/newsfirstlive-kannada/media/post_attachments/wp-content/uploads/2025/02/FAST-TAG.jpg)
ಫೆಬ್ರವರಿ 17 ಅಂದ್ರೆ ಇಂದನಿಂದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಫಾಸ್ಟ್ಟ್ಯಾಗ್ ಬ್ಯಾಲನ್ಸ್ ವಿಚಾರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಿದೆ. ಫಾಸ್ಟ್ಟ್ಯಾಗ್ ಟ್ರಾಂಜಕ್ಷನ್ನಲ್ಲಿ ಯಾವುದೇ ರೀತಿಯ ರೀತಿಯ ಮೋಸದ ಚಟುವಟಿಕೆಗಳು ಆಗದಂತೆ ತಡೆಯಲು ಈ ಒಂದು ಬಲಾವಣೆಗಳನ್ನು ಮಾಡಲಾಗಿದೆ.
60 ನಿಮಿಷದ ಟಾರ್ಗೆಟ್: ನೀವು ಟೋಲ್ ಪ್ಲಾಜಾ ತಲುಪುವ ಮೊದಲು ನಿಮ್ಮ ಫಾಸ್ಟ್ಟ್ಯಾಗ್ ಬ್ಲ್ಯಾಕ್ಲಿಸ್ಟ್ನಲ್ಲಿ ಸೇರಿದ್ದೇ ಆದಲ್ಲಿ ಟೋಲ್ಪ್ಲಾಜಾದಲ್ಲಿ ನಿಮ್ಮ ದುಡ್ಡು ಕಟ್ ಆಗುವುದಿಲ್ಲ. 10 ನಿಮಿಷಗಳ ನಂತರ ಬ್ಲ್ಯಾಕ್ಲಿಸ್ಟ್ನಿಂದ ಆಚೆ ಬಂದರೆ ನಿಮ್ಮ ಫಾಸ್ಟ್ಟ್ಯಾಗ್ ರೀಡ್ ಆಗುತ್ತದೆ.
ಡಬಲ್ ದಂಡ: ನೀವು ಟೋಲ್ಪ್ಲಾಜಾ ತಲುಪುವ ಮುನ್ನ ನಿಮ್ಮ ಫಾಸ್ಟ್ಟ್ಯಾಗ್ ಬ್ಲ್ಯಾಕ್ಲಿಸ್ಟ್ನಲ್ಲಿ ಇದ್ದರೆ. ಟೋಲ್ಪ್ಲಾಜಾ ನಿರ್ದೇಶನಾಲಯದ ನೀತಿಗಳ ಮೇಲೆ ಹಲವು ಪ್ರಕರಣಗಳಲ್ಲಿ ದಂಡವನ್ನು ಎರಡು ಪಟ್ಟು ವಸೂಲಿ ಮಾಡಲಾಗುತ್ತದೆ. ಹೀಗಾಗಿ ಈ ದಂಡವನ್ನು ತಪ್ಪಿಸಲು ಟೋಲ್ಪ್ಲಾಜಾ ತಲುಪುವ 10 ನಿಮಿಷಗಳ ಮುನ್ನ ನಿಮ್ಮ ಫಾಸ್ಟ್ಟ್ಯಾಗ್ ರಿಚಾರ್ಜ್ ಆಗಿರಬೇಕು.
ಇದನ್ನೂ ಓದಿ:ಭೀಕರ ಕಾಲ್ತುಳಿತ ಘಟಿಸಿ 12 ಗಂಟೆಯಾದರೂ ನಿಲ್ಲದ ಜನಜಂಗುಳಿ.. ದೆಹಲಿ ರೈಲ್ವೆ ನಿಲ್ದಾಣದ ಸ್ಥಿತಿ ಈಗ ಹೇಗಿದೆ?
ಒಂದು ವೇಳೆ ನಿಮ್ಮ ಫಾಸ್ಟ್ಟ್ಯಾಗ್ ಟೋಲ್ಪ್ಲಾಜಾ ತಲುಪುವುದಕ್ಕಿಂತ ಮುನ್ನವೇ ಬ್ಲ್ಯಾಕ್ಲಿಸ್ಟ್ಗೆ ಸೇರಿದ್ದರೆ. ಟ್ರಾಂಜಕ್ಷನ್ ಕ್ಯಾನ್ಸಲ್ ಆಗುತ್ತದೆ ಹಾಗೂ ಟೋಲ್ಪ್ಲಾಜಾ ನಿರ್ದೇಶನಾಲಯದ ನೀತಿ ನಿಯಮಗಳ ಪ್ರಕಾರ ನಿಮಗೆ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಟೋಲ್ಪ್ಲಾಜಾ ತಲುಪುವ 60 ನಿಮಿಷಗಳ ಮೊದಲು ನಿಮ್ಮ ಫಾಸ್ಟ್ಟ್ಯಾಗ್ ಬ್ಲ್ಯಾಕ್ಲಿಸ್ಟ್ಗೆ ಸೇರಿದ್ದಲ್ಲಿ, ನೀವು ಪ್ಲಾಜಾ ಬಳಿ ಹೋಗಿ 10 ನಿಮಿಷದೊಳಗೆ ರೀಚಾರ್ಜ್ ಮಾಡಿಸಿಕೊಂಡಲ್ಲಿ ನಿಮ್ಮ ಹಣವನ್ನು ಫಾಸ್ಟ್ಟ್ಯಾಗ್ ಮೂಲಕ ಸ್ವೀಕರಿಸಲಾಗುವುದು.
ಇವುಗಳನ್ನು ಪಾಲಿಸಿ
ಫಾಸ್ಟ್ಟ್ಯಾಗ್ನ ಬ್ಯಾಲನ್ಸ್ ಎಷ್ಟಿದೆ ಎಂಬುದನ್ನು ಚೆಕ್ ಮಾಡಿಕೊಳ್ಳುತ್ತಿರಿ. ಬ್ಲ್ಯಾಕ್ಲಿಸ್ಟ್ಗೆ ಸೇರುವ ಮುನ್ನವೇ ಅಗತ್ಯವಾದ ಬ್ಯಾಲೆನ್ಸ್ ಅದರಲ್ಲಿ ಇರಲಿ.ಆಗಾಗ ಕೆವೈಸಿಯನ್ನು ಅಪ್ಡೇಟ್ ಮಾಡುವುದನ್ನು ಮರೆಯಬೇಡಿ, ಕೆವೈಸಿ ಅಪ್ಡೇಟ್ ಮಾಡುವುದರಿಂದ ನೀವು ನಿಮ್ಮ ಫಾಸ್ಟ್ಟ್ಯಾಗ್ ಬ್ಲ್ಯಾಕ್ಲಿಸ್ಟ್ಗೆ ಸೇರುವುದನ್ನು ತಡೆಯಬಹುದು.ದೀರ್ಘಪ್ರಯಾಣ ಕೈಗೊಳ್ಳುವ ಮುನ್ನ ನಿಮ್ಮ ಫಾಸ್ಟ್ಟ್ಯಾಗ್ನಲ್ಲಿ ಎಷ್ಟು ಹಣವಿದೆ ಎಷ್ಟು ಬೇಕಾಗಬಹುದು ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ