/newsfirstlive-kannada/media/post_attachments/wp-content/uploads/2025/07/KLB-HEART-ATTACK.jpg)
ಕಲಬುರಗಿ: ರಾಜ್ಯದಲ್ಲಿ ಸಂಭವಿಸ್ತಿರುವ ಹೃದಯಾಘಾತದ ಒಂದೊಂದು ಪ್ರಕರಣವೂ ಭಯ ಹುಟ್ಟಿಸುವಂತಿವೆ. ಜೀವ ಕಳೆದುಕೊಳ್ಳುತ್ತಿರೋರೆಲ್ಲ 30 ವರ್ಷದೊಳಗಿನವರಾಗಿದ್ದಾರೆ.
ಕಲಬುರಗಿಯಲ್ಲಿ ಹೃದಯ ವಿದ್ರಾವಕ ಘಟನೆಯಲ್ಲಿ 22 ವರ್ಷದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಮೋಹಸಿನ್ ಪಟೇಲ್ (22) ಹೃದಯಾಘಾತದಿಂದ ಮೃತ ದುರ್ದೈವಿ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದನಕೇರಾ ಗ್ರಾಮದ ಮೋಹಸಿನ್​​​ಗೆ ಮೂರು ವಾರದ ಹಿಂದಷ್ಟೇ ಮದುವೆ ಆಗಿತ್ತು.
ಲಾರಿ ಚಾಲಕನಾಗಿ ಕೆಲಸ ಮಾಡ್ತಿದ್ದ ಮೋಹಸಿನ್ ಪಟೇಲ್, ಮೋಹರಂ ಹಬ್ಬದ ಸಲುವಾಗಿ ಚಂದನಕೇರಾ ಗ್ರಾಮಕ್ಕೆ ತೇರಳಿದ್ದರು. ಮನೆಯಲ್ಲಿದ್ದಾಗ ಏಕಾಏಕಿ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದಿತ್ತು. ದಾರಿ ಮಧ್ಯದಲ್ಲೇ ಪಟೇಲ್ ಜೀವ ಬಿಟ್ಟಿದ್ದಾರೆ. ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ