/newsfirstlive-kannada/media/post_attachments/wp-content/uploads/2025/07/annaya-serial-kannada.jpg)
ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ಈಗ ಶಿವು ಮುದ್ದಿನ ತಂಗಿ ರಾಣಿ ಮದುವೆ ಸಂಭ್ರಮ ಜೋರಾಗಿ ನಡೀತಿದೆ. ಸುಳ್ಳಿನ ಮಂಟಪದಲ್ಲಿ ರಾಜಾ-ರಾಣಿ ವಧು-ವರರಾಗಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್ನಲ್ಲಿ ಬಿಸಿಬಿಸಿ ಟಾಕ್..!
ಹೌದು, ಮನು ಬಗ್ಗೆ ಸಾವಿರ ಕನಸು ಕಂಡಿರೋ ರಾಣಿಗೆ ಅವನೊಬ್ಬ ಪೆದ್ದ ಅನ್ನೋ ಅರಿವಿಲ್ಲ. ಆಸ್ತಿಗಾಗಿ ಸಂಚು ರೂಪಿಸಿರೋ ವಿಲನ್ಗಳು ರಾಣಿ ಮುಗ್ಧ ಹುಡುಗಿ ಅನ್ಕೊಂಡಿದ್ದರೆ. ಆದ್ರೇ, ಸಿಡಿದೆದ್ರೇ ರಾಣಿ ಮಿಷನ್ ಗನ್ನು ಅನ್ನೋ ಸತ್ಯ ಮನು ಅಮ್ಮನಿಗೆ ಮಾತ್ರ ಗೊತ್ತು. ಈ ಸತ್ಯ-ಸುಳ್ಳಿನ ಕಣ್ಣಾಮುಚ್ಚಾಲೆ ನಡುವೆ ಮತ್ತೊಂದು ರೋಚಕ ತಿರುವು ಎದುರಾಗ್ತಿದೆ.
ಪೆದ್ದು ಮನು ಗೌಡನ ಪೂರ್ವಪಾರ ತೆರೆದುಕೊಳ್ತಿದೆ. ಮನು ಯಾಕೆ ಹೀಗಾದ? ಯಾವ ರಾಜವಂಶಸ್ಥದ ಕುಡಿ ಇವನು? ಈ ರಹಸ್ಯದ ಸಂಚಿಕೆಗಳು ರೋಮಾಂಚನ ಸೃಷ್ಟಿಸಲಿವೆ. ರಾಣಿ-ಮನು ಮದುವೆ ಆಗೋದಂತು ಫಿಕ್ಸು. ಆದ್ರೆ ಆ ತಯಾರಿ, ಅಲ್ಲಿ ಬರೋ ಪರಿಸ್ಥಿತಿ, ದೃಶ್ಯಗಳು ಮಹಾ ಮನರಂಜನೆಯ ಹಬ್ಬ ತರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ