/newsfirstlive-kannada/media/post_attachments/wp-content/uploads/2025/07/darshan2.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ತಮ್ಮ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಆಷಾಢ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು.
ದಂಪತಿ ಸಮೇತ ಚಾಮುಂಡಿ ತಾಯಿಯ ದರ್ಶನ ಪಡೆದು ವಾಪಸ್ ಆಗಿದ್ದಾರೆ. ಪ್ರತಿ ವರ್ಷವೂ ಆಷಾಢದಲ್ಲಿ ದರ್ಶನ್ ಚಾಮುಂಡಿಯ ಆಶೀರ್ವಾದ ಪಡೆಯುತ್ತಾರೆ. ಕಳೆದ ಬಾರಿ ಜೈಲಿನಲ್ಲಿದ್ದ ಕಾರಣ ದೇವಿಯ ದರ್ಶನ ಮಾಡಿರಲಿಲ್ಲ. ಹೀಗಾಗಿ ಇಂದು ಚಾಮುಂಡಿ ಭೇಟಕ್ಕೆ ಹೋಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಇನ್ನೂ, ಇದೇ ಮೊದಲ ಬಾರಿಗೆ ನಟ ದರ್ಶನ್ ತೂಗುದೀಪ ಅವರ ಇಡೀ ಕುಟುಂಬ ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದೆ. ಈ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:ಗುಡ್ನ್ಯೂಸ್ ಎಂದ ಭಾವನಾ ರಾಮಣ್ಣ.. 40ನೇ ವಯಸ್ಸಲ್ಲಿ ಅಮ್ಮ ಆಗ್ತಿದ್ದಾರೆ ಸ್ಯಾಂಡಲ್ವುಡ್ ನಟಿ
ನಟ ದರ್ಶನ್ ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಫ್ಯಾಮಿಲಿ ಜೊತೆ ಕಾಲ ಕಳೆದಾಗ ಕ್ಲಿಕ್ಕಿಸಿದ ಈ ಫೋಟೋವನ್ನು ಅಭಿಮಾನಿಗಳು ಸಂತಸದಿಂದ ಹಂಚಿಕೊಳ್ಳುತ್ತಿದ್ದಾರೆ. ಆ ಫೋಟೋದಲ್ಲಿ ನಟ ದರ್ಶನ್, ತಾಯಿ ಮೀನಮ್ಮ, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್, ದಿನಕರ್ ತೂಗುದೀಪ, ದಿನಕರ್ ತೂಗುದೀಪ ಪತ್ನಿ ಹಾಗೂ ಮಕ್ಕಳು ಕಾಣಿಸಿಕೊಂಡಿದ್ದಾರೆ. ಇನ್ನೂ, ತೂಗುದೀಪ ಇಡೀ ಫ್ಯಾಮಿಲಿಯನ್ನು ಒಟ್ಟಿಗೆ ನೋಡುವುದೇ ಒಂದು ರೀತಿಯಲ್ಲಿ ಚೆಂದ ಎಂದು ಫ್ಯಾನ್ಸ್ ಸಂಭ್ರಮಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ