newsfirstkannada.com

ಕಾಂಗ್ರೆಸ್ ಪಕ್ಷದ ‘ಆದಾಯ’ಕ್ಕೆ ಅತಿದೊಡ್ಡ ಪೆಟ್ಟು.. IT ಇಲಾಖೆಯಿಂದ ಹೊಸ ಡಿಮ್ಯಾಂಡ್‌ ನೋಟಿಸ್!

Share :

Published March 29, 2024 at 12:22pm

Update March 29, 2024 at 12:25pm

  ಆದಾಯ ತೆರಿಗೆ ಇಲಾಖೆಯಿಂದ ಹೊಸ ಡಿಮ್ಯಾಂಡ್‌ ನೋಟಿಸ್ ಜಾರಿ

  ದಂಡ, ಬಡ್ಡಿ ಸೇರಿ 1,700 ಕೋಟಿ ರೂಪಾಯಿ ಕಟ್ಟೋ ಅನಿವಾರ್ಯತೆ

  ನಾಳೆ, ನಾಡಿದ್ದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ಪ್ರಚಾರ ರಂಗೇರುವಾಗಲೇ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸಂಕಷ್ಟ ಎದುರಾಗಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಅಕೌಂಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಈ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟಿಸ್ ಜಾರಿಯಾಗಿದೆ.

ಕಾಂಗ್ರೆಸ್ ಪಕ್ಷದಿಂದ 1,700 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿ ಮಾಡುವುದು ಬಾಕಿ ಇದೆ. ಹೀಗಾಗಿ 1,700 ಕೋಟಿ ರೂಪಾಯಿ ಆದಾಯ ತೆಿರಿಗೆಯನ್ನು ಪಾವತಿಸಬೇಕೆಂದು ಕಾಂಗ್ರೆಸ್‌ಗೆ ಐಟಿ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರ್ಟ್​ ಆದೇಶ

ಕಾಂಗ್ರೆಸ್ ಪಕ್ಷ ಆದಾಯ ತೆರಿಗೆ ಮರುಮೌಲ್ಯಮಾಪನ ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್‌ನಲ್ಲಿ ಕಾಂಗ್ರೆಸ್ ಅರ್ಜಿ ವಜಾಗೊಂಡ ಬಳಿಕ ಹೊಸ ಡಿಮ್ಯಾಂಡ್‌ ನೋಟಿಸ್ ಜಾರಿ ಮಾಡಲಾಗಿದೆ.

ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ಪಕ್ಷಕ್ಕೆ ದಂಡ, ಬಡ್ಡಿ ಸೇರಿದಂತೆ 1,700 ಕೋಟಿ ರೂಪಾಯಿಯನ್ನು ಪಾವತಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಐ.ಟಿ ನೋಟಿಸ್‌ನಿಂದ ಚುನಾವಣೆಯ ಸಮಯರದಲ್ಲಿ ಕಾಂಗ್ರೆಸ್ ಪಕ್ಷ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಐ.ಟಿ. ನೋಟಿಸ್ ವಿರುದ್ಧ ನಾಳೆ, ನಾಡಿದ್ದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧಾರ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್ ಪಕ್ಷದ ‘ಆದಾಯ’ಕ್ಕೆ ಅತಿದೊಡ್ಡ ಪೆಟ್ಟು.. IT ಇಲಾಖೆಯಿಂದ ಹೊಸ ಡಿಮ್ಯಾಂಡ್‌ ನೋಟಿಸ್!

https://newsfirstlive.com/wp-content/uploads/2024/02/congress-7.jpg

Load More