/newsfirstlive-kannada/media/post_attachments/wp-content/uploads/2025/04/TAX.jpg)
ಇಂದಿನಿಂದ ದೇಶಾದ್ಯಂತ ಹೊಸ ಆರ್ಥಿಕ ವರ್ಷ ಆರಂಭವಾಗುತ್ತಿದೆ. ಕೆಲವೊಂದಷ್ಟು ಲಾಭಗಳನ್ನ ಬಿಟ್ರೆ ಜನರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ. ಹಾಗಾದ್ರೆ ಏನೆಲ್ಲಾ ಲಾಭ? ಏನೆಲ್ಲಾ ದರ ಬರೆ ಬೀಳಲಿದೆ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
‘ಹೊಸ ಆರ್ಥಿಕ ವರ್ಷ’ ಆರಂಭ!
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರರಿಗೆ ಗುಡ್‌ನ್ಯೂಸ್ ಕೊಟ್ಟಿದ್ರು. ಆದಾಯ ತೆರಿಗೆ ಮಿತಿಯನ್ನ ಹೆಚ್ಚಿಸಿ ಸಿಹಿ ಸುದ್ದಿ ನೀಡಿದ್ರು. ಇದೀಗ ಅದರ ಸವಿಯನ್ನ ಸವಿಯುವ ಕಾಲ ಇಂದಿನಿಂದ ಆರಂಭವಾಗಲಿದೆ. ಮಧ್ಯಮವರ್ಗದ ಜನರಿಗೆ ಕೇಂದ್ರ ಸರ್ಕಾರ ಕೊಟ್ಟಿದ್ದ ಟ್ಯಾಕ್ಸ್ ರಿಲೀಫ್ ಏಪ್ರಿಲ್ 1 ಅಂದ್ರೆ ಇಂದಿನಿಂದ ಜಾರಿಗೆ ಬರಲಿದೆ.
ಆದಾಯ ತೆರಿಗೆ ಮಿತಿ ಹೆಚ್ಚಳ
ವಾರ್ಷಿಕ ₹12 ಲಕ್ಷದವರೆಗೆ ಆದಾಯ ಇರುವವರಿಗೆ ಇಂದಿನಿಂದ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ಜೊತೆಗೆ 75 ಸಾವಿರ ರೂಪಾಯಿವರೆಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡಾ ಇರಲಿದೆ. ಒಟ್ಟು ₹12 ಲಕ್ಷದ 75 ಸಾವಿರದವರೆಗೂ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ. ವಾರ್ಷಿಕ ₹12 ಲಕ್ಷ ಆದಾಯವಿದ್ರೆ ₹80 ಸಾವಿರ ಆದಾಯ ತೆರಿಗೆ ಉಳಿತಾಯವಾಗಲಿದೆ. ₹18 ಲಕ್ಷ ರೂಪಾಯಿ ಆದಾಯ ಇದ್ದವರಿಗೆ 70 ಸಾವಿರ ರೂಪಾಯಿ ಉಳಿತಾಯವಾಗಲಿದೆ. 25 ಲಕ್ಷ ರೂಪಾಯಿ ಆದಾಯ ಇದ್ದಲ್ಲಿ 1 ಲಕ್ಷದ 10 ಸಾವಿರದವರೆಗೆ ತೆರಿಗೆ ಉಳಿತಾಯ ಆಗಲಿದೆ. ಆದಾಯ ತೆರಿಗೆಯಷ್ಟೇ ಅಲ್ಲ.. ಮನೆ ಬಾಡಿಗೆ ನೀಡಿರೋ ಮಾಲೀಕರಿಗೂ ಸಿಹಿಸುದ್ದಿ ಸಿಗಲಿದೆ.
ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ನಲ್ಲಿ ಹೆಂಡತಿ ಮಾಡಿದ ರೀಲ್ಸ್ನಿಂದ ಪೊಲೀಸಪ್ಪನ ಉದ್ಯೋಗವೇ ಹೋಯಿತು!
2 ಮನೆ ಇದ್ರೂ ರಿಲೀಫ್
2 ಸ್ವಂತ ಮನೆಗಳು ಇರುವವರಿಗೂ ಬಜೆಟ್ನಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. 2ನೇ ಮನೆಯ ವಾರ್ಷಿಕ ಮೌಲ್ಯವನ್ನ ಶೂನ್ಯ ಎಂದು ಪರಿಗಣನೆ ಮಾಡಲಾಗಿದ್ದು, ಬಾಡಿಗೆ ಮನೆಯಿಂದ ಬರೋ ಆದಾಯದ ಟಿಡಿಎಸ್ ವಿನಾಯಿತಿ ನೀಡಲಾಗಿದೆ. 2.5 ಲಕ್ಷ ರೂಪಾಯಿಂದ 6 ಲಕ್ಷ ರೂಪಾಯಿಗೆ ಮಿತಿಯ ಏರಿಕೆ ಮಾಡಲಾಗಿದ್ದು, ಇದೆಲ್ಲಾ ಇವತ್ತಿನಿಂದ ಜಾರಿಗೆ ಬರಲಿದೆ. ಹಿರಿಯ ನಾಗರೀಕರಿಗೂ ಇವತ್ತಿಂದ ಕೆಲವೊಂದಷ್ಟು ಲಾಭಗಳು ಸಿಗಲಿವೆ. ಹೂಡಿಕೆದಾರರಿಗೂ ಕೊಂಚ ರಿಲೀಫ್ ಸಿಗಲಿದೆ.
ಟಿಡಿಎಸ್ ವಿನಾಯಿತಿ
- ಹಿರಿಯ ನಾಗರೀಕರ ಬಡ್ಡಿ ಆದಾಯದ TDS ಮಿತಿ ₹1 ಲಕ್ಷಕ್ಕೆ ಏರಿಕೆ
- ವಿಮಾ ಏಜೆಂಟ್ಗಳ TDS ವಿನಾಯಿತಿ ಮಿತಿ 15-20 ಸಾವಿರ ರೂ.ಗೆ ಏರಿಕೆ
- ಮ್ಯೂಚ್ಯುವಲ್ ಫಂಡ್, ಷೇರು ಲಾಭಾಂಶದ ಮೇಲಿನ ವಿನಾಯಿತಿ ಹೆಚ್ಚಳ
- ಟಿಡಿಎಸ್ ವಿನಾಯಿತಿ ಮಿತಿಯನ್ನ 5 ರಿಂದ 10 ಸಾವಿರಕ್ಕೆ ಏರಿಸಲಾಗಿದೆ
ಹಿರಿಯ ನಾಗರೀಕರ ಬಡ್ಡಿ ಆದಾಯದ TDS ಮಿತಿಯನ್ನ 1 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ವಿಮಾ ಏಜೆಂಟ್ಗಳ TDS ವಿನಾಯಿತಿ ಮಿತಿ 15 ಸಾವಿರದಿಂದ 20 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಮ್ಯೂಚ್ಯುವಲ್ ಫಂಡ್, ಷೇರು ಲಾಭಾಂಶದ ಮೇಲಿನ ವಿನಾಯಿತಿ ಹೆಚ್ಚಳವಾಗಿದ್ದು, ಟಿಡಿಎಸ್ ವಿನಾಯಿತಿ ಮಿತಿಯನ್ನ 5 ಸಾವಿರದಿಂದ 10 ಸಾವಿರಕ್ಕೆ ಏರಿಸಲಾಗಿದೆ. ಇದೂ ಕೂಡಾ ಇಂದಿನಿಂದ ಅನ್ವಯವಾಗಲಿದೆ.
ಮೇ 1ರಿಂದ ದುಬಾರಿಯಾಗಲಿದೆ ಎಟಿಎಂ ಶುಲ್ಕ!
ಬರೀ ಲಾಭಗಳಷ್ಟೇ ಅಲ್ಲ.. ಜೇಬಿಗೆ ಕತ್ತರಿ ಹಾಕುವ ಹಲವು ಘೋಷಣೆಗಳು ಮುಂದಿನ ದಿನಗಳಲ್ಲಿ ಜಾರಿಗೆ ಬರಲಿವೆ. ಆರ್ಥಿಕ ವರ್ಷ ಆರಂಭದಲ್ಲೇ ಜನಜೀವನ ದುಸ್ಥರ ಆಗುವ ಸಾಧ್ಯತೆ ಇದೆ.
ಎಟಿಎಂ ಶುಲ್ಕ ದುಬಾರಿ
ಮೇ 1ನೇ ತಾರೀಖಿನಿಂದ ಎಟಿಎಂ ಶುಲ್ಕಗಳು ಹೆಚ್ಚಳವಾಗಲಿವೆ. ಉಚಿತ ಮಿತಿ ಮೀರಿ ನಡೆಸುವ ಟ್ರ್ಯಾನ್ಸಾಕ್ಷನ್ಸ್ಗೆ ಇದು ಅನ್ವಯವಾಗಲಿದೆ. ಪ್ರತಿ ಎಟಿಎಂ ಟ್ರ್ಯಾನ್ಸಾಕ್ಷನ್ಗೆ ಈಗಿರುವ ದರದ ಮೇಲೆ ₹2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸದ್ಯ ಒಂದು ತಿಂಗಳಿಗೆ 5 ಬಾರಿ ಎಂಟಿಎಂನಲ್ಲಿ ಉಚಿತವಾಗಿ ಟ್ರ್ಯಾನ್ಸಾಕ್ಷನ್ ಮಾಡಬಹುದಾಗಿದೆ.
ಇದನ್ನೂ ಓದಿ: ಮುಂಬೈಗೆ ಆಪದ್ಬಾಂಧವನಾದ ಅಶ್ವನಿ ಕುಮಾರ್.. ಡೆಬ್ಯೂ ಪಂದ್ಯದಲ್ಲೇ KKRಗೆ ಟಕ್ಕರ್, ಆಲೌಟ್
ನಿಷ್ಕ್ರಿಯ ಮೊಬೈಲ್ ಸಂಖ್ಯೆ ಬಳಸುವವರಿಗೆ ಶಾಕ್!
ನೀವು ಗಮನಿಸಿರಬಹುದು.. ಡ್ಯುಯೆಲ್ ಸಿಮ್‌ನ ಮೊಬೈಲ್‌ನಲ್ಲಿ ಒಂದು ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತೆ. ಅದೇ ಸಂಖ್ಯೆಗೆ ರೀಚಾರ್ಜ್ ಮಾಡಿರದೇ ನಿಷ್ಕ್ರಿಯಗೊಂಡಿರುತ್ತೆ. ಇನ್ಮೇಲೆ ನಿಷ್ಕ್ರಿಯ ಮೊಬೈಲ್ ಸಂಖ್ಯೆ ಹೊಂದಿರುವವರಿಗೆ ಶಾಕ್ ತಟ್ಟಲಿದೆ.
‘ನಿಷ್ಕ್ರಿಯ’ ಶಾಕ್!
ನಿಷ್ಕ್ರಿಯಗೊಂಡ ಮೊಬೈಲ್ ಸಂಖ್ಯೆಗಳಿಗೆ ಯುಪಿಐ ಶಾಕ್ ತಟ್ಟಲಿದೆ. ನಿಷ್ಕ್ರಿಯ ಸಂಖ್ಯೆಗಳಿಗೆ ಯುಪಿಐ ಸೇವೆಯಿಂದ ಗೇಟ್‌ಪಾಸ್ ಸಿಗಲಿದೆ. ಆರ್‌ಬಿಐನಿಂದ ಎಲ್ಲ ಬ್ಯಾಂಕ್‌ಗಳಿಗೂ ಈ ಬಗ್ಗೆ ನಿರ್ದೇಶನ ಹೋಗಿದ್ದು, ಹಣಕಾಸು ವಂಚನೆ ತಡೆಯಲು ಯುಪಿಐ ಸೇವೆ ನಿಷ್ಕ್ರಿಯಗೊಳಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಹಾಲು, ಮೊಸರು, ಕರೆಂಟು, ಕಾರು.. ಇಂದಿನಿಂದ ಯಾವುದೆಲ್ಲಾ ದುಬಾರಿ; ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ