ಸಂಚಾರಿ ನಿಯಮ ಉಲ್ಲಂಘಿಸುವ ಸವಾರರೇ ಎಚ್ಚರ.. ರಾಜ್ಯದಾದ್ಯಂತ ಬರಲಿದೆ ಹೊಸ ಟ್ರಾಫಿಕ್ ರೂಲ್ಸ್!

author-image
Veena Gangani
Updated On
ಸಂಚಾರಿ ನಿಯಮ ಉಲ್ಲಂಘಿಸುವ ಸವಾರರೇ ಎಚ್ಚರ.. ರಾಜ್ಯದಾದ್ಯಂತ ಬರಲಿದೆ ಹೊಸ ಟ್ರಾಫಿಕ್ ರೂಲ್ಸ್!
Advertisment
  • ಪದೇ ಪದೇ ರೂಲ್ಸ್ ಬ್ರೇಕ್ ಮಾಡಿದ್ರೆ ‘ಗುಜರಿ’ ಪಾಲಿಸಿ!
  • ರಾಜ್ಯ ಸರ್ಕಾರ ಒಪ್ಪಿದ್ರೆ ಜಾರಿಗೆ ಬರಲಿದೆ ‘ಗುಜರಿ’ ರೂಲ್ಸ್
  • ‘ಗುಜರಿ’ ರೂಲ್ಸ್ ಬಗ್ಗೆ ಸರ್ಕಾರಕ್ಕೆ ಪೊಲೀಸರ ಪ್ರಸ್ತಾವನೆ

ಬೆಂಗಳೂರು: ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವವರು ಈ ಸ್ಟೋರಿನ ನೋಡಲೇಬೇಕು. ನಿರ್ಲಕ್ಷ್ಯದಿಂದಲೋ ಅಥವಾ ಅರ್ಜೆಂಟ್ ಆಗಿ ಹೋಗೋ ಭರದಲ್ಲಿ ನೀವು ಸಂಚಾರಿ ನಿಯಮ ಉಲ್ಲಂಘಿಸ್ತಿದ್ರೆ ಇನ್ಮುಂದೆ ಕಷ್ಟ. ನಾನು ನಡೆದಿದ್ದೇ ದಾರಿ ಅಂತ ಅಡ್ಡಾದಿಡ್ಡಿ ನುಗ್ಗುವವರನ್ನು ತಡೆಯಲು ಪೊಲೀಸರು ರೂಪಿಸಿದ್ದಾರೆ ಹೊಸದೊಂದು ಮಾಸ್ಟರ್​​ಪ್ಲಾನ್.

publive-image

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸುಗಮ ಸಂಚಾರಕ್ಕಾಗಿ ಪೊಲೀಸರು ಹೊಸ ಸಂಚಾರಿ ನಿಯಮಗಳನ್ನು ರೂಪಿಸಿದ್ದಾರೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪೊಲೀಸರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದೇ ದೊಡ್ಡ ಸವಾಲಾಗಿ ಬಿಟ್ಟಿದೆ. ಈ ಮಧ್ಯೆ ಸಂಚಾರಿ ನಿಯಮಗಳ ಉಲ್ಲಂಘಿಸುವವರ ಅಬ್ಬರ ಹೆಚ್ಚಾಗಿ ಬಿಟ್ಟಿದೆ. ಕಾನೂನಿನ ಭಯ ಇಲ್ಲದೇ ವಾಹನ ಸವಾರರು ನಡೆದುಕೊಳ್ತಿದ್ದಾರೆ. ಈಗಾಗಲೇ ಬೆಂಗಳೂರಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ ಅನ್ನು ಪರಿಚಯಿಸಿದ್ದು, ಇದು ಸಂಚಾರ ಉಲ್ಲಂಘನೆಗಳನ್ನು ಪತ್ತೆ ಮಾಡ್ತಿದೆ. ಎಲ್ಲಾ ಸಿಗ್ನಲ್​ಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

publive-image

ಸಂಚಾರ ನಿಯಮ ಉಲ್ಲಂಘಿಸುವವರನ್ನು ಮುಲಾಜಿಲ್ಲದೆ ತಡೆದು ಸ್ಥಳದಲ್ಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ಸೂಚಿಸಲಾಗಿದೆ. ಹೀಗಿದ್ದರೂ 3ನೇ ಕಣ್ಣು ತಪ್ಪಿಸಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಇದಕ್ಕೆಲ್ಲಾ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಹೊಸ ಕಾನೂನು ಜಾರಿ ಮಾಡಲು ರಾಜ್ಯದ ಪೊಲೀಸರು ಮುಂದಾಗಿದ್ದಾರೆ. ಇನ್ಮುಂದೆ ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸಿದ್ರೆ ನಿಮ್ಮ ಗಾಡಿ ಗುಜುರಿಗೆ ಹಾಕಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸಭೆ ಮಾಡಿ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದಾರೆ.

publive-image

ಈ ಕಾನೂನು ಜಾರಿಯಾದ್ರೆ ವೇಳೆ ದಂಡ ಕಟ್ಟಿದ್ರೂ ಸಹ ವಾಹನ ಉಳಿಯೋದೇ ಡೌಟ್ ಎನ್ನಲಾಗಿದೆ. ಅಪಘಾತ ನಿಯಂತ್ರಣ, ಸಂಚಾರ ನಿಯಮ ಪಾಲನೆಗೆ ರಸ್ತೆ ಸುರಕ್ಷತೆ ಸಂಚಾರ ವಿಭಾಗದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ರಾಜ್ಯ ಸರ್ಕಾರ ಒಪ್ಪಿದ್ರೆ ಹೊಸ ಕಾನೂನು ಜಾರಿಯಾಗೋದು ಫಿಕ್ಸ್ ಅಂತ ಹೇಳಲಾಗಿದೆ. ಬೇಕಾಬಿಟ್ಟಿ ಸಿಗ್ನಲ್ ಜಂಪ್ ಮಾಡುವುದು, ರಸ್ತೆಗಳನ್ನು ವಾಹನ ಓಡಿಸುವಾಗ ಮೊಬೈಲ್​​ನಲ್ಲಿ ಮಾತನಾಡುವುದು, ಅದೂ ಅಲ್ಲದೇ ಇತ್ತೀಚೆಗೆ ಪುಂಡರಿಂದ ವ್ಹೀಲಿಂಗ್ ಹಾವಳಿ ಕೂಡ ಹೆಚ್ಚಾಗಿದೆ. ಅತಿ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅಪಘಾತದಿಂದ ಸಾಯುವವರ ಪ್ರಮಾಣ ಕೂಡ ಏರಿಕೆ ಕಾಣ್ತಿದೆ. ವಾಹನ ಸವಾರರ ಸಣ್ಣ ನಿರ್ಲಕ್ಷ್ಯದಿಂದ ಹಲವರು ಜೀವ ಕಳೆದುಕೊಳ್ತಿದ್ದಾರೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಇನ್ನು ಸಂಚಾರ ನಿಯಮ ಉಲ್ಲಂಘಿಸಿದ್ರೂ ದಂಡ ಕಟ್ಟಿ ಬಚಾವಾಗಬಹುದು ಅನ್ನೋದು ಹಲವರ  ಮಾತು. ಹೀಗಾಗಿ ಹೊಸ ಕಾನೂನು ಜಾರಿಗೆ ತರಲು ಪೊಲೀಸರು ಮುಂದಾಗಿದ್ದಾರೆ. ಒಂದು ವೇಳೆ ಸರ್ಕಾರ ಪೊಲೀಸರ ಪ್ರಸ್ತಾವನೆಗೆ ಒಪ್ಪಿದ್ರೆ ಹೊಸ ರೂಲ್ಸ್ ಜಾರಿಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment