/newsfirstlive-kannada/media/post_attachments/wp-content/uploads/2025/05/neetu-vanajakshi1.jpg)
ಕಳೆದ ತಿಂಗಳು ಜಮ್ಮು ಕಾಶ್ಮೀರದ ಪಹಲ್ಲಾಮ್‌ನಲ್ಲಿ ಒಟ್ಟು 26 ಜನರನ್ನು ಬಲಿ ಪಡೆದುಕೊಂಡಿದ್ದರು ಉಗ್ರರು. ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಭಯೋತ್ಪಾದಕರನ್ನು ಸದೆಬಡಿಯಲು ಆಪರೇಷನ್ ಸಿಂಧೂರ್ ಮೂಲಕ ದಿಟ್ಟ ಉತ್ತರ ನೀಡಿತ್ತು.
ಇದನ್ನೂ ಓದಿ: ಚೈತ್ರಾ ಕುಂದಾಪುರ, ರಂಜಿತ್ ಮದುವೆಗೆ ಗೌತಮಿ ಜಾಧವ್ ಹೋಗಲಿಲ್ಲವೇಕೆ? ಈ ಬಗ್ಗೆ ಏನಂದ್ರು?
ಆದರೆ ಈ ನಡುವೆ ಆಪರೇಷನ್ ಸಿಂಧೂರ್ ಎಲ್ಲೆಡೆ ಟ್ರೆಂಡ್ ಆಗುತ್ತಿದ್ದು ಯುವಕರು ಆಪರೇಷನ್ ಸಿಂಧೂರ್ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳದಕ್ಕೆ ಮುಂದಾಗಿದ್ದಾರೆ. ಹೀಗೆ ಹಜ್ಜೆ ಹಾಕಿಸಿಕೊಂಡು ದೇಶಪ್ರೇಮ ಮರೆಯುತ್ತಿದ್ದಾರೆ. ಹೀಗಾಗಿ ಆಪರೇಷನ್ ಸಿಂಧೂರ ಯಶಸ್ಸಿನ ಬೆನ್ನಲ್ಲೇ ನ್ಯೂ ಟ್ರೆಂಡ್ ಶುರುವಾಗಿ ಬಿಟ್ಟಿದೆ. ‘ಸಿಂಧೂರ’ದ ಟ್ಯಾಟೂ, ಮೆಹಂದಿ ಹಾಕಿ ಅಂತ ಜನರ ಪಟ್ಟು ಹಿಡಿಯುತ್ತಿದ್ದಾರೆ. ಬೆಂಗಳೂರಲ್ಲಿ ಆಪರೇಷನ್ ಸಿಂಧೂರ ಟ್ಯಾಟೂಗೆ ಬೇಡಿಕೆ ಹೆಚ್ಚಾಗುತ್ತಿದೆ. ಟ್ಯಾಟೂ ಹಾಗೂ ಮೆಹಂದಿ ಶಾಪ್ಗಳಲ್ಲಿ ದಿನಕ್ಕೆ ಹಲವರು ಭೇಟಿ ನೀಡಿ ಆಪರೇಷನ್ ಸಿಂಧೂರ ಅಂತ ಟ್ಯಾಟೂ ಹಾಕಿ ಅಂತ ಪಟ್ಟು ಹಿಡಿಯುತ್ತಿದ್ದಾರಂತೆ.
ಇದೇ ವಿಚಾರವಾಗಿ ಮಾತಾಡಿದ ಬಿಗ್ಬಾಸ್ ಖ್ಯಾತಿಯ ಹಾಗೂ ಟ್ಯಾಟೂ ಆರ್ಟಿಸ್ಟ್ ಆಗಿರೋ ನೀತು ವನಜಾಕ್ಷಿ ಅವರು, ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ. ಈಗ ಆ ವಿಕ್ಟರಿ ಸೆಲೆಬ್ರೆಟ್ ಮಾಡೋದಕ್ಕೆ ಜನ ಮುಂದಾಗಿದ್ದಾರೆ. ತಮ್ಮ ತಮ್ಮ ಕೈ ಮೇಲೆ ಆಪರೇಷನ್ ಸಿಂಧೂರ ಅಂತ ಟ್ಯಾಟೂ ಹಾಕಿಸಿಕೊಳ್ಳೋದಕ್ಕೆ ಮುಂದಾಗಿದ್ದಾರೆ. ಆ ಟ್ಯಾಟೂ ನೋಡಿದ ತಕ್ಷಣ ಅದರ ಬಗ್ಗೆ ನೆನೆಪಾಗುತ್ತದೆ. ಹೀಗಾಗಿ ಎಲ್ಲರೂ ಟ್ಯಾಟೂ ಹಾಕಿಸಿಕೊಳ್ಳಿ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ