Advertisment

ಭಾರತೀಯ ಕ್ರಿಕೆಟ್ ಲೋಕದಲ್ಲಿ ಮತ್ತೊಬ್ಬ ಕಿಂಗ್​ನ ಉದಯ; ಬೂಮ್ರಾಗೆ ಈ ಟೈಟಲ್ ಸಿಕ್ಕಿದ್ದೇಕೆ ಗೊತ್ತಾ?

author-image
Gopal Kulkarni
Updated On
‘ಜಸ್​ಪ್ರೀತ್ ಬೂಮ್ರಾ ಚಾಂಪಿಯನ್ ಆಟಗಾರ’.. ಹಿಟ್​ಮ್ಯಾನ್ ರೋಹಿತ್ ಹೀಗೆ ಅಂದಿದ್ಯಾಕೆ?
Advertisment
  • ಬೂಮ್ರಾ.. ಕಿಂಗ್ ಆಫ್ ಇಂಡಿಯನ್ ಕ್ರಿಕೆಟ್​!
  • 2024 ಜಸ್​ಪ್ರೀತ್ ಬೂಮ್ರಾ ನಾಮ ಸಂವತ್ಸರ..!
  • 2024ರ ಟೆಸ್ಟ್​ ಕ್ರಿಕೆಟ್​​ನಲ್ಲಿ ಬೂಮ್ರಾಗಿಲ್ಲ ಸಾಟಿ..!

ಕ್ರಿಕೆಟ್ ಲೋಕದ ಕಿಂಗ್ ಯಾರು ಅಂದ್ರೆ, ಇಡೀ ವಿಶ್ವ ಕ್ರಿಕೆಟ್ ವಿರಾಟ್ ಕೊಹ್ಲಿಯತ್ತ ಕೈ ತೋರಿಸುತ್ತೆ. ಆದರೀಗ, ಕೊಹ್ಲಿ ಕಥೆ ಮುಗಿತಾಯಿದ್ದಂತೆ. ಇಂಡಿಯನ್ ಕ್ರಿಕೆಟ್​ ಲೋಕದ ನ್ಯೂ ಕಿಂಗ್​​​​ ಜಸ್​ಪ್ರೀತ್ ಬೂಮ್ರಾ.

Advertisment

ಜಸ್​ಪ್ರೀತ್ ಬೂಮ್ರಾ, ಟೀಮ್ ಇಂಡಿಯಾದ ಬೌಲಿಂಗ್ ಸ್ಟ್ರೆಂಥ್​, ಈತ ದಾಳಿಗಿಳಿದ್ರೆ, ಎದುರಾಳಿ ಬ್ಯಾಟ್ಸ್​​ಮನ್​​ಗಳು ಬೆದರುತ್ತಾರೆ. ಈತನ ಓವರ್ ಮುಗಿದ್ರೆ ಸಾಕು ಅಂತ ದೇವರಿಗೆ ಬೇಡಿಕೊಳ್ತಾರೆ. ಟಾರ್ಗೆಟ್ ಫಿಕ್ಸ್​ ಮಾಡಿ ವಿಕೆಟ್ ಬೇಟೆಯಾಡುವ ಈ ಬೂಮ್ರಾ, ಆನ್​ಫೀಲ್ಡ್​ನ ರಿಯಲ್​​ ವಾರಿಯರ್​. ಟ್ರೂ ಫೈಟರ್, ಇಂಡಿಯನ್ ಬೌಲಿಂಗ್ ಅಟ್ಯಾಕ್​​ನ ರಾಜ. ಅಷ್ಟೇ ಅಲ್ಲ.! ಇಂಡಿಯನ್ ಕ್ರಿಕೆಟ್​ನ ದಿ ರಿಯಲ್ ಕಿಂಗ್.

publive-image

ಜಸ್​ಪ್ರೀತ್ ಬೂಮ್ರಾ, ಇಂಡಿಯನ್ ಕ್ರಿಕೆಟ್​ನ ರಿಯಲ್ ಕಿಂಗ್, ಬೂಮ್ರಾ ಟ್ರ್ಯಾಕ್ ರೆಕಾರ್ಡ್​ಗಳೇ​ ಹೇಳುರುವ ಮಾತು. ಈ ಬೂಮ್ರಾ ರಣರಂಗಕ್ಕಿಳಿದ ಮೇಲೆ ಎದುರಾಳಿ ಕಥೆ ಮಗಿದಂತೆ. ಸಹ ಆಟಗಾರರು ಸಾಥ್ ನೀಡಲಿ, ನೀಡದಿರಲಿ 200 ಪರ್ಸೆಟ್ ಎಫರ್ಟ್ ಹಾಕೋ ಬೂಮ್ರಾ ಟೀಮ್​ ಇಂಡಿಯಾದ ರಿಯಲ್​ ಮ್ಯಾಚ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ.

2024 ಜಸ್​ಪ್ರೀತ್ ಬೂಮ್ರಾ ‘ನಾಮ ಸಂವತ್ಸರ’..!
2024, ಈ ವರ್ಷ ನಿಜಕ್ಕೂ ಬೂಮ್ರಾ ನಾಮ ಸಂವತ್ಸರ ಅಂತಾನೇ ಹೇಳಬಹುದು. ಯಾಕಂದ್ರೆ, 2024ರಲ್ಲಿ ಬೂಮ್ರಾ ಮುಟ್ಟಿದೆಲ್ಲ ಚಿನ್ನ. ಆಡಿದ ಪಂದ್ಯದಲ್ಲೆಲ್ಲಾ ದರ್ಬಾರ್​. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​, 2024ರಲ್ಲಿ ಜಸ್​ಪ್ರೀತ್​​ ಬೂಮ್ರಾ ಬೇಟೆಯಾಡಿದ ವಿಕೆಟ್ಸ್​. 2024ರಲ್ಲಿ 21 ಪಂದ್ಯಗಳ ಪೈಕಿ ಒಟ್ಟು 34 ಇನ್ನಿಂಗ್ಸ್​​ಗಳಲ್ಲಿ ಬೌಲಿಂಗ್​ ಮಾಡಿರೋ ಬೂಮ್ರಾ, 86 ವಿಕೆಟ್ ಬೇಟೆಯಾಡಿದ್ದಾರೆ. ಈ ಪೈಕಿ 45 ರನ್ ನೀಡಿ 6 ವಿಕೆಟ್ ಕಬಳಿಸಿರುವುದು ಬೆಸ್ಟ್​ ಪರ್ಫಾಮೆನ್ಸ್​.

Advertisment

2024ರಲ್ಲಿ ಬೂಮ್ರಾ ಆಡಿದ 13 ಟೆಸ್ಟ್‌ ಪಂದ್ಯಗಳ 26 ಇನ್ನಿಂಗ್ಸ್​ಗಳಿಂದ ಬರೋಬ್ಬರಿ 71 ವಿಕೆಟ್‌ ಬೇಟೆಯಾಡಿದ್ದಾರೆ. 5 ಬಾರಿ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.
71 ವಿಕೆಟ್​ ಬೇಟೆಯಾಡಿರೋ ಬೂಮ್ರಾ ಈ ಬಾರಿ ವಿಶ್ವದ ಹೈಯೆಸ್ಟ್ ವಿಕೆಟ್​ ಟೇಕರ್​ ಆಗಿ ಹೊರಹೊಮ್ಮಿದ್ದಾರೆ. ಬೇರೆ ಯಾವೊಬ್ಬ ಬೌಲರ್​​​​ ಕೂಡ, ಬೂಮ್ರಾ ಹತ್ತಿರಕ್ಕೂ ಯಾರು ಸುಳಿದಿಲ್ಲ.
2024ರಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್‌ ವೇಗಿ ಗಸ್​ ಅಟ್ಕಿನ್ಸನ್​, 21 ಇನ್ನಿಂಗ್ಸ್​ಗಳಿಂದ 52 ವಿಕೆಟ್ ಉರುಳಿಸಿದ್ದಾರೆ. ಗಸ್​ ಅಟ್ಕಿನ್ಸನ್​​ ಹಾಗೂ ಬೂಮ್ರಾ ನಡುವೆ ಬರೋಬ್ಬರಿ 19 ವಿಕೆಟ್‌ಗಳ ಅಂತರವಿದೆ. ಶೋಯೆಬ್ ಬಷೀರ್ 25 ಇನ್ನಿಂಗ್ಸ್​ಗಳಿಂದ 49 ವಿಕೆಟ್ ಉರುಳಿಸಿದ್ದಾರೆ. ನ್ಯೂಜಿಲೆಂಡ್​ನ ಮ್ಯಾಟ್ ಹೆನ್ರಿ, ರವೀಂದ್ರ ಜಡೇಜಾ 21 ಇನ್ನಿಂಗ್ಸ್​ಗಳಿಂದ ತಲಾ 48 ವಿಕೆಟ್ ಬೇಟೆಯಾಡಿದ್ದಾರೆ.

ಇದನ್ನೂ ಓದಿ: ಭಾರತ-ಇಂಗ್ಲೆಂಡ್ ಮಧ್ಯೆ ಮಹತ್ವದ ಸರಣಿ; ಬುಮ್ರಾ ಆಡೋದು ಡೌಟ್; ಕಾರಣವೇನು?

ಸದ್ಯ ಬಾರ್ಡರ್ ಗವಾಸ್ಕರ್ ಟೆಸ್ಟ್​ ಸರಣಿಯಲ್ಲೂ ಬೂಮ್ರಾ ಬಿರುಗಾಳಿಯ ಬೌಲಿಂಗ್ ನಡೆಸ್ತಿದ್ದಾರೆ. ಆಸ್ಟ್ರೇಲಿಯನ್ ಪೇಸರ್​​ಗಳನ್ನೇ ಹಿಂದಿಕ್ಕಿರುವ ಬೂಮ್ರಾ, 4 ಟೆಸ್ಟ್​ಗಳಿಂದ ಬರೋಬ್ಬರಿ 30 ವಿಕೆಟ್​​ ಉರುಳಿಸಿದ್ದಾರೆ.

Advertisment

publive-image

ಪ್ರಸಕ್ತ ಬಾರ್ಡರ್ ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ 8 ಇನ್ನಿಂಗ್ಸ್​ಗಳಿಂದ ಬೂಮ್ರಾ, 30 ವಿಕೆಟ್ ಬೇಟೆಯಾಡಿದ್ರೆ. ಆಸ್ಟ್ರೇಲಿಯನ್ ಕ್ಯಾಪ್ಟನ್ ಪ್ಯಾಟ್​ ಕಮಿನ್ಸ್​ ಕೇವಲ 20 ವಿಕೆಟ್ ಉರುಳಿಸಿದ್ದಾರೆ. ಸಿರಾಜ್ 16 ವಿಕೆಟ್ ಬೇಟೆಯಾಡಿದ್ದಾರೆ. ಹೋಮ್ ಕಂಡೀಷನ್ಸ್​ ಲಾಭದ ಹೊರತಾಗಿಯೂ ಕಮಿನ್ಸ್​ಗಿಂತ ಬೂಮ್ರಾ 10 ವಿಕೆಟ್ ಹೆಚ್ಚುವರಿ ವಿಕೆಟ್ ಪಡೆದಿದ್ದಾರೆ. ಇದು ಬೂಮ್ರಾರ ಸ್ಟ್ರೆಂಥ್ ಏನು ಅನ್ನೋದನ್ನ ಸಾರಿ ಸಾರಿ ಹೇಳುತ್ತೆ. ಇದೇ ಕಾರಣಕ್ಕೆ ಆರ್​ಸಿಬಿಯ ಮಾಜಿ ಕೋಚ್ ಸೈಮನ್ ಕ್ಯಾಟಿಚ್, ಬೂಮ್ರಾರನ್ನು ಕಿಂಗ್ ಎಂದಿದ್ದಾರೆ.

publive-image

ವಿಶ್ವಕಪ್ ಗೆಲುವಿನ ರಿಯಲ್ ರೂವಾರಿ ಬೂಮ್ರಾ
ಟೆಸ್ಟ್​ ಕ್ರಿಕೆಟ್​ ಹೊರತುಪಡಿಸಿ, ಈ ವರ್ಷ ಜಸ್​ಪ್ರೀತ್ ಬೂಮ್ರಾ ಆಡಿದ್ದು ಟಿ20 ಕ್ರಿಕೆಟ್​ ಮಾತ್ರ. ಅದು ಕೂಡ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಾತ್ರ.! ಇಂಥ ಸ್ಪೆಷಲ್ ಟೂರ್ನಿಯಲ್ಲಿ ಕಣಕ್ಕಿಳಿದ ಬೂಮ್ರಾ, ಟೀಮ್ ಇಂಡಿಯಾದ ಬೆನ್ನುಲುಬಾಗಿದ್ದರು. 8 ಪಂದ್ಯಗಳಿಂದ 4ರ ಏಕಾನಮಿಯಲ್ಲಿ 15 ವಿಕೆಟ್ ಉರುಳಿಸಿದ್ದ ಬೂಮ್ರಾ, ಮ್ಯಾನ್ ಆಫ್ ದಿ ಸಿರೀಸ್ ಅವಾರ್ಡ್ ಗೆದ್ರು. ಟಿ20 ವಿಶ್ವಕಪ್ ಗೆಲುವಿನ ರೂವಾರಿಯಾದ್ರು.

ಇದನ್ನೂ ಓದಿ:ಟೀಂ ಇಂಡಿಯಾ ಮುಂದೆ ಬಿಗ್​ ಟಾಸ್ಕ್.. ಹೊಸ ವರ್ಷದ ರೆಸ್ಯೂಲೇಷನ್ ಹೆಂಗಿದೆ..?

Advertisment

ಬೂಮ್ರಾ ಇಂಡಿಯನ್ ಕ್ರಿಕೆಟ್​ನ ನಯಾ ಕಿಂಗ್ ಅನ್ನೋದನ್ನ ಆಟವೇ ಹೇಳ್ತಿದೆ. ಕೊಹ್ಲಿ ಬದಲಾಗಿ ಬೂಮ್ರಾಗೆ ಕಿಂಗ್ ಅಂತಾ ಪಟ್ಟ ಕಟ್ಟಿರೋದ್ರಲ್ಲಿ ಅರ್ಥವಿದೆ. ವಿರಾಟ್ ಕೊಹ್ಲಿ ಬಿಗ್ ಇನ್ನಿಂಗ್ಸ್​ ಕಟ್ಟುವಲ್ಲಿ ಪದೇ ಪದೇ ಫೇಲ್​ ಆಗಿದ್ದಾರೆ. ಆದ್ರೆ, ಇತರರು ಸಾಥ್ ನೀಡದಿದ್ರೂ, ಬೂಮ್ರಾ ಏಕಾಂಗಿ ಹೋರಾಟ ನಡೆಸ್ತಿದ್ದಾರೆ. ರಿಯಲ್ ಮ್ಯಾಚ್ ವಿನ್ನರ್ ಅನಿಸಿದ್ದಾರೆ. ಹೀಗಾಗಿ ಬೂಮ್ರಾನ ಟೀಮ್ ಇಂಡಿಯಾದ ಕಿಂಗ್ ಅಂದ್ರೆ ತಪ್ಪೇನು.?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment