ಲವ್ವಲ್ಲಿ ಬಿದ್ದ ಭಾರ್ಗವಿ.. ಈ ಇಬ್ಬರ ಪ್ರೀತಿಗೆ ಜೆಪಿ ಪಾಟೀಲ್ ಕಡೆಯಿಂದ ಗ್ರೀನ್ ಸಿಗ್ನಲ್..!

author-image
Veena Gangani
Updated On
ಲವ್ವಲ್ಲಿ ಬಿದ್ದ ಭಾರ್ಗವಿ.. ಈ ಇಬ್ಬರ ಪ್ರೀತಿಗೆ ಜೆಪಿ ಪಾಟೀಲ್ ಕಡೆಯಿಂದ ಗ್ರೀನ್ ಸಿಗ್ನಲ್..!
Advertisment
  • ಅಷ್ಟಕ್ಕೂ ಭಾರ್ಗವಿ ಪ್ರೀತಿಸುತ್ತಿರೋದನ್ನು ಯಾರನ್ನ ಗೊತ್ತಾ?
  • ನಂದ ಗೋಕುಲ ಹಾಗೂ ಭಾರ್ಗವಿ LLB ಮಹಾಸಂಗಮದಲ್ಲಿ
  • ಭಾರ್ಗವಿ ಹಾಗೂ ಆ ಹುಡುಗನ ಪ್ರೀತಿಗೆ ಸೇತುವೆ ಕಟ್ಟಿದ್ದು ವಲ್ಲಭ

ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿರೋ ವಾಹಿನಿ ಕಲರ್ಸ್​ ಕನ್ನಡ. ನಂದ ಗೋಕುಲ ಹಾಗೂ ಭಾರ್ಗವಿ LLB ಮಹಾಸಂಗಮದಲ್ಲಿ ಪ್ರೇಮ ಪಯಣದ್ದೇ ಸದ್ದು.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪ್ರತ್ಯೇಕ ದೆಹಲಿಯಾತ್ರೆ.. ಮತ್ತೆ ಕಾಂಗ್ರೆಸ್​​ನಲ್ಲಿ ಬಿಸಿಬಿಸಿ ಟಾಕ್..!

publive-image

ಭಾರ್ಗವಿ ತನಗೆ ಗೊತ್ತಿಲ್ಲದ ಹಾಗೇ ಪಾರ್ಥನನ್ನ ಲವ್​ ಮಾಡ್ತಿದ್ದಾಳೆ. ಜೆಪಿ ಪಾಟೀಲ್‌ ಮಗ ಅರ್ಜುನ್ ಪಾಟೀಲ್‌ ಈ ಪಾರ್ಥ ಅನ್ನೋದು ಗೊತ್ತಿಲ್ಲ. ಅತ್ತ ಅರ್ಜುನ್​ ಅಪ್ಪನ ಮಾತಿಗೆ ಕಟ್ಟುಬಿದ್ದು ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ತಿರ್ತಾನೆ.

publive-image

ಹಂಗೂ ಹಿಂಗೂ ನಿಶ್ಚಿತಾರ್ಥ ಕ್ಯಾನ್ಸಲ್​ ಆಯ್ತು. ಇತ್ತ ಇವರ ಇಬ್ಬರ ಪ್ರೀತಿಗೆ ಜಯ ಸಿಗೋ ಮುನ್ಸೂಚನೆ ಸಿಕ್ಕಿದೆ. ಈ ಮಹಾ ತಿರುವಿನಲ್ಲಿ ಅತಿಥಿ ಪಾತ್ರ ಮಾಡಿದ್ದು ಸೀತಾರಾಮ ಖ್ಯಾತಿಯ ನಟ ಅಶೋಕ್​ ಶರ್ಮಾ.

publive-image

ಇನ್ನು, ಭಾರ್ಗವಿ-ಪಾರ್ಥನ ಪ್ರೀತಿಗೆ ಸೇತುವೆ ಕಟ್ಟಿದ್ದು ವಲ್ಲಭ. ನಂದಗೋಕುಲದ ವಲ್ಲಭ ಅಣ್ಣನ ಮದುವೆ ಮುಗಿಸಿ, ಸೀದಾ ಸ್ನೇಹಿತೆಗೆ ಸಾಥ್​ ಕೊಡೋಕೆ ಬಂದಿದ್ರು. ಆ ಕೌತುಕದ ಸಂಚಿಕೆಗಳು ವೀಕ್ಷಕರಿಗೆ ಮುದ ನೀಡಿವೆ. ಇವರು ಕಟ್ಟಿದ ಪ್ರೀತಿ ಸೇತುವೆ ಭಾರ್ಗವಿ-ಪಾರ್ಥನನ್ನ ಹತ್ತಿರ ಸೇರಿಸುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment