/newsfirstlive-kannada/media/post_attachments/wp-content/uploads/2025/01/GILL.jpg)
ಏಕದಿನ ಕ್ರಿಕೆಟ್​ನಲ್ಲಿ ಸಿಡಿಲಮರಿ ಸೆಹ್ವಾಗ್ ಅವರಂತಹ ಆಟವನ್ನ ನೋಡೋಕೆ ರೆಡಿಯಾಗಿ. 50 ಓವರ್ ಫಾರ್ಮೆಟ್​ಗೆ ನಯಾ ಸೆಹ್ವಾಗ್, ಯಶಸ್ವಿ ಜೈಸ್ವಾಲ್​ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಟೆಸ್ಟ್​, ಟಿ20ಯಲ್ಲಿ ಬ್ಯಾಟ್​ ಹಿಡಿದು ಆರ್ಭಟಿಸಿದ್ದ ಜೈಸ್ವಾಲ್​​​​, ಈಗ ಏಕದಿನದಲ್ಲಿ ಧಮಾಕಾ ಸೃಷ್ಟಿಸೋಕೆ ಸಜ್ಜಾಗಿದ್ದಾರೆ.
ಬಾರ್ಡರ್ ಗವಾಸ್ಕರ್ ಟೆಸ್ಟ್​ನಲ್ಲಿ ಬೊಂಬಾಟ್ ಆಟವಾಡಿದ್ದ ಜೈಸ್ವಾಲ್​ಗೆ, ಬಿಸಿಸಿಐ ಬಂಪರ್ ಗಿಫ್ಟ್ ನೀಡಲು ರೆಡಿಯಾಗಿದೆ. ಮುಂದಿನ ಇಂಗ್ಲೆಂಡ್ ಎದುರಿನ ಏಕದಿನ ಸರಣಿ ಹಾಗೂ ಚಾಂಪಿಯನ್ಸ್​ ಟ್ರೋಫಿ ತಂಡದಲ್ಲಿ ಜೈಸ್ವಾಲ್​ಗೆ ಚಾನ್ಸ್​ ನೀಡಲು ಬಿಸಿಸಿಐ ಮುಂದಾಗಿದೆ. ಬೆನ್ನಲ್ಲೇ ಆರಂಭಿಕ ಆಟಗಾರ ಶುಬ್ಮನ್ ಗಿಲ್​​ಗೆ ಟೆನ್ಷನ್​​ ಶುರುವಾಗಿದೆ.
ಇದನ್ನೂ ಓದಿ: ODI ಕ್ರಿಕೆಟ್​​ಗೆ ಮರಿ ಸೆಹ್ವಾಗ್ ಎಂಟ್ರಿ.. ಟೀಂ ಇಂಡಿಯಾಗೆ ಬಂತು ಆನೆಬಲ
ಯಶಸ್ವಿ ಜೈಸ್ವಾಲ್​,​​ ಶುಭ್​ಮನ್​ ಗಿಲ್​​.. ಟೀಮ್ ಇಂಡಿಯಾ ಸೆನ್ಷೆಷನಲ್​ ಯಂಗ್​ಸ್ಟರ್ಸ್​. ಆರಂಭಿಕರಾಗಿ ಈ ಜೋಡಿ ಕ್ರಿಕೆಟ್ ಪ್ರೇಮಿಗಳ ದಿಲ್ ಗೆದ್ದಿದೆ. ಲೆಫ್ಟಿ ಬ್ಯಾಟರ್​​​​​ ಜೈಸ್ವಾಲ್​ ಅಗ್ರೆಸ್ಸಿವ್ ಆಟ, ಗಿಲ್ ಕ್ಲಾಸ್​​ ಮತ್ತು ಮಾಸ್​ ಆಟದಿಂದ ಸಖತ್ ಸದ್ದು ಮಾಡ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಜೈಸ್ವಾಲ್ ಆಯ್ಕೆ ಆಗ್ತಾರೆ ಎಂಬ ಸುದ್ದಿ ಕೇಳ್ತಿಂದಂತೆ. ಗಿಲ್​ಗೆ ಹೊಸ ಟೆನ್ಶನ್ ಶುರುವಾಗಿದೆ.
ಜೈಸ್ವಾಲ್ ಎಂಟ್ರಿ ಗಿಲ್​​​ಗೆ ಥ್ರೆಟ್​​​​​​​​​​​​​​​ ನಿಜ. ಟಿ20 ಹಾಗೂ ಟೆಸ್ಟ್​ನಲ್ಲಿ ಆರಂಭಿಕನಾಗಿದ್ದ ಗಿಲ್ ಸ್ಥಾನ ಕಸಿದಿದ್ದೆ ಯಶಸ್ವಿ ಜೈಸ್ವಾಲ್. ಹೀಗಾಗಿ ಏಕದಿನದಲ್ಲೂ ಜೈಸ್ವಾಲ್, ಶುಭ್​ಮನ್ ಪಾಲಿಗೆ ವಿಲನ್ ಆಗ್ತಾರಾ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ. ಈಗಾಗಲೇ ಟಿ20 ಹಾಗೂ ಟೆಸ್ಟ್​ನಲ್ಲಿ ಇಂಪ್ರೆಸ್ಸಿವ್ ಆಟವಾಡಿರುವ ಫೈರಿ ಬ್ಯಾಟರ್​ ಜೈಸ್ವಾಲ್, ಚಾಂಪಿಯನ್ಸ್​ ಟ್ರೋಫಿಯಲ್ಲಿ ಗಿಲ್​ನ ಸೈಡ್​ ಹೊಡೆಯೋ ಸಾಧ್ಯತೆ ಇದೆ. ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿ ಪಡಬೇಕಿಲ್ಲ.
ಇದನ್ನೂ ಓದಿ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡೋದು ಒಳ್ಳೆಯದಾ? ಈ ಅನುಮಾನ ಕಾಡಿದೆಯಾ?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us