ವೀಕ್ಷಕರ ಅಚ್ಚುಮೆಚ್ಚಿನ ಸೀರಿಯಲ್​ ಮುಕ್ತಾಯ.. ನೀನಾದೆ ನಾ ಅಂತ್ಯಕ್ಕೆ ಕಾರಣವೇನು?

author-image
Veena Gangani
Updated On
ವೀಕ್ಷಕರ ಅಚ್ಚುಮೆಚ್ಚಿನ ಸೀರಿಯಲ್​ ಮುಕ್ತಾಯ.. ನೀನಾದೆ ನಾ ಅಂತ್ಯಕ್ಕೆ ಕಾರಣವೇನು?
Advertisment
  • ದಿಲ್​ಖುಷ್​ ಅಂತಲೇ ಅಪಾರ ಜನಮಣ್ಣನೆ ಪಡೆದಿತ್ತು ಸ್ಟಾರ್ ಜೋಡಿ
  • ತುಂಬು ಕುಟುಂಬದ ವಿಕ್ರಮ್​ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದ ವೇದಾ
  • ನೀನಾದೆ ನಾ ಮುಕ್ತಾಯದ ಬೆನ್ನಲ್ಲೆ ಹೊಸ ಧಾರಾವಾಹಿ ಎಂಟ್ರಿ ಕೊಡ್ತಿದೆ

ಸ್ಟಾರ್​ ಸುವರ್ಣ ವಾಹಿನಿಯ ಧಾರಾವಾಹಿಗಳಲ್ಲಿ ಹಲವು ಮೇಜರ್​ ಬದಲಾವಣೆಗಳು ಆಗುತ್ತಿವೆ. ಜೊತೆಗೆ ಹೊಸ ಸೀರಿಯಲ್​ ಲಾಂಚ್​ ಆಗ್ತಿದ್ದು, ಎರಡ ಅಧ್ಯಾಯದ ಪ್ರೇಮ ಕಥೆ ಮುಕ್ತಾಯವಾಗ್ತಿದೆ. ಹೌದು, ದಿಲೀಪ್​ ಶೆಟ್ಟಿ ಹಾಗೂ ಖುಷಿ ಶಿವು ಮುಖ್ಯ ಭೂಮಿಕೆಯಲ್ಲಿರೋ ಧಾರಾವಾಹಿ ನೀನಾದೆ ನಾ ಮುಕ್ತಾಯವಾಗಿದೆ.

ಇದನ್ನೂ ಓದಿ: ಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಯಶ್ ತಾಯಿ; ಅಣ್ಣಾವ್ರ ಆಶೀರ್ವಾದ ಪಡೆದು ಹೇಳಿದ್ದೇನು..?

publive-image

ಈ ಸ್ಟೋರಿ ಎರಡು ಅಧ್ಯಾಯದಲ್ಲಿ ಪ್ರಸಾರಕಂಡಿತು. ಮೊದಲ ಅಧ್ಯಾಯ ಜನಪ್ರಿಯತೆ ಪಡೆದಿತ್ತು. ರೌಡಿ ಅಂತಿದ್ದ ತುಂಬು ಕುಟುಂಬದ ವಿಕ್ರಮ್​ ಬದುಕಿನ ದಿಕ್ಕನ್ನೇ ಬದಲಾಯಿಸಿದ್ದಳು ವೇದಾ. ವೇದ್ಯಾ, ದಿಲ್​ಖುಷ್​ ಅಂತಲೇ ಈ ಜೋಡಿ ಅಪಾರ ಜನಮಣ್ಣನೆ ಪಡೆದಿತ್ತು.

publive-image

ಈ ಯಶಸ್ಸಿನ ಬೆನ್ನಲ್ಲೆ ಎರಡನೇ ಅಧ್ಯಾಯಕ್ಕೆ ಮುಂದಾಯ್ತು ತಂಡ. ಕಥೆ ಒಂದೋಳ್ಳೆ ವೈಂಡಪ್​ ಕೊಟ್ಟು ಕರಾವಳಿಯಲ್ಲಿ ಹೊಸ ಪ್ರೇಮ ಕಥೆ ಶುರುಮಾಡ್ತು. ಆದ್ರೆ ಎರಡನೇ ಅಧ್ಯಾಯ ಅಷ್ಟಾಗಿ ಗೆಲುವು ಕಾಣಲಿಲ್ಲ. ಹೀಗಾಗಿ ಸ್ಟೋರಿನ ಲ್ಯಾಗ್​ ಮಾಡ್ದೇ ಮುಕ್ತಾಯ ಮಾಡಿದೆ ವಾಹಿನಿ. ನೀನಾದೆ ನಾ ಮುಕ್ತಾಯದ ಬೆನ್ನಲ್ಲೆ ಹೊಸ ಧಾರಾವಾಹಿ ಎಂಟ್ರಿ ಕೊಡ್ತಿದೆ. ವಾಸುದೇವ ಕುಟಂಬ.

publive-image

ತಮಿಳು ಧಾರಾವಾಹಿಯ ರಿಮೇಕ್​ ಸ್ಟೋರಿ ಆಗಿದ್ದು, ನಾಲ್ವರು ಹೆಣ್ಣುಮಕ್ಕಳನ್ನ ಹೆತ್ತ ತಂದೆ ತಾಯಿ ಏನೆಲ್ಲಾ ಕಷ್ಟ ಅನುಭವಿಸ್ತಾರೆ ಎಂಬುದರ ಕುರಿತು ಕಥೆ ಸಾಗಲಿದೆ. ಅಮ್ಮನ ಪಾತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ಸುಧಾ ನರಸಿಂಹ ಮೂರ್ತಿ, ತಂದೆ ವಾಸುದೇವ ಪಾತ್ರದಲ್ಲಿ ನಟ ಅವಿನಾಶ್​ ಕಾಣಿಸಿಕೊಳ್ತಿದ್ದಾರೆ. ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳ್ತಿದ್ದಾರೆ. ಇವ್ರ ಪಾತ್ರವೇ ಕಥೆಗೆ ಜೀವಾಳ.

ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

publive-image

ಇನ್ನೂ ರಾಮಾಚಾರಿ ಖ್ಯಾತಿಯ ಅಂಜಲಿ ಅವ್ರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡ್ತಿದ್ದಾರೆ. ನಾಯಕಿ ಪಾತ್ರಕ್ಕೆ ಭಾವನಾ ಪಟೀಲ್ ಬಣ್ಣ ಹಚ್ತಿದ್ದಾರೆ. ನಾಯಕ ಯಾರು ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ​ಹೊಸ ಧಾರಾವಾಹಿ ಅನೌನ್ಸ್​ ಆದ ಬೆನ್ನಲ್ಲೆ, ಮತ್ತೊಂದು ವಿಶೇಷತೆ ಅಂದ್ರೇ ಆಸೆ ಧಾರಾವಾಹಿ ಪ್ರತಿ ದಿನ 7 ರಿಂದ 8 ಗಂಟೆಯವರೆಗೂ 1 ಗಂಟೆ ಪ್ರಸಾರವಾಗಲಿದ್ದು, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಹಾಗೂ ಶ್ರೀ ದೇವಿ ಮಾಹತ್ಮೆ ರಾತ್ರಿ 9 ಗಂಟೆಗೆ ಬ್ಯಾಕ್​ ಟು ಬ್ಯಾಕ್​ ಪ್ರಸಾರವಾಗಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment