/newsfirstlive-kannada/media/post_attachments/wp-content/uploads/2024/07/RIYAN_PARAG_SURYA-1.jpg)
ಟೀಮ್ ಇಂಡಿಯಾದ ಯುವ ಸ್ಟಾರ್ ಆಲ್ರೌಂಡರ್ ರಿಯಾನ್ ಪರಾಗ್. ಇವರು ಈಗಷ್ಟೇ ಗಾಯದಿಂದ ಚೇತರಿಸಿಕೊಂಡು ಭರ್ಜರಿ ಕಮ್ಬ್ಯಾಕ್ ಮಾಡಲು ಮುಂದಾಗಿದ್ದಾರೆ. ಹೀಗಾಗಿ ರಿಯಾನ್ ಪರಾಗ್ ರಣಜಿ ಟ್ರೋಫಿ ಆಡಲು ಅಸ್ಸಾಂ ತಂಡ ಸೇರಿಕೊಂಡಿದ್ದಾರೆ.
ಜನವರಿ 30ನೇ ತಾರೀಕಿನಿಂದ ಸೌರಾಷ್ಟ್ರ ಮತ್ತು ಅಸ್ಸಾಂ ಮಧ್ಯೆ ರಣಜಿ ಪಂದ್ಯ ಶುರುವಾಗಲಿದೆ. ಈ ಪಂದ್ಯದಲ್ಲಿ ಅಸ್ಸಾಂ ತಂಡವನ್ನು ರಿಯಾನ್ ಪರಾಗ್ ಲೀಡ್ ಮಾಡಲಿದ್ದಾರೆ. ಬರೋಬ್ಬರಿ 3 ತಿಂಗಳ ನಂತರ ರಿಯಾನ್ ಪರಾಗ್ ಅಬ್ಬರಿಸಲು ಮುಂದಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಿಯಾನ್ ಪರಾಗ್ ಕೊನೆಯದಾಗಿ ಮೈದಾನದಲ್ಲಿ ಕಾಣಿಸಿಕೊಂಡಿದ್ದರು. ಇವರು ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದೇ ಕೊನೆಯ ಪಂದ್ಯ.
ರಿಯಾನ್ ಪರಾಗ್ಗೆ ತೀವ್ರ ಗಾಯ
ಇನ್ನು, ರಿಯಾನ್ ಪರಾಗ್ ಭುಜದ ಗಾಯದಿಂದ ತೀವ್ರವಾಗಿ ಬಳಲುತ್ತಿದ್ದರು. ಹೀಗಾಗಿ ಇವರಿಗೆ ಸರ್ಜರಿ ಅಗತ್ಯ ಇತ್ತು. ಗಾಯದ ಕಾರಣದಿಂದಲೇ ರಿಯಾನ್ ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಬೇಕಾಗಿದೆ.
ಇವರು 2024ರಲ್ಲಿ ಜಿಂಬಾಬ್ವೆ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ಗೆ ಡೆಬ್ಯೂ ಮಾಡಿದ್ದರು. ಇದುವರೆಗೂ ಟೀಮ್ ಇಂಡಿಯಾ ಪರ 10 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಸ್ಪಿನ್ ಬೌಲಿಂಗ್‌ಗೆ ಹೆಸರು ವಾಸಿಯಾಗಿದ್ದಾರೆ.
ಕಳೆದ ರಣಜಿ ಟ್ರೋಫಿಯಲ್ಲೂ ರಿಯಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ತಾನು ಆಡಿದ್ದ 6 ಇನ್ನಿಂಗ್ಸ್ನಲ್ಲಿ 75.60 ಸರಾಸರಿಯಲ್ಲಿ 378 ರನ್ ಗಳಿಸಿದ್ದರು. ಅದರಲ್ಲೂ ರಿಯಾನ್ ಬರೋಬ್ಬರಿ 20 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು.
ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಒಂದು ಸಿಂಹ.. ಕಾಲಿಟ್ಟ ಎರಡೂವರೆ ವರ್ಷದಲ್ಲಿ ಎಲ್ಲರೂ ಸೈಡ್ಲೈನ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್