/newsfirstlive-kannada/media/post_attachments/wp-content/uploads/2024/09/JOBS-3.jpg)
ಭಾರತ ಸರ್ಕಾರದ ಸಂಸ್ಥೆಯಾದ ನ್ಯೂ ಇಂಡಿಯಾ ಅಶ್ಯೂರೆನ್ಸ್ (ಎನ್ಎಐಸಿಎಲ್) ಸಂಸ್ಥೆ ಅಪ್ರೆಂಟಿಸ್‌ಶಿಪ್ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ. ಸರ್ಕಾರಿ ವಿಮಾ ಕಂಪನಿಯಲ್ಲಿ ಅಧಿಕಾರಿಯಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶ ಆಗಿದೆ.
ವಿಮಾ ವಲಯದಲ್ಲಿ ಸರ್ಕಾರಿ ಉದ್ಯೋಗ ಬಯಸುವವರಿಗೆ ಅತ್ಯುತ್ತಮ ಅವಕಾಶ ಇದಾಗಿದ್ದು ನ್ಯೂ ಇಂಡಿಯಾ ಅಶ್ಯೂರೆನ್ಸ್ ನೇಮಕಾತಿ ಮಾಡುತ್ತಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅಪ್ಲೇ ಮಾಡಬೇಕು. ಇನ್ನು ಈ ಹುದ್ದೆಗೆ ಸಂಬಂಧಿಸಿದ ಪ್ರಮುಖವಾದ ದಿನಾಂಕ, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಸೇರಿ ಇತರೆ ಮಾಹಿತಿ ಇಲ್ಲಿ ನೀಡಲಾಗಿದೆ. ಕರ್ನಾಟಕದಲ್ಲೂ 13 ಅಪ್ರೆಂಟಿಸ್‌ಶಿಪ್ ಹುದ್ದೆಗಳು ಇವೆ.
ಇದನ್ನೂ ಓದಿ:ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?
ಎನ್ಎಐಸಿಎಲ್ನಲ್ಲಿ ಒಟ್ಟು 325 ಹುದ್ದೆಗಳು ಖಾಲಿ ಇವೆ
ವಯೋಮಿತಿ-
21 ವರ್ಷದಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಯೋಮಿತಿ- ಎಸ್ಸಿ ಎಸ್ಟಿಗೆ 5 ವರ್ಷಗಳ ಸಡಿಲಿಕೆ
ಒಬಿಸಿ, ಜನರಲ್ಗೆ 3 5 ವರ್ಷಗಳ ಸಡಿಲಿಕೆ
ವಿದ್ಯಾರ್ಹತೆ-
ಅಭ್ಯರ್ಥಿಗಳು ಪದವಿ ಅಥವಾ ಸ್ನಾತ್ತಕೋತರ ಪದವಿಯನ್ನ ಪೂರ್ಣಗೊಳಿಸಿರಬೇಕು
ಇದನ್ನೂ ಓದಿ: ಡಿಗ್ರಿ ಮಾಡಿದವರಿಗೆ ಗುಡ್ನ್ಯೂಸ್; ಕೆನರಾ ಬ್ಯಾಂಕ್ನಲ್ಲಿ 3 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ!
ಆಯ್ಕೆ ಪ್ರಕ್ರಿಯೆ-
ಆನ್ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳು ಆಯ್ಕೆ
ಅರ್ಜಿ ಶುಲ್ಕ ಎಷ್ಟು ಇರುತ್ತದೆ..?
- ಎಲ್ಲ ಜನರಲ್ ಅಭ್ಯರ್ಥಿಗಳಿಗೆ- 944 ರೂಪಾಯಿ
- ಎಲ್ಲ ವರ್ಗದ ಮಹಿಳೆಯರು- 708 ರೂಪಾಯಿ
- ಎಸ್ಸಿ, ಎಸ್ಟಿ ಮತ್ತು ವಿಶೇಷ ಚೇತನರು- 708 ಮತ್ತು 472 ರೂಪಾಯಿ
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ- 21 ಸೆಪ್ಟೆಂಬರ್ 2024
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 05 ಅಕ್ಟೋಬರ್ 2024
- ಅಭ್ಯರ್ಥಿಗಳಿಗೆ ಪರೀಕ್ಷೆಯ ದಿನಾಂಕ- 12 ಅಕ್ಟೋಬರ್ 2024
ಅರ್ಜಿ ಸಲ್ಲಿಕೆ ಮಾಡಲು ದಾಖಲೆಗಳು ಏನೇನು ಬೇಕು..?
- ಆಧಾರ್ ಕಾರ್ಡ್
- ಇ-ಮೇಲ್ ಐಡಿ
- ಮೊಬೈಲ್ ನಂಬರ್
- ಎರಡು ಫೋಟೋಗಳು (1 ಎಂಬಿಗಿಂತ ಕಡಿಮೆ)
- ಪದವಿ ಅಂಕಗಪಟ್ಟಿಗಳು (1 ಎಂಬಿಗಿಂತ ಕಡಿಮೆ)
ಅಪ್ಲೇ ಮಾಡುವ ಲಿಂಕ್-https://nats.education.gov.in/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ