂತಗಳು ಮೆಟ್ರೋ ನಿಲ್ದಾಣದಲ್ಲಿ ಸಂಭವಿಸಿದೆ.

ಸೋಶಿಯಲ್​ ಮೀಡಿಯಾಲ್ಲಿ ಮತ್ತೆ ಸ್ಕ್ರೀನ್​ ಡೋರ್​​ಗೆ ಡಿಮ್ಯಾಂಡ್​ ಹೆಚ್ಚಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಟ್ರೋ ಸೇವೆ ಆರಂಭ ಮಾಡಲಾಯ್ತು. ಆದ್ರೆ, ಇಂತಹ ಸಾರ್ವಜನಿಕ ಸೇವೆ ಸೂಸೈಡ್​ ಸ್ಪಾಟ್​ ಆಗಿ ಬದಲಾಗ್ತಿರೋದು ನಿಜಕ್ಕೂ ದುರಂತ. ಜಸ್ಟ್​ ಮೂರು ತಿಂಗಳಲ್ಲಿ 4 ದುರಂತಗಳು ಸಂಭವಿಸಿದ್ದು, ಸಾರ್ವಜನಿಕರನ್ನ ಮತ್ತಷ್ಟು ಆತಂಕಕ್ಕೀಡು ಮಾಡಿದೆ.

ಇದನ್ನು ಓದಿ: ಮದುವೆ ನಿಶ್ಚಯವಾಗಿದ್ದ ನರ್ಸ್ ಮೇಲೆ ಬಿದ್ದ ಕೇಬಲ್ ವೈರ್; ಸ್ಥಳದಲ್ಲೇ ಮಹಿಳೆ ದಾರುಣ ಸಾವು!

1 ಜನವರಿ 2024 ರಂದು ಇಂದಿರಾ ನಗರ ಮೆಟ್ರೋ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಮಹಿಳೆಯೊಬ್ಬಳು ತನ್ನ ಮೊಬೈಲ್​ನ ಟ್ರ್ಯಾಕ್​ ಮೇಲೆ ಬೀಳಿಸಿದ್ದಾಳೆ. ಈ ವೇಳೆ ಮೊಬೈಲ್​ ತೆಗೆಯಲು ಟ್ರ್ಯಾಕ್ ಮೇಲೆ ಜಿಗಿದಿದ್ದಳು. ಇದನ್ನ ಗಮಿನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ, ಆಕೆಯನ್ನ ರಕ್ಷಣೆ ಮಾಡ್ತಾರೆ.

5 ಜನವರಿ 2024ರಂದು ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ 23 ವರ್ಷದ ಶ್ಯಾರೋನ್​ ಎಂಬಾತ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಮೆಟ್ರೊ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಧುಮುಕಿದ್ದ. ಈ ವೇಳೆ ಮೆಟ್ರೋ ಟ್ರೈನ್ ಡಿಕ್ಕಿ ಹೊಡೆದಿದ್ದು ಅವತ್ತು ಹಸಿರು ಮಾರ್ಗದಲ್ಲಿ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.

6 ಜನವರಿ 2024ರಂದು ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ಟ್ರ್ಯಾಕ್‌ನಲ್ಲಿ ಕಪ್ಪು ಬಣ್ಣದ ಬೆಕ್ಕು ಕಾಣಿಸಿಕೊಂಡಿದ್ದು, ಪ್ರಯಾಣಿಕರು ಆತಂಕಗೊಂಡಿರುವಂತಹ ಘಟನೆ ಜೆ.ಪಿ.ನಗರ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದಿತ್ತು. ಕೂಡಲೇ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಟ್ರ್ಯಾಕ್ನಲ್ಲಿದ್ದ ಬೆಕ್ಕನ್ನ ಓಡಿಸಿದ್ರು.

21 ಮಾರ್ಚ್​ 2024 ರಂದು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಫೋನ್​ನಲ್ಲಿ ಮಾತನಾಡುತ್ತಾ ಮೆಟ್ರೋ ಹಳಿ ಮೇಲೆ ಬಿದ್ದು ವಿದ್ಯಾರ್ಥಿ ಧ್ರುವ್​ ಆತ್ಮಹತ್ಯೆ ಶರಣಾಗಿದ್ದಾನೆ. ಈತ ಮಾನಸಿಕ ಖಿನ್ನತೆಯಿಂದ ಬಳಲ್ತಿದ್ದ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಈ ಘಟನೆಗಳನ್ನ ಗಮಿಸಿದ್ರೆ ರೈಲ್ವೆ ಟ್ರ್ಯಾಕ್​ಗಳಂತೆ ಮೆಟ್ರೋ ಟ್ರ್ಯಾಕ್​ಗಳೂ ಆತ್ಮಹತ್ಯೆ ಸ್ಪಾಟ್​ ಆಗ್ತಿದ್ಯಾ ಅನ್ನೋ ಪ್ರಶ್ನೆ ಶುರುವಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಮೆಟ್ರೋ ನಿಲ್ದಾಣದಲ್ಲಿ ಸ್ಕ್ರೀನ್​ ಡೋರ್​ಗೆ ಅಭಿಯಾನ ಶುರುವಾಗಿದೆ. ಆದ್ರೆ, ಈ ರೀತಿ ಸಾಲು ಸಾಲು ಅಭಿಯಾನ ಮಾಡಿದ್ರೂ ಮೆಟ್ರೋ ಅಧಿಕಾರಿಗಳು ಮಾತ್ರ ಜಾಣ ಕಿವುಡರಂತೆ ವರ್ತಿಸ್ತಿದ್ದು, ಸಾರ್ವಜನಿಕರ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಈಗಾಗಲೇ ದೆಹಲಿ, ಚೆನ್ನೈ ಮೆಟ್ರೋದಲ್ಲಿ ಫ್ಲಾಟ್​ ಫಾರ್ಮ್​ ಸ್ಕ್ರೀನ್​​ ಡೋರ್ ಅಳವಡಿಸಲಾಗಿದೆ. ಆದ್ರೆ, ನಮ್ಮ ಮೆಟ್ರೋದಲ್ಲಿ ಮಾತ್ರ ಪಿಎಸ್​ಡಿ ಅಳವಡಿಸಿಲ್ಲ ಅಂತಾ ಛೀಮಾರಿ ಹಾಕ್ತಿದ್ದಾರೆ. ಇನ್ನಾದ್ರೂ, ಮೆಟ್ರೋ ಅಧಿಕಾರಿಗಳು ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚೆತ್ತುಕೊಳ್ಳಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಸ್ಟ್​ ಮೂರೇ ತಿಂಗಳ ಅಂತರದಲ್ಲಿ ನಾಲ್ಕು ದುರಂತಗಳು; ಏನಿದು ಮೆಟ್ರೋ ಕಥೆ..?

https://newsfirstlive.com/wp-content/uploads/2024/01/namma-metro-3.jpg

Load More