ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಆಘಾತ; ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಲೆ ಎತ್ತಿದ ನೂತನ ಟೋಲ್​ ಗೇಟ್..!

author-image
Ganesh
Updated On
ಬೆಳ್ಳಂಬೆಳಗ್ಗೆ ವಾಹನ ಸವಾರರಿಗೆ ಆಘಾತ; ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಲೆ ಎತ್ತಿದ ನೂತನ ಟೋಲ್​ ಗೇಟ್..!
Advertisment
  • ಆಲೂರು ತಾಲೂಕಿನ ಚೌಲಗೆರೆ ಬಳಿ ಟೋಲ್ ಗೇಟ್
  • ಕನ್ನಡಪರ ಸಂಘಟನೆಗಳಿಂದ ಟೋಲ್ ಸಂಗ್ರಹಕ್ಕೆ ವಿರೋಧ
  • ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ

ಹಾಸನ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಂದಿನಿಂದ ಹಾಸನ ಜಿಲ್ಲೆಯಲ್ಲಿ ಮತ್ತೊಂದು ನೂತನ ಟೋಲ್ ಆರಂಭ ಮಾಡಿದೆ. ಟೋಲ್ ಸಂಗ್ರಹಕ್ಕೆ ವಾಹನ ಸವಾರರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಟೋಲ್ ವಿರೋಧಿಸಿ ಸ್ಥಳೀಯರು ಹಾಗೂ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮಾಡ್ತಿವೆ. ಆಲೂರು ತಾಲೂಕಿನ ಚೌಲಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸುಂಕ ವಸೂಲಿ ಕೇಂದ್ರ ನಿರ್ಮಾಣ ಮಾಡಲಾಗಿದೆ.

ಇದನ್ನೂ ಓದಿ:ಶಬರಿಮಲೆ ಅಯ್ಯಪ್ಪ; ಕೇವಲ 29 ದಿನದಲ್ಲಿ 163.89 ಕೋಟಿ ರೂ ಆದಾಯ.. ಪ್ರಸಾದದಿಂದ ಎಷ್ಟು ಕೋಟಿ ಬಂದಿದೆ?

ಟೋಲ್ ಸಂಗ್ರಹ ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸಮರ್ಪಕವಾಗಿ ಇಲ್ಲದಿದ್ದರೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:WPL ಮಿನಿ ಹರಾಜು.. ನಾಲ್ವರಿಗೆ ಕೋಟಿ ಕೋಟಿ ಜಾಕ್​​ಪಾಟ್​.. ಅತ್ಯಂತ ದುಬಾರಿ ಆಟಗಾರ್ತಿ ಯಾರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment