ಉಗ್ರಂ ಮಂಜು ಬಾಳಲ್ಲಿ ಹೊಸ ಹುಡುಗಿ ಎಂಟ್ರಿ..! ಗೌತಮಿ ಜಾಧವ್​ ಕೊಟ್ಟ ಸರ್​ಪ್ರೈಸ್ ಏನು?​

author-image
Veena Gangani
Updated On
ಉಗ್ರಂ ಮಂಜು ಬಾಳಲ್ಲಿ ಹೊಸ ಹುಡುಗಿ ಎಂಟ್ರಿ..! ಗೌತಮಿ ಜಾಧವ್​ ಕೊಟ್ಟ ಸರ್​ಪ್ರೈಸ್ ಏನು?​
Advertisment
  • ಬಿಗ್​ಬಾಸ್​ನಲ್ಲೇ ಉಗ್ರಂ ಮಂಜು ಹಾಗೂ ಗೌತಮಿ ಜೊತೆಗೆ ಗೆಳೆತನ
  • ಬಿಗ್​ಬಾಸ್​ ಮೂಲಕ ಮತ್ತಷ್ಟೂ ಫೇಮಸ್ ಆಗಿದ್ದ ಉಗ್ರಂ ಮಂಜು
  • ಬಿಗ್​ಬಾಸ್​ನಿಂದ ಆಚೆ ಬಂದ ಬಳಿಕ ಸಖತ್​ ಬ್ಯುಸಿಯಾದ ಸ್ನೇಹಿತರು

ಕನ್ನಡದ ಬಿಗ್​ಬಾಸ್​ ಸೀಸನ್ 11 ಅಂತ್ಯ ಕಂಡು 5 ತಿಂಗಳು ಕಳೆದಿದೆ. ಆದ್ರೆ ವೀಕ್ಷಕರು ಸ್ಪರ್ಧಿಗಳನ್ನು ಮಾತ್ರ ಮರೆತಿಲ್ಲ. ಸದ್ಯ ಬಿಗ್​ಬಾಸ್ ಸೀಸನ್ 11ರ ಸ್ಪರ್ಧಿಗಳು ಒಬ್ಬೊಬ್ಬರಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಇದನ್ನೂ ಓದಿ: ‘ಭಾರತದ ರಫೇಲ್ ಹೊಡೆದು ಉರುಳಿಸಿದ್ದೇವೆ’- ಪಾಕ್ ಪ್ರಧಾನಿ ಹೇಳಿದ 4 ಸುಳ್ಳುಗಳು ಇಲ್ಲಿವೆ!

publive-image

ಮೊನ್ನೆಯಷ್ಟೇ ಚೈತ್ರಾ ಕುಂದಾಪುರ ಅವರು ಮದುವೆಯಾಗಿದ್ದರು. ಇಂದು ಬಿಗ್​ಬಾಸ್​ ಖ್ಯಾತಿಯ ರಂಜಿತ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದರ ಮಧ್ಯೆ ಉಗ್ರಂ ಮಂಜು ಅವರ ಬಾಳಲ್ಲಿ ಸದ್ಯದಲ್ಲೇ ಹೊಸ ಹುಡುಗಿ ಆಗಮನ ಆಗುತ್ತಿದೆ.

ಈ ಬಗ್ಗೆ ಖುದ್ದು ಗೌತಮಿ ಜಾಧವ್ ಅವರೇ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ. ಯಾವುದೇ ಕ್ಯಾಪ್ಶನ್​ ಹಾಕದೇ ಹಾಡಿನ ಮೂಲಕ ಹಾಗೂ ಹುಡುಗಿ ಕಮಿಂಗ್ ಸೂನ್ ಅಂತ ಬರೆಯಲಾಗಿದೆ.

ಅದರಂತೆ ಈ ವಿಡಿಯೋ ನೋಡಿದ ಅಭಿಮಾನಿಗಳು ಮಂಜಣ್ಣನಿಗೆ ಹುಡುಗಿ ಸಿಕ್ಕರೆ ಒಳ್ಳೆದಾಗಲಿ ಆದಷ್ಟು ಬೇಗ ಮದುವೆ ಆಗಲಿ, ಮದುಮಗ ಮಂಜಣ್ಣ, ಬೇಗ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಿ ಅಕ್ಕ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment