2025ಕ್ಕೆ ಬರ್ತಿದೆ ಹೊಸ ಶೂ.. ಇದರ ವಿಶೇಷತೆ ಏನು? ಇದರ ಬೆಲೆ ಕೇಳಿದ್ರೆ ಮೂರ್ಛೆ ಹೋಗ್ತಿರಾ!

author-image
admin
Updated On
2025ಕ್ಕೆ ಬರ್ತಿದೆ ಹೊಸ ಶೂ.. ಇದರ ವಿಶೇಷತೆ ಏನು? ಇದರ ಬೆಲೆ ಕೇಳಿದ್ರೆ ಮೂರ್ಛೆ ಹೋಗ್ತಿರಾ!
Advertisment
  • ಫೇಮಸ್​​ ಫ್ಯಾಷನ್​ ಬ್ರ್ಯಾಂಡ್​ ಬ್ಯಾಲೆನ್ಸಿಯಾಗಾ ಪರಿಚಯಿಸಿದೆ
  • ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​ ಇದು
  • ಶೂ ಥರಾ ಇರೋ ಈ ಫುಟ್​ವೇರ್ ವಿಶೇಷತೆ ಏನು ಗೊತ್ತಾ?

ಜನ ಮರುಳೋ ಜಾತ್ರೆ ಮರುಳೋ ಅನ್ನೋ ಒಂದು ಮಾತಿದೆ. ಆ ಮಾತು ಈಗ ಈ ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಹಾಗು ಲಕ್ಷೂರಿ ಬ್ರ್ಯಾಂಡ್​ಗಳಿಗೆ ಪಕ್ಕಾ ಹೊಂದುತ್ತೆ. ಯಾಕಂದ್ರೆ ಯಾವ್ಯಾವ್ದೋ ಸಿಂಪಲ್​ ಪ್ರಾಡಕ್ಟ್​​​ಗಳನ್ನು ದುಬಾರಿ ಬೆಲೆ ನಿಗಧಿ ಮಾಡಿ, ಜನರಿಗೆ ಟೋಪಿ ಹಾಕಿಸೋ ಪ್ಲ್ಯಾನ್​ ಕೂಡ ಅನೇಕ ಬಾರಿ ಮಾಡಿದ್ದಾರೆ. ಹಾಗೇ ಜನ ಕೂಡ ಎಚ್ಚೆತ್ತುಕೊಂಡು ಇದ್ಯಾಕ್ ಹಿಂಗೆ ಅಂತ ಪ್ರಶ್ನೆ ಕೂಡ ಮಾಡಿದ್ದುಂಟು.

ಉದಾಹರಣೆಗೆ ಹೇಳೋದಾದ್ರೆ ಸಗಣಿಯಿಂದ ಮಾಡಿರೋ ಭರಣಿಗಳನ್ನು, COWDUNG CAKE ಅಂತ ಅಥವಾ ತುಪ್ಪನಾ CLARIFIED BUTTER ಅಂತ ಮಾರಾಟ ಮಾಡಿರೋ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ. ಆದ್ರೆ ಇವೆಲ್ಲವೂ ಕೂಡ ನಮ್ಮ ಸುತ್ತ-ಮುತ್ತಾನೇ ಈಸಿಯಾಗಿ ಸಿಗೋ ವಸ್ತುಗಳು. ಇನ್ನೂ ಹರಿದು ಚಿಂದಿಯಾಗಿರೋ ಈ ಜೀನ್ಸ್​ ದುಬಾರಿ ಬ್ರ್ಯಾಂಡೆಡ್​ ಜೀನ್ಸ್​ ಅಂತೆ. ಆದ್ರೆ ಇವುಗಳಿಗೆ ಬೇರೆ ರೇಟ್​ ಫಿಕ್ಸ್​ ಮಾಡಿ ಅದನ್ನ ಮಾರಾಟ ಮಾಡಿ, ಟೋಪಿ ಹಾಕೋ ರೀತಿ ಮಾಡ್ತಾ ಇದ್ದಾವೆ ಕೆಲವು ಆನ್​ಲೈನ್​ ವೆಬ್​ಸೈಟ್​ಗಳು.

publive-image

ಈಗ ನಾವು ಹೇಳೋಕೆ ಹೊರಟಿರೋ ಸ್ಟೋರಿ ಕೂಡ ಹಾಗೇನೆ ಇದೆ.. ಈ ಶೂ ನೋಡಿ. ಅಲ್ಲ ಮೊದಲನೇಯದಾಗಿ ಇದನ್ನ ಶೂ ಅಂತಾರಾ.. ಆದ್ರೆ ಇದರ ಬೆಲೆ ಕೇಳಿದರೆ ನೀವು ನಿಜಕ್ಕೂ ಶಾಕ್​ ಆಗ್ತೀರಾ. ಅದಕ್ಕೂ ಮುಂಚೆ ಈ ಬ್ಯಾಲೆನ್ಸಿಯಾಗಾ ತಂದಿರೋ ಈ ಶೂ.. ಅಲ್ಲಲ್ಲಾ ಶೂ ಥರಾ ಇರೋ ಈ ಫುಟ್​ವೇರ್​ ಬಗ್ಗೆ ಹೇಳ್ತೀವಿ ಕೇಳಿ. ಇದು ಫೇಮಸ್​​ ಫ್ಯಾಷನ್​ ಬ್ರ್ಯಾಂಡ್​ ಬ್ಯಾಲೆನ್ಸಿಯಾಗಾ ಪರಿಚಯಿಸಿರೊ ದಿ ಝೀರೋ ಅನ್ನೋ 3-ಡಿ ಮೋಡ್​ ಫುಟ್​ವೇರ್​.

ಇದನ್ನೂ ಓದಿ: VIDEO:ನ್ಯೂಸ್​ಪೇಪರೇ ಸಾರಿಯಾಯ್ತು..! ನಾಲ್ಕು ಗಂಟೆಗಳಲ್ಲಿ ದಿನಪತ್ರಿಕೆಯನ್ನು ಸೀರೆ ಮಾಡಿದ ಯುವತಿ 

ಈ ಶೂನ ನೀವು ಧರಿಸಿದ್ರೆ ನಿಮಗೆ ಯಾವುದೇ ರೀತಿ ಶೂ ಧರಿಸಿರೋ ಫೀಲ್​ ಇರಲ್ಲ. ಬದಲಾಗಿ ನೀವು ಬರೀ ಕಾಲಲ್ಲಿ ನಡೆಯೋ ಫೀಲ್ ಕೊಡುತ್ತಂತೆ. ಜೊತೆಗೆ EVA ಫೋಮ್​ ಟೆಕ್ನಾಲಜಿ ಹೊಂದಿದ್ಯಂತೆ. ಅಂದ್ರೆ ಬರೀಗಾಲಲ್ಲಿ ನಡೆಯೋ ಫಿಲ್ ಕೊಟ್ರೂ ನೀವು ಯಾವುದೇ ಕಲ್ಲು ಮುಳ್ಳುಗಳನ್ನು ತುಳಿದ್ರೂ.. ನಿಮಗೆ ಅದರ ಅನುಭವ ಉಂಟಾಗೋದಿಲ್ಲ. ಸೋ ನೀವು ಶೂನ ಧರಿಸಿದ್ರೂ ಕೂಡ ಬರೀ ಸೋಲ್​ ಹಾಕಿಕೊಂಡು ಓಡಾಡೋ ಫೀಲ್​ನ ಕೊಡುತ್ತಂತೆ.

publive-image

ದಿ ಝೀರೋ ಶೂ ಬೆಲೆ ಎಷ್ಟು?
ಅಂದ ಹಾಗೆ ಬ್ಯಾಲೆನ್ಸಿಯಾಗಾ ತಂದಿರೋ ಈ ಝೀರೋ ಶೂನ ಬೆಲೆ ಝೀರೋಗಳಿಗೆ ಸೀಮಿತವಲ್ಲ. ಇದರ ಮಾರಕಟ್ಟೆ ದರ ಬರೋಬ್ಬರಿ 450 ಡಾಲರ್‌ಗಳಷ್ಟಿದೆ. ಭಾರತದ ರೂಪಾಯಿಗೆ ಅದರ ಬೆಲೆ ಹೇಳುವುದಾದರೆ 40,000 ಸನ್ನಿಹಕ್ಕೆ ತಲುಪುತ್ತದೆ.

ದಿ ಝೀರೋ 3-ಡಿ ಮೋಡ್​ ಫುಟ್​ವೇರ್​ ನೋಡೋದಕ್ಕೆ ಹೊಸ ಆವಿಷ್ಕಾರದಂತೆ ಕಂಡು ಬಂದ್ರೂ ಇದರ ರೇಟ್‌ ಕೇಳಿ ನೆಟ್ಟಿಗರು ಕಮೆಂಟ್ಸ್‌ನಲ್ಲೇ ಕಾಲೆಳೆಯುತ್ತಿದ್ದಾರೆ. ಶೂ ಥರಾ ಇರೋ ಈ ಝೀರೋ ಫುಟ್‌ವೇರ್‌ಗೆ ಇಷ್ಟೊಂದು ದುಡ್ಡು ಕೊಡಬೇಕಾ? ಇಷ್ಟೊಂದು ದುಬಾರಿ ಶೂ ಧರಿಸೋ ಅಗತ್ಯ ಇದ್ಯಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment