/newsfirstlive-kannada/media/post_attachments/wp-content/uploads/2025/04/amruthadhaare.jpg)
ದಿನದಿಂದ ದಿನಕ್ಕೆ ಅಮೃತಾಧಾರೆ ಸೀರಿಯಲ್ನಲ್ಲಿ ಗೌತಮ್ ಭೂಮಿ ನವೀರಾದ ದಾಂಪತ್ಯ ಜೀವನ ಕಟ್ಟಿಕೊಡ್ತಿದೆ. ಪ್ರೆಗ್ನೆಂಟ್ ಆಗಿರೋ ಪತ್ನಿ ಕನಸನ್ನ ಒಂದೊಂದಾಗಿಯೇ ಈಡೇರಿಸುತ್ತಿದ್ದಾರೆ ಡುಮ್ಮು ಸರ್.
ಇದನ್ನೂ ಓದಿ:ರೀಲ್ಸ್ ಗೆಳೆಯನಿಗಾಗಿ ರಿಯಲ್ ಗಂಡನ ಕತ್ತು ಹಿಸುಕಿ ಸಾಯಿಸಿದ ಮಹಿಳೆ; ಇಂಚಿಂಚೂ ಮಾಹಿತಿ ಬಹಿರಂಗ!
ಪ್ರತಿ ಹುಡುಗಿಗೂ ಮದುವೆ ಆಗೋ ಹುಡುಗನ ಬಗ್ಗೆ ಬೆಟ್ಟದಷ್ಟು ಕನಸು ಇರುತ್ತೆ. ವಿವಾಹ ನಂತರ ಹಾಗಿರ್ಬೇಕು. ಹೀಗ್ ಇರ್ಬೇಕು ಅನ್ನೋ ಆಸೆ ಇರುತ್ತೆ. ಭೂಮಿ ಕೂಡ ಅಷ್ಟೇ ಪ್ರಿಯತಮನ ಬಗ್ಗೆ ಕಟ್ಟಿದ್ದ ಕನಸುಗಳನ್ನ ಡೈರಿಯಲ್ಲಿ ಬರೆದಿಟ್ಟಿರ್ತಾಳೆ. ಡೈರಿ ಓದಿದ್ದ ಡುಮ್ಮು ಸರ್ ಪ್ರೀತಿಯ ಮಡದಿ ಕನಸನ್ನ ನನಸು ಮಾಡ್ತಿದ್ದಾರೆ. ಫಾರ್ಮಲ್ಸ್ ಬಿಟ್ಟು ಕಾಲೇಜ್ ಹುಡುಗನಂತೆ ಸಜ್ಜಾಗಿ ಭೂಮಿ ಜೊತೆ ರೋಮ್ಯಾಂಟಿಕ್ ರೈಡ್ ಹೊರಟಿದ್ದಾರೆ.
ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಅಭಿನಯ ಸೂಪರ್. ಜೋಡಿಯಾಗಿ ವೀಕ್ಷಕರಿಗೆ ಕಚಗುಳಿ ಇಡ್ತಿದ್ದಾರೆ. ಇನ್ನೂ, ಸೀರಿಯಲ್ ಸ್ಟೋರಿಗೆ ಬರೋದಾದ್ರೇ, ಗೌತಮ್ ತಾಯಿಗೆ ಹಳೆ ನೆನಪುಗಳು ಮರುಕಳಿಸಿವೆ. ಆದ್ರೆ ಶಕುಂತಲಾ ಕುತಂತ್ರಕ್ಕೆ ಕುಟುಂಬ ಸರ್ವನಾಶ ಆಗ್ಬಿಡುತ್ತೋ ಎಂಬ ಭಯದಲ್ಲೇ ಕಣ್ಮುಂದೆ ಇರೋ ಮಗ-ಮಗಳನ್ನ ಮುದ್ದಾಡೋಕೆ ಆಗ್ದೇ ಒದ್ದಾಡುತ್ತಿದೆ ತಾಯಿ ಜೀವ.
ಮತ್ತೊಂದು ಕಡೆ ಭೂಮಿ ಧರಸಿದ್ದ ಸರಕ್ಕೆ ಮೈಕ್ ಫಿಕ್ಸ್ ಮಾಡಿದ್ದಳು ಶಕುಂತಲಾ. ಈ ಸತ್ಯ ಬಯಲಾಗೋ ಸೂಚನೆ ಸಿಕ್ಕಿದೆ. ರಹಸ್ಯ ಕಾರ್ಯಾಚರಣೆ ಮಾಡ್ತಿದ್ದಾಳೆ ಭೂಮಿ. ಒಟ್ಟಾರೆ ಪ್ರಾರಂಭದಿಂದಲೂ ಅಮೃತಧಾರೆ ವೀಕ್ಷಕರ ನಂಬಿಕೆ, ಪ್ರೀತಿ ಉಳಿಸಿಕೊಂಡು ಸಾಗ್ತಿದೆ. ಮತ್ತಷ್ಟು ರೋಚಕ ಸಂಚಿಕೆಗಳೂ ನಿಮಗಾಗಿ ರೆಡಿಯಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ