/newsfirstlive-kannada/media/post_attachments/wp-content/uploads/2025/06/Brahmagantu-Serial.jpg)
ಬ್ರಹ್ಮಗಂಟು ಧಾರಾವಾಹಿಗೆ ಸಖತ್​ ರೆಸ್ಪಾನ್ಸ್​ ಸಿಗ್ತಿದೆ. ಸ್ಟೋರಿ ಕೂಡ ಇಂಟ್ರಸ್ಟಿಂಗ್​ ಆಗಿ ಮೂಡಿಬರ್ತಿದ್ದು, ಟಿಆರ್​ಪಿ ರೇಟಿಂಗ್​ ಹೆಚ್ಚಿದೆ. ಕಳೆದ ಕೆಲ ತಿಂಗಳಿನಿಂದ ಟಾಪ್​ ಹತ್ತು ಧಾರಾವಾಹಿಗಳ ಲಿಸ್ಟ್​ನಲ್ಲಿ ಧಾರಾವಾಹಿ ಸ್ಥಾನ ಪಡೆದಿದ್ದು, ನಿಧಾನವಾಗಿ ವೀಕ್ಷಕರ ಮನಸ್ಸು ಗೆಲ್ಲುತ್ತಿದೆ ಬ್ರಹ್ಮಗಂಟು.
ಇದನ್ನೂ ಓದಿ: ಸಿನಿಮಾಗೆ ಹಾಡಲು ಆಫರ್ ಕೊಟ್ಟವರು ಲಹರಿನಾ ಫಿನಾಲೆಗೆ ಸೆಲೆಕ್ಟ್ ಮಾಡಿಲ್ಲ ಏಕೆ? ವೀಕ್ಷಕರು ಬೇಸರ!
/newsfirstlive-kannada/media/post_attachments/wp-content/uploads/2025/06/Brahmagantu-Serial2.jpg)
ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿರೋ ದೀಪಾನ ಮದುವೆ ಆಗಿದ್ದ ಚಿರು ಮನಸ್ಸಲ್ಲಿ ದೀಪಾ ಸ್ಥಾನ ಪಡೆದಿದ್ದಾಳೆ. ಇಬ್ಬರ ನಡುವೆ ಪ್ರೀತಿ ಶುರುವಾಗಿದೆ. ಇನ್ನೇನು ಈ ಜೋಡಿ ಹಕ್ಕಿಗಳು ಹಾರಾಡೋ ಟೈಮ್​ನಲ್ಲೇ ಅತ್ತಿಗೆ ಸೌಂದರ್ಯ ಜೋಡಿನ ದೂರ ಮಾಡೋ ಪ್ಲ್ಯಾನ್​ ಮಾಡ್ತಾಳೆ. ಅದು ಕೂಡ ಸಂಜನಾ ಜೊತೆ ಮದುವೆ ಮಾಡಿಸೋಕೆ ತಯಾರಾಗಿದ್ದಾಳೆ. ದೀಪಾಳನ್ನ ದಾಳವಾಗಿ ಬಳಿಸಿಕೊಂಡಿದ್ದಾಳೆ ಸೌಂದರ್ಯ.
/newsfirstlive-kannada/media/post_attachments/wp-content/uploads/2025/06/Brahmagantu-Serial3.jpg)
ಇತ್ತ ನರಸಿಂಹನ ಬಾಳಲ್ಲಿ ಆಟ ಆಡ ಚಿರುನ ಮದುವೆ ಆಗೋಕೆ ರೆಡಿಯಾಗಿದ್ದಾಳೆ ಸಂಜನಾ. ಆದ್ರೇ ಪಂಟಪದಲ್ಲಿ ನಡೆಯೋದೇ ಬೇರೆ. ಈ ಮದುವೆಗೆ ಚಿರು ಬಿಲ್​ಕುಲ್​ ಒಪ್ಪೋದಿಲ್ಲ. ಆದ್ರೂ ದೀಪಾ ಮಾತಿಗೆ ಬೆಲೆಕೊಟ್ಟು ಒಲ್ಲದ ಮನಸ್ಸಿಂದ ತಾಳಿ ಕಟ್ಟೋಕೆ ಒಪ್ಪಿಕೊಳ್ತಾನೆ. ಇಲ್ಲೇ ಇರೋದು ನೋಡಿ ಟ್ವಿಸ್ಟ್​. ತಂಗಿ ಬಾಳನ್ನ ಹಾಳಾಗೋಕೆ ಬಿಡ್ತಾನ ನರಸಿಂಹ? ನೋ ಚಾನ್ಸ್.
/newsfirstlive-kannada/media/post_attachments/wp-content/uploads/2025/06/Brahmagantu-Serial1.jpg)
ಏಕಾಏಕಿ ಚಿರು ಕೈಯಲ್ಲಿದ್ದ ತಾಳಿಯನ್ನು ಸಂಜನಾ ಕೊರಳಿಗೆ ಕಟ್ಟೇ ಬಿಡ್ತಾನೆ ನರಸಿಂಹ. ಅಂತೂ ಇಂತೂ ನರಸಿಂಹ, ಸಂಜನಾ ಮದುವೆ ಆಗೋಗಿದೆ. ಇಷ್ಟು ದಿನ ಈ ಕ್ಷಣಕ್ಕಾಗಿ ಈ ಜೋಡಿ ಫ್ಯಾನ್ಸ್​ ಕಾಯ್ತಾ ಇದ್ರು. ಇನ್ಮುಂದೆ ಅವರಿಗೆಲ್ಲಾ ಪ್ರತಿ ದಿನ ಹಬ್ಬ. ಈ ಜೋಡಿ ಕಿತ್ತಾಟ, ಮುದ್ದಾಟ ಇನ್ಮುಂದೆ ವೀಕ್ಷಕರಿಗೆ ಪಕ್ಕಾ ಇಷ್ಟ ಆಗುತ್ತೇ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us