ರಾಮಮಂದಿರದ ಅರ್ಚಕರಿಗೆ ಹೊಸ ಡ್ರೆಸ್​​ ಕೋಡ್​​.. ಆ್ಯಂಡ್ರಾಯ್ಡ್​ ಫೋನ್​ ನಿಷೇಧ

author-image
AS Harshith
Updated On
ರಾಮಮಂದಿರದ ಅರ್ಚಕರಿಗೆ ಹೊಸ ಡ್ರೆಸ್​​ ಕೋಡ್​​.. ಆ್ಯಂಡ್ರಾಯ್ಡ್​ ಫೋನ್​ ನಿಷೇಧ
Advertisment
  • ಅರ್ಚಕರಿಗೆ ಆ್ಯಂಡ್ರಾಯ್ಡ್​ ಫೋನ್​ ಬಳಕೆ ನಿಷೇಧ
  • ಟ್ರಸ್ಟ್ ಹೇಳಿದ ವಸ್ತ್ರ ಸಂಹಿತೆಯನ್ನು ಅರ್ಚಕರು ಫಾಲೋ ಮಾಡಬೇಕು
  • ಮೂರು ಕಾಲಕ್ಕೆ ಅನುಗುಣವಾದ ವಸ್ತ್ರವನ್ನು ನೀಡಲಿದೆ ರಾಮಮಂದಿರ ಟ್ರಸ್ಟ್​

ರಾಮಮಂದಿರದಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಹೊಸ ವಸ್ತ್ರ ಸಂಹಿತೆ ಜಾರಿಯಾಗಿದೆ. ಇನ್ಮುಂದೆ ಅರ್ಚಕರು ಬಿಳಿ ಧೋತಿ ಮತ್ತು ಹಳದಿ ಕುರ್ತಾದಲ್ಲಿ (ಚೌಬಂದಿ) ಕಾಣಿಸಿಕೊಳ್ಳಲಿದ್ದಾರೆ. ರಾಮಮಂದಿರ ಟ್ರಸ್ಟ್ ವತಿಯಿಂದ​​ ಅರ್ಚಕರಿಗೆ ವಸ್ತ್ರವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ತುಂಗಭದ್ರೆ.. ನದಿ ಪಾತ್ರದಲ್ಲಿ ಪ್ರವಾಹ ಭೀತಿ, ಜನರಿಗೆ ಎಚ್ಚರಿಕೆ ರವಾನೆ

ರಾಮಮಂದಿರಲ್ಲಿ ಸೇವೆ ಸಲ್ಲಿಸುವ ಅರ್ಚಕರಿಗೆ ಡ್ರೆಸ್​ ಕೋಡ್​​ ಮಾತ್ರವಲ್ಲದೆ, ಆ್ಯಂಡ್ರಾಯ್ಡ್​ ಫೋನ್​ ಬಳಕೆಯನ್ನು ನಿಷೇಧಿಸಲಾಗಿದೆ. ರಾಮಲಲ್ಲಾನನ್ನು ಪೂಜಿಸುವ ಎಲ್ಲಾ 25 ಅರ್ಚಕರಿಗೆ ಕೀಪ್ಯಾಡ್​​ ಫೋನ್​ಗಳನ್ನು ನೀಡಲಾಗಿದೆ. ಇನ್ನು ಅರ್ಚಕರು ಆ್ಯಂಡ್ರಾಯ್ಡ್​​ ಫೋನನ್ನು ದೇವಸ್ಥಾನದೊಳಗೆ ನಿರ್ಮಿಸಲಾದ ಲಾಕರ್​ನಲ್ಲಿ ಇರಿಸಬೇಕಿದೆ. ಇದಲ್ಲದೆ ದೇವಾಲಯ ಬಳಿ ಫೋಟೋ ಮತ್ತು ವಿಡಿಯೋಗ್ರಾಫಿ ನಿಷೇಧಿಸಲಾಗಿದೆ.

publive-image

ಇದನ್ನೂ ಓದಿ: KRS ಡ್ಯಾಂ ಬಹುತೇಕ ಭರ್ತಿ, ನದಿ ಪಾತ್ರದಲ್ಲಿ ಪ್ರವಾಹ ಭೀತಿ! ಒಳ ಹರಿವು, ಹೊರ ಹರಿವು ಎಷ್ಟಿದೆ?

ರಾಮಮಂದಿರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​​ ಅರ್ಚಕರ ಜೊತೆಗೆ ಸಭೆ ಕರೆದಿದ್ದರು. ದೇವಸ್ಥಾನದ ನೀತಿ ಸಂಹಿತೆ ಬಗ್ಗೆ ಚರ್ಚಿಸಿದರು. ಟ್ರಸ್ಟ್​​ನಲ್ಲಿ ಕೆಲಸ ಮಾಡುವ ಅರ್ಚಕರಿಗೆ ಬೇಸಿಗೆ, ಮಳೆಗಾಲ, ಚಳಿಗಾಲಕ್ಕೆ ತಕ್ಕಂತೆ ಮೂರು ಸೆಟ್​ ಉಡುಪು ಒದಗಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment