ಅಮೃತಧಾರೆ ‘ಅಕ್ಕೊರೆ’ ಮಲ್ಲಿ ಪಾತ್ರಕ್ಕೆ ಹೊಸ ನಟಿ.. ಯಾರಿದು ಅನ್ವಿತಾ ಸಾಗರ್​?

author-image
Veena Gangani
Updated On
ಅಮೃತಧಾರೆ ‘ಅಕ್ಕೊರೆ’ ಮಲ್ಲಿ ಪಾತ್ರಕ್ಕೆ ಹೊಸ ನಟಿ..  ಯಾರಿದು ಅನ್ವಿತಾ ಸಾಗರ್​?
Advertisment
  • ವೀಕ್ಷಕರಿಗೆ ತುಂಬಾನೇ ಇಷ್ಟವಾಗ್ತಿದೆ ಅಮೃತಧಾರೆ ಧಾರಾವಾಹಿಯ ಕತೆ
  • ಮಲ್ಲಿ ಪಾತ್ರದಲ್ಲಿ ನಟಿಸಿದ್ದ ರಾಧಾ ಭಗವತಿ ಜಾಗಕ್ಕೆ ಮತ್ತೊಬ್ಬ ನಟಿ ಎಂಟ್ರಿ
  • ಕೊನೆಗೂ ಗೌತಮ್ ದಿವಾನ್​ ಮುಂದೆ ಬಯಲಾಯ್ತು ಮಲ್ಲಿಯ ಜನ್ಮ ರಹಸ್ಯ

ಸದ್ಯದ ಟಾಪ್ ಮೋಸ್ಟ್ ವಾಚಿಂಗ್ ಸೀರಿಯಲ್ಸ್​ಗಳಲ್ಲಿ ಜೀ ವಾಹಿನಿಯ ಅಮೃತಧಾರೆ ಕೂಡ ಒಂದು. ಅಮೃತಧಾರೆ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೆ ಇಷ್ಟವಾಗ್ತಿದೆ. ಈ ಹಿಂದೆ ಮಲ್ಲಿ-ಜೈದೇವ್ ಮದುವೆ, ಮಗು ಆದ ಎಲ್ಲ ಎಪಿಸೋಡ್​ಗಳು ಜನರಿಗೆ ಕಥೆಯ ಎಳೆ ಕುತೂಹಲ ಮೂಡಿಸಿತ್ತು. ಆದರೆ ಅದೇ ಹೊತ್ತಲ್ಲಿ ಅಮೃತಧಾರೆ ಧಾರಾವಾಹಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಈ ಹಿಂದೆ ಸಾರಾ ಅಣ್ಣಯ್ಯ, ಶಶಿ ಹೆಗ್ಡೆ ಆಚೆ ಬಂದಿದ್ದರು.

ಇದನ್ನೂ ಓದಿ:ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್​ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?

ಇದಾದ ಬಳಿಕ ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಕೂಡ ಸೀರಿಯಲ್​ನಿಂದ ಆಚೆ ಬಂದಿದ್ದರು. ಇದೀಗ ಅಮೃತಧಾರೆಯ ಮಲ್ಲಿ ಪಾತ್ರ ಬದಲಾಗಿದ್ದು, ಇದರ ಜೊತೆಯಲ್ಲಿಯೇ ಕಥೆಯಲ್ಲಿ ಬಿಗ್ ಟ್ವಿಸ್ಟ್​ ಎದುರಾಗಿದೆ. ಇಷ್ಟು ದಿನ ಮಾತು ಬಾರದ ಅಜ್ಜಯ್ಯನ ಮೊಮ್ಮಗಳಾಗಿದ್ದ ಮಲ್ಲಿಯ ಜನ್ಮ ರಹಸ್ಯ ಗೌತಮ್ ಮುಂದೆ ಬಯಲಾಗಿದೆ. ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ರಾಧಾ ಭಗವತಿ ಅವರು ಸೀರಿಯಲ್​ನಿಂದ ಆಚೆ ಬಂದ ಬಳಿಕ ಆ ಜಾಗಕ್ಕೆ ನಟಿ ಅನ್ವಿತಾ ಸಾಗರ್‌ ಆಗಮಿಸಿದ್ದಾರೆ.

ಹೌದು, ಮಲ್ಲಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ರಾಧಾ ಭಗವತಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಭಾರ್ಗವಿ ಎಲ್‌ಎಲ್‌ಬಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಡೆ ಅಮೃತಧಾರೆ ಸೀರಿಯಲ್​ ಮಲ್ಲಿ ಪಾತ್ರಕ್ಕೆ ಹೊಸ ಟ್ವಿಸ್ಟ್ ನೀಡಲಾಗಿದೆ. ತನ್ನ ಸೋದರ ಜೈದೇವ್‌ನ ಹೆಂಡ್ತಿ ಅಂದರೆ ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ. ಆಕೆ ರಾಜೇಂದ್ರ ಭೂಪತಿಯ ಮಗಳು ಎಂಬ ವಿಷಯ ಗೌತಮ್ ದಿವಾನ್‌ಗೆ ಗೊತ್ತಾಗಿದೆ.

publive-image

ಯಾರು ಈ ಅನ್ವಿತಾ ಸಾಗರ್‌?

ನಟಿ ಅನ್ವಿತಾ ಸಾಗರ್‌ ಅವರು ಈಗಾಗಲೇ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿರೋ ನಟಿ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ಅನ್ವಿತಾ ಸಾಗರ್ ಕಾಣಿಸಿಕೊಂಡಿದ್ದರು. ಗಟ್ಟಿಮೇಳ ಧಾರಾವಾಹಿ ಮುಗಿದ ಬಳಿಕ ಅನ್ವಿತಾ ಸಾಗರ್ ಅವರು ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment