newsfirstkannada.com

ದೇವರ ನಾಡಿಗೆ ಹೊಸ ಹೆಸರು; ಕೇರಳ ಇನ್ಮುಂದೆ ಕೇರಳ ಅಲ್ಲ; ಮತ್ತೇನು?

Share :

09-08-2023

    ದೇವರ ನಾಡು, ಪ್ರವಾಸಿಗರ ತವರು ಕೇರಳ ಇನ್ಮುಂದೆ ಕೇರಳ ಅಲ್ಲ

    ಹೊಸ ಹೆಸರಿಟ್ಟ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸು

    ದೇಶಾದ್ಯಂತ ಎಲ್ಲಾ ಭಾಷೆಯಲ್ಲೂ ಬಳಸುವಂತೆ ಸಿಎಂ ಕೋರಿಕೆ

ತಿರುವನಂತಪುರಂ: ದೇವರ ನಾಡು, ಪ್ರವಾಸಿಗರ ತವರು ಕೇರಳ ಇನ್ಮುಂದೆ ಕೇರಳ ಅಲ್ಲ. ಹೊಸ ಹೆಸರಿಟ್ಟಿರೋ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಿಎಂ ಪಿಣರಾಯಿ ವಿಜಯನ್ ಕೇರಳ ರಾಜ್ಯಕ್ಕೆ ಕೇರಳಂ ಅನ್ನೋ ನಾಮಕರಣ ಮಾಡಿದ್ದು, ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಿದ್ದಾರೆ. ಇನ್ಮುಂದೆ ದಾಖಲೆಗಳಲ್ಲಿ ಕೇರಳ ಅನ್ನೋದರ ಬದಲು ಕೇರಳಂ ಅಂತಾ ದಾಖಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸಿಎಂ ಪಿಣರಾಯಿ ವಿಜಯನ್ ಅವರು ವಿಧಾನಸಭೆಯಲ್ಲಿ ಕೇರಳ ಹೆಸರು ಬದಲಾವಣೆಯ ಮಸೂದೆ ಮಂಡಿಸಿದ್ದರು. ಕಾಂಗ್ರೆಸ್ ಹಾಗೂ ಪ್ರತಿಪಕ್ಷ UDFನ ಸದಸ್ಯರು ಯಾವುದೇ ತಿದ್ದುಪಡಿಗೆ ಮನವಿ ಮಾಡಲಿಲ್ಲ. ಹೀಗಾಗಿ ಕೇರಳ ರಾಜ್ಯದ ಹೆಸರು ಬದಲಾಯಿಸುವ ಮಸೂದೆಯು ಅವಿರೋಧವಾಗಿ ಅಂಗೀಕರವಾಗಿದೆ. ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ರಾಜ್ಯದ ಹೆಸರು ಬದಲಾವಣೆಗೆ ಅವಕಾಶವಿದೆ. ಈ ಮೂಲಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಈ ಮಸೂದೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ರೆ ಅಧಿಕೃತವಾಗಿ ಕೇರಳ ರಾಜ್ಯ ಕೇರಳಂ ಆಗಲಿದೆ.

ಕೇರಳ ರಾಜ್ಯ ‘ಕೇರಳಂ’ ಯಾಕೆ?

ಸದನದಲ್ಲಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್ ಅವರು, ನವೆಂಬರ್ 1, 1956ರಲ್ಲಿ ಕೇರಳ ರಾಜ್ಯವನ್ನು ಭಾಷೆಯ ಆಧಾರದ ಮೇಲೆ ರಚಿಸಲಾಯಿತು. ಕೇರಳ ಮಲೆಯಾಳಂ ಅಲ್ಲ ಕೇರಳಂ ಅನ್ನೋದು ಮಲೆಯಾಳಂ ಭಾಷೆಯಾಗಿದೆ. ನಾವು ಮಲೆಯಾಳಂ ಮಾತನಾಡುವ ಭಾಷಿಗರ ರಾಜ್ಯವನ್ನು ಒಗ್ಗೂಡಿಸಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿಂದಲೂ ಈ ಹೋರಾಟ ನಡೆಯುತ್ತಿದೆ. ಭಾರತದ ಸಂವಿಧಾನದಲ್ಲಿ ನಮ್ಮ ರಾಜ್ಯವನ್ನು ಕೇರಳ ಎಂದು ದಾಖಲಿಸಲಾಗಿದೆ. ಹೀಗಾಗಿ ಕೇರಳ ಎನ್ನುವ ಬದಲು ಕೇರಳಂ ಎಂದು ಬದಲಾಯಿಸಬೇಕು. ಹೀಗಾಗಿ ಈ ಮಸೂದೆಯನ್ನು ಮಂಡಿಸಲಾಗಿದೆ ಎಂದು ವಿವರಣೆ ನೀಡಿದ್ದಾರೆ.

ಈ ಮಸೂದೆ ಪಾಸ್ ಮಾಡಿರೋ ಕೇರಳ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಅಂಗೀಕಾರಕ್ಕೆ ಕಳುಹಸಿದೆ. ಇದರ ಜೊತೆಗೆ ಇನ್ಮುಂದೆ ಕೇರಳ ರಾಜ್ಯವನ್ನು ಕೇರಳಂ ಎಂದು ಇಡೀ ದೇಶಾದ್ಯಂತ ಎಲ್ಲಾ ಭಾಷೆಯಲ್ಲೂ ಬಳಸುವಂತೆ ಕೋರಲಾಗಿದೆ. ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ನಾಡಿಗೆ ಹೊಸ ಹೆಸರು; ಕೇರಳ ಇನ್ಮುಂದೆ ಕೇರಳ ಅಲ್ಲ; ಮತ್ತೇನು?

https://newsfirstlive.com/wp-content/uploads/2023/08/Kerala-Cm.jpg

Load More