/newsfirstlive-kannada/media/post_attachments/wp-content/uploads/2025/02/GDG_GOD.jpg)
ಊರಿನ ಜಾತ್ರೆ ಅಂದ್ರೆ ಅದೇನೋ ಖುಷಿ, ಸಂಭ್ರಮ.. ಹೊಸ ಬಟ್ಟೆ ತೊಟ್ಟು ಮನೆ ಮಂದಿ ಜೊತೆ ಜಾತ್ರೆ ಮಾಡೋದ್ರಲ್ಲಿ ಇರುವ ಮಜಾನೇ ಬೇರೆ. ಅದರಲ್ಲೂ ತಮ್ಮ ಗ್ರಾಮದಲ್ಲೇ ಪ್ರಪ್ರಥಮವಾಗಿ ದೇವಸ್ಥಾನ ನಿರ್ಮಿಸಿ ಅದರ ಪ್ರಾಣಪ್ರತಿಷ್ಠಾಪನೆ ಮಾಡುವ ಸಂಭ್ರಮ ಇನ್ನೂ ಹೆಚ್ಚು. ಸದ್ಯ ಈ ಗ್ರಾಮದಲ್ಲಿ ಈ ಸಂಭ್ರಮ-ಸಡಗರ ಮನೆಮಾಡಿತ್ತು.
ಮೈಮೇಲೆ ಕಾವಿ, ತಲೆಗೆ ಪೇಟ, ಹಣೆಗೆ ವಿಭೂತಿ, ಸೊಂಟಕ್ಕೆ ಗಂಟೆ, ಕತ್ತಲ್ಲಿ ರುದ್ರಾಕ್ಷಿ ಮಾಲೆ, ಕೈಯಲ್ಲಿ ಖಡ್ಗ ಹಿಡಿದು ಪುರವಂತರು ಆವೇಶದಲ್ಲಿ ಕೂಗ್ತಿದ್ರೆ ಎಂಥವರ ಎದೆಯಲ್ಲೂ ಭಕ್ತಿಯ ಪರಾಕಾಷ್ಟೆ. ಅಂದಹಾಗೆ ಇದೆಲ್ಲಾ ನಡೆದಿರೋದು ಗದಗ ಜಿಲ್ಲೆಯ ರೋಣದ ಹೊಳೆ ಆಲೂರು ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪ್ರಾಣಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ.
ಹೊಳೆ ಆಲೂರು ಗ್ರಾಮಕ್ಕೆ ಐತಿಹಾಸಿಕ ದಿನ. ನೂರಾರು ವರ್ಷಗಳು ಕಳೆದ್ರೂ ಗ್ರಾಮದಲ್ಲಿ ಒಂದೇ ಒಂದು ವೀರಭದ್ರೇಶ್ವರ ದೇವಸ್ಥಾನವಿರಲಿಲ್ಲ. ಹೀಗಾಗಿ ಈ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವೀರಭದ್ರೇಶ್ವರ ದೇವಸ್ಥಾನ ನಿರ್ಮಿಸಿದ್ದಾರೆ. ಕಲ್ಲಿನಲ್ಲಿ ದೇವಸ್ಥಾನ ಮೈತಳೆದಿದ್ದು ದೇಗುಲದಲ್ಲಿ ವೀರಭದ್ರೇಶ್ವರನ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು ಈ ವೇಳೆ ಪುರವಂತರು ಶಸ್ತ್ರಗಳ ಮೂಲಕ ಒಡುಪುಗಳನ್ನ ಹೇಳಿ ಭಕ್ತಿಯ ಪರಾಕಾಷ್ಟೇ ಝೇಂಕರಿಸುವಂತೆ ಮಾಡಿದರು.
ಇನ್ನು ಪ್ರಾಣಪ್ರತಿಷ್ಠಾಪನಕ್ಕೂ ಮುನ್ನ ಇಡೀ ಗ್ರಾಮದ ತುಂಬ ಶ್ರೀಶೈಲ ಜಗದ್ಗುರು ಶ್ರೀಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನ ಅಡ್ಡಪಲ್ಲಕಿ ಉತ್ಸವದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ದೇವಸ್ಥಾನದ ಶ್ರೀ ವೀರಭದ್ರೇಶ್ವರನ ವಿಗ್ರಹಕ್ಕೆ ಜಗದ್ಗುರುಗಳು ಪ್ರಾಣಪ್ರತಿಷ್ಠಾಪನೆ ಮಾಡಿದರು.
ಇದನ್ನೂ ಓದಿ:ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಮತದಾನ.. 70 ಕ್ಷೇತ್ರಗಳಿಗೆ ತ್ರಿಕೋನ ಸ್ಪರ್ಧೆ, ಹೇಗಿದೆ ಭದ್ರತೆ?
ಈ ವೇಳೆ ನರಗುಂದ ಶಾಸಕ ಸಿ.ಸಿ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು ಸೇರಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ದೇವಸ್ಥಾನದ ಪ್ರಾಣಪ್ರತಿಷ್ಠಾಪನೆಯಲ್ಲಿ ಪುರವಂತರ ಪವಾಡಗಳು ವಿಶೇಷವಾಗಿ ಆಕರ್ಷಣೀಯವಾಗಿತ್ತು. ದೇವಸ್ಥಾನ ನಿರ್ಮಾಣ ಮಾಡಿದ್ದಕ್ಕೆ ಭಕ್ತರು ಖುಷಿಪಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ