/newsfirstlive-kannada/media/post_attachments/wp-content/uploads/2025/03/Annayya4.jpg)
ಅಣ್ಣಯ್ಯ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಗುತ್ತಿದೆ. ಶಿವುಗೆ ಕೊನೆಗೂ ಪಾರು ಪ್ರೇಮ ನಿವೇದನೆ ಮಾಡಿದ್ದಾಳೆ. ಪಾರು ಬಾಯಲ್ಲಿ ಆ ಮೂರು ಮ್ಯಾಜಿಕಲ್ ವರ್ಡ್ ಕೇಳಿ ಹಳ್ಳಿ ಹೈದನ ಎದೆ ಬಡಿತ ಜೋರಾಗಿದೆ. ಪಾರು.. ಶಿವು ಪ್ರೀತಿಯ ಪಲ್ಲಕ್ಕಿಲಿ ಮೈಮರೆಯೋ ಶುಭ ಮೂಹೂರ್ತ ಹತ್ತಿರ ಬಂದಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಬರ್ತ್ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?
ಹೌದು, ಅಣ್ಣಯ್ಯ ಹೊಸ ಪ್ರೋಮೋ ರಿಲೀಸ್ ಮಾಡಿದೆ ಸೀರಿಯಲ್ ತಂಡ. ಪ್ರೋಮೋ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ. ಬೆಲ್ದಚ್ಚಂಗಿರೋ ನಮ್ಮ ಶಿವು ಪಾರ್ವತಿ ಜೋಡಿ ಎಷ್ಟು ಮುದ್ದು.. ಅಂತಿದ್ದಾರೆ. ಚಿಕ್ಕವಯಸ್ಸಿನಿಂದಲೂ ಪಾರ್ವತಿಯೇ ಸರ್ವಸ್ವ ಅಂತ ಕನಸು ಕಟ್ಟಿಕೊಂಡ ಶಿವುಗೆ, ಪಾರು ಬೇರೆ ಹುಡುಗನನ್ನ ಪ್ರೀತಿಸೋ ವಿಚಾರ ತಿಳಿದು ಹೃದಯ ಒಡೆದು ಹೋಗಿತ್ತು. ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತೆ ಅಂತರಲ್ಲ. ಹಾಗೇ ಪರಿಸ್ಥಿತಿಗಳಿಗೆ ಕಟ್ಟು ಬಿದ್ದು ಪಾರುಗೆ ತಾಳಿ ಕಟ್ಟುತ್ತಾನೆ ಶಿವು. ಇಲ್ಲಿಂದ ಇಬ್ಬರ ಲಾಂಗೆಸ್ಟೂ ಬಂಧನ ಶುರುವಾಗುತ್ತೆ.
ಶಿವು ತನ್ನ ಪ್ರೀತಿ ಮರೆತು ಗೌರವದಿಂದ ಪಾರುಳನ್ನು ಆರಾಧಿಸುತ್ತಾನೆ. ಇದು ಪಾರು ಮನಸ್ಸು ಕರಗುವಂತೆ ಮಾಡುತ್ತೆ. ನಿಧಾನಕ್ಕೆ ಪಾರುಗೆ ಮಾವನ ಮೇಲೆ ಲವ್ ಆಗುತ್ತೆ. ಆದ್ರೇ ಪಾರು ಎಷ್ಟೇ ಸಿಗ್ನಲ್ ಕೊಟ್ರು ಶಿವುಗೆ ಮಾತ್ರ ಅದ್ಯಾವುದರ ಅರಿವೇ ಇರಲ್ಲ. ಕೊನೆಗೂ ಪಾರುನೇ ಒಂದು ಹೆಜ್ಜೆ ಮುಂದೆ ಹೋಗಿ ಪ್ರಪೋಸ್ ಮಾಡಿದ್ದಾಳೆ. ಈ ಪ್ರೋಮೋನ ಹಲವು ಲವ್ ಸ್ಟೋರಿಗಳಿಗೆ ಸ್ಪೂರ್ತಿ ಆಗಿರೋ ಚಿತ್ರದುರ್ಗದ ಕಲ್ಲಿನ ಕೋಟೆ ಮೇಲೆ ಅದ್ಭುತವಾದ ಸೆಟ್ ಹಾಕಿ ಬ್ಯೂಟಿಫುಲ್ ಪ್ರೋಮೋ ಶೂಟ್ ಮಾಡಿದೆ ತಂಡ.
ಒಂದಿಷ್ಟು ಸೀನ್ಗಳನ್ನ ಗ್ರೀನ್ ಮ್ಯಾಟ್ನಲ್ಲಿ ಚಿತ್ರೀಕರಿಸಲಾಗಿದೆ. ಪಾರು-ಶಿವು ಪಾತ್ರ ಮಾಡ್ತಿರೋರು ವಿಕಾಶ್ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣ. ರಿಯಲ್ ಲೈಫ್ನಲ್ಲೂ ಕ್ಲೂಸ್ ಫ್ರೆಂಡ್ಸ್ ಆಗಿರೋ ಈ ಜೋಡಿ ಬಗ್ಗೆ ವೀಕ್ಷಕರಿಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದ್ದು, ಜನರ ಪ್ರೀತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಜೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ