/newsfirstlive-kannada/media/post_attachments/wp-content/uploads/2025/04/radika-pandith.jpg)
ರಾಮಾಚಾರಿ, ದೃಷ್ಟಿಬೊಟ್ಟು, ನೂರು ಜನ್ಮಕ್ಕೂ ಅಂತಹ ಧಾರಾವಾಹಿಗಳನ್ನು ನಿರ್ದೇಶನ ಮಾಡಿರುವ ನಿರ್ದೇಶಕ ಶ್ರವಂತ್ ಅವರ ಗರಡಿಯಿಂದ ಹೊಸ ಧಾರಾವಾಹಿ ಬರ್ತಿದೆ.
ಇದನ್ನೂ ಓದಿ:Newsfirst ಜ್ಞಾನ ಸಂಗಮಕ್ಕೆ ಬಂದರೆ ವಿದ್ಯಾರ್ಥಿಗಳಿಗೆ ಏನು ಉಪಯೋಗ?
ಈಗಾಗಲೇ ಪ್ರೋಮೋ ಕೂಡ ರಿಲೀಸ್ ಆಗಿದೆ. ನಂದಗೋಕುಲ ಟೈಟಲ್ನೊಂದಿಗೆ ತೆರೆಗೆ ಬರಲು ಸಜ್ಜಾಗ್ತಿದೆ ಧಾರಾವಾಹಿ.
ಜಾಹ್ನವಿ ಫಿಲ್ಮ್ ಎಂಫೈರ್ ಎಂಬ ಹೊಸ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿರೋ ಶ್ರವಂತ್ ಹಾಗೂ ಪತ್ನಿ ರಾಧಿಕಾ ಹೊಸ ಧಾರಾವಾಹಿ ನಿರ್ಮಾಣ ಮಾಡ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗೋಕು ಮೊದಲು ಈ ಟಿವಿಯಲ್ಲಿ ಪ್ರಸಾರವಾಗ್ತಿದ್ದ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಸೂಪರ್ ಹಿಟ್ ಧಾರಾವಾಹಿ ನಂದಗೋಕುಲ ಟೈಟಲ್ನಲ್ಲೇ ಈ ಹೊಸ ಕತೆ ಮೂಡಿ ಬರಲಿದೆ.
ಈ ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ಅಭಿಷೇಕ್, ಅರವಿಂದ್, ವಿಜಯ್ ಚಂದ್ರ ಹಾಗೂ ಯಶವಂತ್ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ