/newsfirstlive-kannada/media/post_attachments/wp-content/uploads/2025/03/karna.jpg)
ಕನ್ನಡತಿ ಮೂಲಕ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಮಿಂಚಿದವರು ನಟ ಕಿರಣ್ ರಾಜ್. ಸಾಲು ಸಾಲು ಸಿನಿಮಾಗಳ ಆಫರ್ ನಡುವೆಯೂ ಡಾಕ್ಟರ್ ಕರ್ಣ ಪಾತ್ರದ ಮೂಲಕ ಧಾರಾವಾಹಿಗೆ ಮರುಳುತ್ತಿದ್ದಾರೆ. ಮಹಿಳಾ ಪ್ರಧಾನ ಕಥೆಗಳೇ ಹೆಚ್ಚು.
ಇದನ್ನೂ ಓದಿ:ರೆಬೆಲ್ ಸ್ಟಾರ್ ಮೊಮ್ಮಗ ಅಂದ್ರೆ ಸುಮ್ನೆನಾ? ಫ್ಯಾನ್ಸ್ ಮನಗೆದ್ದ ಅವಿವಾ ಬಿದ್ದಪ್ಪ; ಟಾಪ್ 10 ಫೋಟೋ ಇಲ್ಲಿವೆ!
ಧಾರಾವಾಹಿ ಟೈಟಲ್ ಕೂಡ ನಾಯಕಿಯ ಮೂಲಕ ಶುರುವಾಗ್ತಿರುತ್ತೆ. ಎಲ್ಲೋ ಬೆರಳಿಣಿಕೆಯಷ್ಟು ನಾಯಕನನ್ನ ಒಳಗೊಂಡ ಶೀರ್ಷಿಕೆಗಳು ಬರುತ್ತೆ. ಕರ್ಣ ಟೋಟಲಿ ವಿಭಿನ್ನ ಧಾರಾವಾಹಿ. ನಾಯಕನ ಪಾತ್ರ ಹಲವು ಆಯಾಮಗಳಲ್ಲಿ ಸಾಗುತ್ತೆ. ತೂಕ ಇರೋ ಪಾತ್ರ. ಕರ್ಣ ಪ್ರೋಮೋ ರಿಲೀಸ್ ಆಗ್ತಿದ್ದಂಗೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿದೆ. ಮಿಲಿಯನ್ ಗಟ್ಟಲೇ ವಿವ್ಸ್ ಪಡೆದು ಟ್ರೆಂಡಿಂಗ್ನಲ್ಲಿದೆ.
ಕಿರಣ್ ರಾಜ್ ಅಭಿಮಾನಿಗಳ ಸಂಭ್ರಮದ ಜೊತೆಗೆ ಈಗ ಹೆಚ್ಚು ಚರ್ಚೆ ಆಗ್ತಿರೋ ವಿಚಾರ ಕಿರಣ್ಗೆ ನಾಯಕಿ ಯಾರು? ಕರ್ಣ ಧಾರಾವಾಹಿಗೆ ಬರ್ತಿರೋ ಆ ನಟಿ ಯಾರು ಅನ್ನೋದು. ಈ ಹಿಂದೆ ಕಿರಣ್ ಜೊತೆ ನಟಿಸಿರೋ ನಾಯಕಿ ರಂಜಿನಿ ರಾಘವನ್ ಮತ್ತೆ ಬರ್ಬೇಕು ಅಂತಿದ್ರೇ ಮೊತ್ತೊಂದಿಷ್ಟು ಅಭಿಮಾನಿಗಳು ಮೋಕ್ಷಿತಾ, ಇಲ್ಲ ಭವ್ಯಾ ಬರ್ಲಿ ಅಂತಿದ್ದಾರೆ.
ಇವೆಲ್ಲಾ ಅಭಿಮಾನಿಗಳು ಪ್ರೀತಿ ಜೋಡಿ ಮಾಡ್ತಿರೋ ಹೆಸರು. ಆದ್ರೇ ಕರ್ಣಗೆ ನಾಯಕಿ ಇವ್ರು ಯಾರು ಅಲ್ಲ. ಹೌದು, ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರೋ ಕರ್ಣ ಧಾರಾವಾಹಿಗೆ ಫ್ರೆಶ್ ಫೇಸ್ ಹುಡುಕುತ್ತಿದ್ದಾರೆ. ನಾಯಕಿ ಇನ್ನು ಫೈನಲ್ ಆಗಿಲ್ಲ. ಮೂಲಗಳ ಪ್ರಕಾರ ಪ್ರೋಮೋ ಶೂಟಿಂಗ್ ಮಾತ್ರ ಆಗಿದ್ದು, ಇನ್ನು ಧಾರಾವಾಹಿ ಶೂಟಿಂಗ್ ಆರಂಭವಾಗಿಲ್ಲ. ಒಟ್ಟಿನಲ್ಲೇ ಕರ್ಣನಿಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದ್ದು, ಈ ವರ್ಷದ ಬಹು ನಿರೀಕ್ಷಿತ ಧಾರಾವಾಹಿ ಅನ್ನೋದ್ರಲ್ಲಿ ಡೌಟ್ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ