ಇದು ಕಣ್ರೋ ಮಜಾ ಅಂದ್ರೆ.. ತಾಂಡವ್​ ಮದ್ವೆ ನಿಲ್ಲಿಸಲು ಟ್ರಾಕ್ಟರ್​ನಲ್ಲಿ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮಾ

author-image
Veena Gangani
Updated On
ಇದು ಕಣ್ರೋ ಮಜಾ ಅಂದ್ರೆ.. ತಾಂಡವ್​ ಮದ್ವೆ ನಿಲ್ಲಿಸಲು ಟ್ರಾಕ್ಟರ್​ನಲ್ಲಿ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮಾ
Advertisment
  • ಇನ್ನೇನೋ ಶ್ರೇಷ್ಠಗೆ ತಾಳಿ ಕಟ್ಟಬೇಕು ಹೊಸ ಟ್ವಿಸ್ಟ್​ ಪಡೆದುಕೊಂಡ ಸೀರಿಯಲ್​
  • ಹೇಗಾದರೂ ಮಾಡಿ ಮದುವೆ ನಿಲ್ಲಿಸಲೇಬೇಕು ಅಂತ ಪಟತೊಟ್ಟ ಕುಸುಮಾ
  • ಪೂಜಾಳ ಜೊತೆಗೆ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಭಾಗ್ಯಳ ಅತ್ತೆ ಕುಸುಮಾ

ಒಂದು ಕಡೆ ಶ್ರೇಷ್ಠಾ ಮತ್ತು ತಾಂಡವ್​ ಮದುವೆ ನಡೆಯುತ್ತಿದೆ. ಇನ್ನೊಂದು ಕಡೆ ಕುಸುಮಾಳಿಗೆ ಶ್ರೇಷ್ಠಾ ಮದುವೆ ಆಗ್ತಾ ಇರೋದು ತನ್ನ ಮಗನೇ ಎಂಬ ಸತ್ಯ ಗೊತ್ತಾಗಿದೆ. ಕೂಡಲೇ ಈ ಮದುವೆಯನ್ನು ಹೇಗಾದರೂ ಮಾಡಿ ನಿಲ್ಲಿಸಬೇಕು ಅಂತ ಹೊರಟಿದ್ದ ಕುಸುಮಾಗೆ ಆಟೋ ಅಪಘಾತಕ್ಕೀಡಾಗಿತ್ತು. ಪೊಲೀಸರು ಬಂದು ತನಿಖೆ ಎಂದೆಲ್ಲಾ ಹೇಳಿದಾಗ ಕುಸುಮಾ ತನ್ನ ಬಂಗಾರದ ಬಳೆಯನ್ನು ಕೊಟ್ಟು ಅಲ್ಲಿಂದ ಓಡೋಡಿ ಕಲ್ಯಾಣ ಮಂಟಪಕ್ಕೆ ಬಂದಿದ್ದಾಳೆ.

ಇದನ್ನೂ ಓದಿ:ತಾಂಡವ್​ನ ಮುದ್ದು ಹುಡುಗಿ ಶ್ರೇಷ್ಠ ರಿಯಲ್​ ಲೈಫ್​ನಲ್ಲೂ ಇರೋದು ಹೀಗೇನಾ; ನಟಿ ಕಾವ್ಯಾ ಹೇಳೋದೇನು?

publive-image

ಆದರೆ ಇಲ್ಲಿ ಕುಸುಮಾ ಸುಮ್ಮನೆ ಅಂತೂ ಬಂದಿಲ್ಲ. ಭಾಗ್ಯಳ ಮುದ್ದು ತಂಗಿ ಪೂಜಾಳನ್ನು ಟ್ರಾಕ್ಟರ್​ನಲ್ಲಿ ನೇರವಾಗಿ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ದಿನದಿಂದ ದಿನಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್​ ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಹಾಳಾದ ಶ್ರೇಷ್ಠಾಳನ್ನು ಮದುವೆಯಾಗಲು ಸಿದ್ದವಾಗಿದ್ದ ಮಗನನ್ನು ತಡೆಯಬೇಕು ಎಂಬ ಕೌತುಕದಲ್ಲಿ ಕುಸುಮಾ ಇದ್ದರೆ, ಇತ್ತ ಭಾಗ್ಯ ತಂಗಿ ಪೂಜಾಳನ್ನು ಹೇಗಾದರೂ ಮಾಡಿ ಹುಡುಕಬೇಕು ಅಂತ ಪಣ ತೊಟ್ಟಿದ್ದಾಳೆ.

publive-image

ಇದರ ಮಧ್ಯೆ ನೇರವಾಗಿ ಕುಸುಮಾ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟು ಮಗ ಹಾಗೂ ಶ್ರೇಷ್ಠಾಳ ಕೆನ್ನೆಗೆ ಎರಡು ಬಾರಿಸಿದ್ದಾರೆ. ಮದುವೆಗೆ ತಂದಿದ್ದ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾಳೆ. ಇದೇ ಪ್ರೋಮೋ ನೋಡಿದ ವೀಕ್ಷಕರು ಸಖತ್​ ಖುಷ್​ ಆಗಿದ್ದಾರೆ. ಅಂತೂ ಇಂತೂ ಕುಸುಮಾ ಅತ್ತೆ ಮದುವೆ ನಿಲ್ಲಿಸಿದ್ದಾರೆ. ಮುಂದೆ ಆದ್ರೂ ತಾಂಡವ್​ ಬುದ್ದಿ ಕಲಿಯುತ್ತಾನಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment