/newsfirstlive-kannada/media/post_attachments/wp-content/uploads/2024/10/Power-Bank.jpg)
ಸ್ಮಾರ್ಟ್ಫೋನ್ ಬ್ಯಾಟರಿ ಖಾಲಿಯಾದಾಗ ಆಪತ್ಭಾಂದವನಾಗಿ ಸಹಾಯ ಮಾಡೋದು ಪವರ್ ಬ್ಯಾಂಕ್. ಇದರ ಸಹಾಯದಿಂದ ಸ್ಮಾರ್ಟ್ಫೋನನ್ನು ಸುಲಭವಾಗಿ ಚಾರ್ಜ್ ಮಾಡಬಹುದಾಗಿದೆ. ಮಾತ್ರವಲ್ಲದೆ ಓಡಾಟದ ಸಮಯದಲ್ಲಿ ಒಂದು ಕಡೆಯಿಂದ ಮತ್ತೊಂದೆಡೆಗೆ ಸಾಗಿಸಲು ಯೋಗ್ಯವಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ನಾನಾ ರೀತಿಯ ಪವರ್ ಬ್ಯಾಂಕ್ಗಳಿವೆ. ವಿಶೇಷವಾಗಿ ದೀರ್ಘ ಕಾಲ ಬ್ಯಾಟರಿಯನ್ನು ಹೊಂದಿರುವ ಪವರ್ ಬ್ಯಾಂಕ್ಗಳಿವೆ. ಆದರೆ ಪವರ್ ಬ್ಯಾಂಕ್ ಕೂಡ ವಿದ್ಯುತ್ ಶಕ್ತಿ ಬೇಕೆ ಬೇಕು. ಇದನ್ನು ಚಾರ್ಜ್ ಮಾಡಿ ಶಕ್ತಿಯನ್ನು ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ವಿದ್ಯುತ್ ಶಕ್ತಿಯ ಅವಶ್ಯಕತೆ ಇಲ್ಲದ ಪವರ್ ಬ್ಯಾಂಕ್ ಬಿಡುಗಡೆಗೊಂಡಿದೆ. ಇದು ಸೌರ ಶಕ್ತಿಯಲ್ಲಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.
ಅಂಬ್ರೇನ್ ಸೋಲಾರ್ 10K ಹೆಸರಿನ ಪವರ್ ಬ್ಯಾಂಕ್ ಅನ್ನು ಪರಿಚಯಿಸಿದೆ. ಇದನ್ನು ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಅಂದಹಾಗೆಯೇ ಕಂಪನಿಯು ಪರಿಚಯಿಸಿದೆ ಮೊದಲ ಸೌರ ವಿದ್ಯುತ್ ಬ್ಯಾಂಕ್ ಇದಾಗಿದೆ.
ಪವರ್ ಬ್ಯಾಂಕ್ ವಿಶೇಷವೇನು?
ನೂತನ ಪವರ್ ಬ್ಯಾಂಕ್ ಪೋರ್ಟಬಲ್ ಚಾರ್ಜರ್ನೊಂದಿಗೆ 10,000mAh ಸಾಮರ್ಥ್ಯದೊಂದಿಗೆ ಬಂದಿದೆ. 22.5W ಚಾರ್ಜಿಂಗ್ ಔಟ್ಪುಟ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ ನಾಲ್ಕು ಪ್ಯಾನೆಲ್ ಇದ್ದು, ಸೂರ್ಯ ಬೆಳಕಿನಡಿ ಇಟ್ಟಾಗ ಚಾರ್ಜ್ ಆಗುತ್ತದೆ.
ಮಾತ್ರವಲ್ಲದೆ, ಇದರಲ್ಲಿ ಎಲ್ಇಡಿ ಫ್ಲಾಷ್ಲೈಟ್, ಡಿಜಿಟಲ್ ಡಿಸ್ಪ್ಲೇ, ಜೊತೆಗೆ ಬ್ಯಾಟರಿ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಅಂಬ್ರೇನ್ ಸೋಲಾರ್ 10K ಹೆಸರಿನ ಪವರ್ ಬ್ಯಾಂಕ್ನಲ್ಲಿ ಯುಎಸ್ಬಿ ಟೈಪ್-ಎ ಮತ್ತು ಟೈಪ್ ಸಿ ಎರಡನ್ನೂ ಬೆಂಬಲಿಸುತ್ತದೆ. ಅಚ್ಚರಿಯ ಸಂಗತಿ ಎಂದರೆ ಒಂದು ಬಾರಿ ಪೂರ್ತಿ ರೀಚಾರ್ಜ್ ಮಾಡಿದರೆ 5 ದಿನದವರೆಗೆ ಬರುತ್ತದೆ.
ಬೆಲೆ ಎಷ್ಟು?
ಅಂಬ್ರೇನ್ ಸೋಲಾರ್ 10K ಹೆಸರಿನ ಪವರ್ ಬ್ಯಾಂಕ್ ಅನ್ನು ಪರ್ವತಾರೋಹಿಗಳಿಗೆ, ಪಾದಯಾತ್ರಿಗಳಿಗಾಗಿ ಪರಿಚಯಿಸಲಾಗಿದೆ. ವಿದ್ಯುತ್ ಇಲ್ಲದ ಕಡೆ ಈ ಪವರ್ ಬ್ಯಾಂಕ್ನಲ್ಲಿರುವ ಎಲ್ಇಡಿ ಫ್ಲಾಶ್ಲೈಟ್ ಉರಿಸಬಹುದಾಗಿದೆ. ಗ್ರಾಹಕರಿಗಾಗಿ ಅಂಬ್ರೇನ್ ಸೋಲಾರ್ 10K ಹೆಸರಿನ ಪವರ್ ಬ್ಯಾಂಕ್ ಅನ್ನು 2,799 ರೂಪಾಯಿ ಮಾರಾಟ ಮಾಡುತ್ತಿದೆ. ಆನ್ಲೈನ್ ಇ-ಕಾಮರ್ಸ್ ಮಳಿಗೆಯಲ್ಲೂ ಖರೀದಿಗೆ ಲಭ್ಯವಿದೆ.
ಇದನ್ನೂ ಓದಿ:ಟೀಮ್ ಇಂಡಿಯಾಗೆ ಭರ್ಜರಿ ಗುಡ್ನ್ಯೂಸ್; ಸ್ಟಾರ್ ಪ್ಲೇಯರ್ ಎಂಟ್ರಿ ಬಗ್ಗೆ ಬಿಗ್ ಅಪ್ಡೇಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ