/newsfirstlive-kannada/media/post_attachments/wp-content/uploads/2025/07/malli.jpg)
ಒಂದು ಕಡೆ ಸುಧಾ ಸಂಸಾರ, ಮತ್ತೊಂದು ಕಡೆ ಮಲ್ಲಿಯ ಆರ್ಭಟ. ಅಮೃತಧಾರೆ ಸೀರಿಯಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯ ಏಕೈಕ ಮಗಳು ಮಲ್ಲಿ ದಿಯಾ ಬೇಬಿ ಹಾಗೂ ಜೈದೇವ್ಗೆ ಶಾಕ್ ಕೊಟ್ಟಿದ್ದಾಳೆ.
ಇದನ್ನೂ ಓದಿ: ಕನ್ನಡದ ಸ್ಟಾರ್ ನಿರೂಪಕಿ ಮದುವೆ.. ಅನುಶ್ರೀ ಆಗ್ತಾ ಇರೋದು ಲವ್..? ಅರೇಂಜ್ ಮ್ಯಾರೇಜ್..?
ಮಲ್ಲಿ ಅನ್ ಎಜುಕೇಟೆಡ್ ಫುಲ್, ಅವಳಿಗೆ ಇಂಗ್ಲಿಷ್ ಬರೋದಿಲ್ಲ ಅಂತೆಲ್ಲಾ ಜೈದೇವ್ ಅವಮಾನ ಮಾಡಿದ್ದ. ಇದೀಗ ಇದಕ್ಕೆ ಮಲ್ಲಿ ತಕ್ಕ ಉತ್ತರ ಕೊಟ್ಟಿದ್ದಾಳೆ. ಹೌದು. ತಾತನ ಜೊತೆಗೆ ಬಡತನದ ಜೀವನ ಸಾಗಿಸುತ್ತಿದ್ದ ಮಲ್ಲಿಗೆ ಸಾವಿರಾರು ಕೋಟಿ ಆಸ್ತಿ ಸಿಕ್ಕಿದೆ ಜಯದೇವ್ ಹೊಟ್ಟೆ ಉರಿದುಕೊಳ್ತಿದ್ದಾನೆ. ಹೀಗಾಗಿ ಎರಡನೇ ಮದುವೆ ಮಾಡಿಕೊಂಡ ಜೈದೇವ್ ಹಂತ ಹಂತವಾಗಿ ಹೊಟ್ಟೆ ಉರಿಸಬೇಕು ಅಂತ ಬಂದ ಜೋಡಿಗೆ ಮಲ್ಲಿ ಶಾಕ್ ಕೊಟ್ಟಿದ್ದಾಳೆ.
ದಿಯಾಳ ಜೊತೆಗೆ ಎರಡನೇ ಮದುವೆಯಾಗಿ ರೆಸ್ಟೋರೆಂಟ್‌ಗೆ ಬಂದಿದ್ದ ಜೈದೇವ್ಗೆ ಮಲ್ಲಿ ಇಂಗ್ಲಿಷ್‌ನಲ್ಲಿ ಮಾತಾಡಿ ಅಚ್ಚರಿ ಮೂಡಿಸಿದ್ದಾಳೆ. ನನಗೆ ಇಂಗ್ಲಿಷ್ ಬರೋದಿಲ್ಲ ಅಂತ ನಗ್ತೀರಾ ಅಂತ ಹೇಳುತ್ತಾ? ಎಕ್ಸ್‌ಕ್ಯೂಸ್ ಮೀ. ಕಮ್ ಹಿಯರ್, ಇವನ್ ಐ ನೋ ಹೌ ಟು ಸ್ಪೀಕ್ ಇನ್ ಇಂಗ್ಲಿಷ್. ಬಟ್ ಐ ಡೋಂಟ್ ವಾಂಟ್ ಟು ಸ್ಪೀಕ್ ಇನ್ ಇಂಗ್ಲಿಷ್. ಬಿಕಾಸ್ ಐ ಆಮ್ ಕನ್ನಡತಿ. ಬೇರೆ ಭಾಷೆಯಂತೆ ಇಂಗ್ಲಿಷ್ ಕೂಡ ಒಂದು ಭಾಷೆ. ಭಾಷೆಯಿಂದ ನಮ್ಮ ಅರ್ಹತೆಯನ್ನು ಅಳೆಯಲಾಗೋದಿಲ್ಲ ಎಂದಿದ್ದಾಳೆ. ಮಲ್ಲಿ ಮಾತು ಕೇಳಿ ಜಯದೇವ್ ದಿಯಾ ಬೇಬಿ ತತ್ತರಿಸಿ ಹೋಗಿದ್ದಾರೆ. ಇನ್ನೂ, ಜೈದೇವ್ ಪಾತ್ರದಲ್ಲಿ ರಾಣವ್ ಗೌಡ, ಮಲ್ಲಿ ಪಾತ್ರದಲ್ಲಿ ಅನ್ವಿತಾ ಸಾಗರ್, ದಿಯಾ ಪ್ರಾತದಲ್ಲಿ ಶ್ವೇತಾ ಗೌಡ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ