/newsfirstlive-kannada/media/post_attachments/wp-content/uploads/2024/01/New-year-4.jpg)
ಬೆಂಗಳೂರು: ಹೊಸ ವರ್ಷವನ್ನ ಹೊಸ ಹರುಷದಿಂದ ಬರಮಾಡಿಕೊಳ್ಳಲು ಕ್ಷಣಗಣನೆ ಶುರುವಾಗಿದೆ. ನ್ಯೂ ಇಯರ್ ವೆಲ್‌ಕಮ್ ಮಾಡಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಮಸ್ತ್ ಪಾರ್ಟಿ ಮಾಡಲು ಯುವಕರು ಪ್ಲಾನ್ ಹಾಕ್ತಿದ್ದಾರೆ. ಇದ್ರ ಮಧ್ಯೆ ಸಿಲಿಕಾನ್ ಸಿಟಿ ಮಂದಿಗೆ ಕೆಲವು ಗೈಡ್‌ಲೈನ್ಸ್ ಜಾರಿಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ಹೊಸ ವರ್ಷಾಚರಣೆ ವೇಳೆ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ.
2024ಕ್ಕೆ ಗುಡ್ ಬೈ ಹೇಳಿ 2025ರ ಹೊಸ ವರ್ಷವನ್ನ ಬರಮಾಡಿಕೊಳ್ಳಲು ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷದ ಆಚರಣೆಗೆ ಕೇವಲ ಇನ್ನೊಂದೆ ದಿನ ಬಾಕಿ ಉಳಿದಿದೆ. ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆಗೆ ಸಕಲ ತಯಾರಿ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧತೆ ಜೋರಾಗಿದೆ.
ಸಿಟಿ ಮಂದಿಗೆ ನ್ಯೂ ಇಯರ್ ‘ಗೈಡ್‌ಲೈನ್ಸ್’
ಸಿಲಿಕಾನ್ ಸಿಟಿಯ ರೋಡ್‌ಗಳಲ್ಲಿ ಹೊಸ ವರ್ಷದ ರಂಗು ಮೇಳೈಸುತ್ತಿದೆ. ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಿ ನ್ಯೂ ಇಯರ್ ಸೆಲಬ್ರೇಷನ್‌ಗೆ ಸಿದ್ಧತೆ ಜೋರಾಗಿದೆ. ಯಾವುದೇ ಅಹಿತಕರ ಕಹಿ ಘಟನೆ ನಡೆಯದಂತೆ ಪೊಲೀಸ್ ಪಡೆ ಕಣ್ಣಿಡೋಕೆ ಸಜ್ಜಾಗಿದೆ. ಇತ್ತ ಪ್ರತಿ ವರ್ಷದಂತೆ ಈ ಬಾರಿ ಹೊಸ ವರ್ಷಕ್ಕೆ ಪಾಲಿಕೆ ಕೂಡ ಕೈ ಜೋಡಿಸೋಕೆ ಸಜ್ಜಾಗಿದೆ. ಕಸದ ನಿರ್ವಹಣೆ, ಸಿಸಿಟಿವಿ ಕ್ಯಾಮರಾ ನಿರ್ವಹಣೆ ಸೇರಿ ಇನ್ನಿತರ ಕೆಲಸಗಳಲ್ಲಿ ಪೊಲೀಸ್ ಇಲಾಖೆ ಜೊತೆ ಕೈಜೋಡಿಸೋಕೆ ಮುಂದಾಗಿದೆ. ಜೊತೆಗೆ ಪೊಲೀಸ್ ಇಲಾಖೆ ಕೆಲ ಮಾರ್ಗಸೂಚಿಗಳನ್ನೂ ಹೊರಡಿಸಿದೆ.
ಕಾಫಿನಾಡಲ್ಲೂ ಹೊಸ ವರ್ಷಾಚರಣೆಗೆ ‘ಮಾರ್ಗಸೂಚಿ’
ಚಿಕ್ಕಮಗಳೂರು ಅಂದ್ರೆ ಪ್ರವಾಸಿಗರ ಹಾಟ್‌ಸ್ಪಾಟ್. ಅದ್ರಲ್ಲೂ ನ್ಯೂ ಇಯರ್ ಸೆಲಬ್ರೇಷನ್‌ಗೆ ಬೆಸ್ಟ್ ಪ್ಲೇಸ್. ಈಗಾಗಲೇ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಡ್ತಿದ್ದಾರೆ. ಆದ್ರೀಗ ಹೊಸ ವರ್ಷದ ಆಚರಣೆಗೆ ಜಿಲ್ಲಾಡಳಿತದಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.
ಡಿ.31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 6ರವರೆಗೆ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಲಾಗಿದೆ. ರೇವ್ ಪಾರ್ಟಿ ರೀತಿಯ ಕಾರ್ಯಕ್ರಮ ಮಾಡಿದ್ರೆ ಆಯೋಜಕರ ಮೇಲ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ. ರಾತ್ರಿ 10ರ ನಂತರ ಔಟ್ ಡೋರ್ ಡಿಜೆಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಕುಡಿದು ವಾಹನ ಚಾಲನೆ, ವೀಲ್ಹಿಂಗ್ ಮಾಡೋರ ಮೇಲೆ ಖಾಕಿ ಹದ್ದಿನ ಕಣ್ಣಿಟ್ಟಿದೆ. ಆದಾಯಕ್ಕಾಗಿ ಇದೇ ಮೊದಲ ಬಾರಿಗೆ ಸರ್ಕಾರ ಸಿಎಲ್ 5 ಲೈಸೆನ್ಸ್ ಕೊಟ್ಟಿದ್ದು, ಸಿಎಲ್ 5 ಲೈಸನ್ಸ್ ಪಡೆದವರು ಸಿಸಿ ಕ್ಯಾಮರಾ ಹಾಕೋದು ಕಡ್ಡಾಯವಾಗಿದೆ.
ಹೊಸ ವರ್ಷದ ಹಿನ್ನೆಲೆ ಶಿವಮೊಗ್ಗದ ವಿಶ್ವವಿಖ್ಯಾತ ಜೋಗ ಜಲಪಾತವನ್ನು ಹೊರಗಡೆಯಿಂದ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಕಳೆದ 3 ತಿಂಗಳಿಂದ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಜೋಗದ ಮಹಾದ್ವಾರದಿಂದ 50 ಮೀಟರ್ ದೂರದಲ್ಲಿ ನಿಂತು ಜಲಪಾತದ ರಮಣೀಯ ದೃಶ್ಯವನ್ನ ಸವಿಯಬಹುದಾಗಿದೆ. ಇನ್ನುಳಿದಂತೆ ಯಾವುದೇ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿಲ್ಲ.
ಇದನ್ನೂ ಓದಿ:ನನ್ನ ಮನಸಿಗೆ ನೋವು ಮಾಡಬೇಡಿ; ಅಭಿಮಾನಿಗಳಿಗೆ ಕೈ ಮುಗಿದು ಬೇಡಿಕೊಂಡ ನಟ ಯಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ