ಹಣ ದೋಚಲು ಹೊಸ ದಾರಿ ಕಂಡು ಹಿಡಿದ ಖದೀಮರು; ಮದುವೆ ಇನ್ವಿಟೇಷನ್ ಎಂದು ಓಪನ್ ಮಾಡಿದ್ರೆ ಫಿನೀಶ್!

author-image
Gopal Kulkarni
Updated On
Cyber crime; ಮ್ಯಾಟ್ರಿಮೋನಿಯಲ್ಲಿ ಜೋಡಿ ಹುಡುಕ್ತಿದ್ದೀರಾ.. ಖದೀಮರ ಮೋಹಕ ಬಲೆ ಹೇಗಿರುತ್ತೆ ಗೊತ್ತಾ?
Advertisment
  • ನಿಮ್ಮ ಹಣ ದೋಚಲು ಹೊಸ ಮಾರ್ಗದಲ್ಲಿ ಬರುತ್ತಿರುವ ಸೈಬರ್ ಖದೀಮರು
  • ಇನ್ವಿಟೇಷನ್ ಕಾರ್ಡ್ ಎಂದು ಫೈಲ್ ಓಪನ್ ಮಾಡಿದ್ರೆ ನಿಮ್ಮ ಹಣ ಮಂಗಮಾಯ
  • ವಧು ವರರ ಮಾಹಿತಿ ಪಡೆದುಕೊಂಡು ಅವರ ಹೆಸರಲ್ಲಿ ಹಣ ದೋಚಲಾಗುತ್ತಿದೆ

ಫ್ರೆಂಡ್​ ಮದುವೆ ಇನ್ವಿಟೇಷನ್ ಕಳುಹಿಸಿದ್ದಾನೆ ಅನ್ನೋ ಖುಷಿಯಲ್ಲಿ ವಾಟ್ಸಾಪ್​ನಲ್ಲಿ ಬಂದಿರುವ ಕಾರ್ಡ್​ನ ಓಪನ್ ಮಾಡುವ ಮೊದಲು ಸಾವಿರ ಬಾರಿ ಯೋಚಿಸಿ. ಯಾಕಂದ್ರೆ ನಿಮ್ಮ ಹಣ ಕದಿಯಲು ಖದೀಮರು ಈಗ ಹೊಸ ಮಾರ್ಗವನ್ನು ಕಂಡು ಹಿಡಿದುಕೊಂಡಿದ್ದಾರೆ. ಮದುವೆ ನಿಶ್ಚಯವಾಗಿರುವ ಯುವಕ ಯುವತಿಯರ ಮಾಹಿತಿ ಕಲೆ ಹಾಕುತ್ತಿರುವ ಸೈಬರ್ ಖದೀಮರು ಈ ಹೊಸ ದಾರಿಯಲ್ಲಿ ಹಣ ಮಾಡುವುದನ್ನು ಕಂಡುಕೊಂಡಿದ್ದಾರೆ.

ಇದನ್ನೂ ಓದಿ:ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಕೇಸ್ ದಾಖಲಿಸಿದ ಡಿ.ರೂಪಾ; IAS ಅಧಿಕಾರಿಗೆ ನೋಟಿಸ್‌!

ಮದುವೆ ನಿಶ್ಚಯ ಆಗಿರುವ ಯುವಕ ಯುವತಿಯರ ಮೊಬೈಲ್ ಹ್ಯಾಕ್ ಮಾಡಿ ನಂಬರ್ ಪಡೆಯುವ ಖದೀಮರು, ಆ ನಂಬರ್​ಗಳಿಗೆ ಎಪಿಕೆ ಫೈಲ್​ನಲ್ಲಿ ಆಮಂತ್ರಣ ಪತ್ರಿಕೆ ಕಳುಹಿಸುತ್ತಾರೆ. ನೀವು ಎಪಿಕೆ ಫೈಲ್ ಓಪನ್ ಮಾಡುತ್ತಿದ್ದಂತೆ ನಿಮ್ಮ ಮೊಬೈಲ್ ಹ್ಯಾಕ್ ಆಗುತ್ತದೆ. ನಮ್ಮ ಮೊಬೈಲ್ ಸ್ಕ್ರೀನ್ ಶೇರ್ ಮಾಡಿಕೊಂಡು ಎಲ್ಲ ಸಂದೇಶ ವೀಕ್ಷಣೆ ಮಾಡುತ್ತಾರೆ. ಅದರ ಜೊತೆ ಒಟಿಪಿಯನ್ನು ಕೂಡ ಹಾಗೆ ಪಡೆಯುತ್ತಿದ್ದಾರೆ ಖದೀಮರು.

ಇದನ್ನೂ ಓದಿ:ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ; A4 ಜಗದೀಶ್ ತಾಯಿ ಅಳಲು ಏನು..?

ಆ ಮೂಲಕ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ ಸೈಬರ್ ಕಿರಾತಕರು. ಸೈಬರ್ ವಂಚಕರ ಜೊತೆ ಸೈಬರ್ ವಂಚಕರ ಜೊತೆ ಸ್ಥಳೀಯರು ಭಾಗಿಯಾಗಿರುವ ಸಾಧ್ಯತೆ ಇದ್ದು. ವಧು ವರರ ಹಾಗೂ ಕುಟುಂಬಸ್ಥರ ಮಾಹಿತಿಯನ್ನು ವಂಚಕರಿಗೆ ನೀಡುತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment