/newsfirstlive-kannada/media/post_attachments/wp-content/uploads/2025/07/RAICHURU-1.jpg)
ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್​ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಗದ್ದೆಮ್ಮನ ಮೇಲೆ ಆರೋಪ ಮಾಡುತ್ತಿರುವ ಪತಿ ತಾತಪ್ಪ ಡಿವೋರ್ಸ್​​ಗೆ ಮುಂದಾಗಿದ್ದಾನಂತೆ. ಪ್ರಕರಣ ಬಳಿಕ ಕುಟುಂಬಸ್ಥರು ರಾಜಿ ಪಂಚಾಯತಿ ನಡೆಸಿದ್ದರು. ಆದ್ರೆ ರಾಜಿಗೆ ಒಪ್ಪದೆ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾನಂತೆ..
ಪತ್ನಿ ಗದ್ದೆಮ್ಮ ಹೇಳೋದು ಏನು..?
ನ್ಯೂಸ್​​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು.. ಮದುವೆ ಆಗಿ ಮೂರು ತಿಂಗಳು ಆಗಿದೆ. ಏಪ್ರಿಲ್ 18 ರಂದು ಮದುವೆ ಆಗಿದೆ. ನಾನು ಆತನನ್ನು ತಳ್ಳಿಲ್ಲ. ಕಾಲು ಜಾರಿ ಬಿದ್ದಿದ್ದಾನೆ. ಬಳಿಕ ನನ್ನ ಮೇಲೆ ಸುಳ್ಳು ಹೇಳುತ್ತಿದ್ದಾನೆ. ನಾವು ಸುರಪುರದಿಂದ ಶಕ್ತಿನಗರಕ್ಕೆ ಬೈಕ್ ಹೊರಟಿದ್ದೇವು. ನಾವು ಗಂಡನ ಮನೆಗೆ ಹೊರಟಿದ್ದೇವೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಮತ್ತೊಂದು ಸೋಲು, ನಾಯಕ ಶುಬ್ಮನ್ ಗಿಲ್ ಏನಂದ್ರು..?
ಬ್ರಿಡ್ಜ್ ಬಂದ ಬಳಿಕ ಫೋಟೋ ತೆಗೆದುಕೊಳ್ಳೋಣ ಎಂದು ನಿಲ್ಲಿಸಿದ್ದೇವೆ. ಫೋಟೋ ತೆಗೆದುಕೊಂಡಿದ್ದೇವೆ. ನಂತರ ಆತ ಹೆಂಗೆ ಬಿದ್ದಿದ್ದಾನೋ ಗೊತ್ತಿಲ್ಲ. ಬಿದ್ದ ನಂತರ ಈಜುತ್ತ ಹೋಗಿ ಕೂತಿದ್ದಾನೆ. ನದಿಯಲ್ಲಿ ನೀರು ಆಳವಾಗಿ ಇರಲಿಲ್ಲ. ನದಿ ಮಧ್ಯೆ ಹೋಗಿ ಕೂತ ಆತ, ನನ್ನ ವಿರುದ್ಧ ಆರೋಪ ಮಾಡಲು ಶುರುಮಾಡಿದ್ದಾನೆ.
ಯಾರೆಲ್ಲ ಗಾಬರಿಯಾಗಿ ಬಂದು ನೋಡಿದರೋ, ಅವರ ಬಳಿ ನನ್ನನ್ನು ಹಿಡಿದುಕೊಳ್ಳಿ ಎಂದು ಹೇಳ್ತಿದ್ದ. ಬರೀ ಸುಳ್ಳು ಆರೋಪಗಳನ್ನು ಮಾಡಿದ. ನಾನು ಆತನ ತಳ್ಳಿಯೇ ಇಲ್ಲ. ಅದಕ್ಕೆ ನಾನು ಕೂಡ ನದಿಗೆ ಹಾರುತ್ತೇನೆ ಎಂದು ಮುಂದಾದೆ. ಆಗ ಆತನ ರಕ್ಷಣೆಗೆ ಬಂದಿದ್ದ ಅಣ್ಣಂದಿರು ಸಮಾಧಾನ ಮಾಡಿದರು. ನೀನೇನೂ ಮಾಡೋಕೆ ಹೋಗಬೇಡ. ಏನೇ ಸಮಸ್ಯೆ ಇದ್ದರೂ ಮನೆಯಲ್ಲಿ ಬಗೆಹರಿಸಿಕೊಳ್ಳಿ ಎಂದರು.
ಈ ಮೊದಲು ನಮ್ಮಿಬ್ಬರ ಮಧ್ಯೆ ಯಾವುದೇ ಜಗಳ ಆಗಿಲ್ಲ. ಅವರು ಯಾಕೆ ಹಾಗೆ ಮಾಡಿದರೋ ಗೊತ್ತಿಲ್ಲ. ಅವರನ್ನು ಮೇಲಕ್ಕೆ ಎತ್ತಿದ ನಂತರ, ನಾವು ಮನೆಗೆ ಹೋದ್ವಿ. ಅವರ ಬೈಕ್​​ಗೆ ನಾನು ಬರುತ್ತೇನೆ ಎಂದೆ. ಆದರೆ ಆತ, ಬೇಡ ಎಂದು ಪಟ್ಟು ಹಿಡಿದರು. ಹೀಗಾಗಿ ರಕ್ಷಣೆ ಮಾಡಿದ ಇಬ್ಬರು ಅಣ್ಣಂದಿರು ನನ್ನನ್ನು ತಂದು ಗಂಡನ ಮನೆಗೆ ಬಿಟ್ಟು ಹೋದರು.
ಇದನ್ನೂ ಓದಿ: ರಿಂಗ್ ರೋಡ್ ಶುಭಾಗೆ ಜೀವಾವಧಿ ಶಿಕ್ಷೆ ಖಾಯಂ; ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಟ್ಟ ಸುಪ್ರೀಂ
ಅವರೆಲ್ಲ ಹೋದ ಮೇಲೆ ನೀನೇ ನನ್ನನ್ನು ನದಿಗೆ ತಬ್ಬಿದ್ದು ಎಂದು ಗಲಾಟೆ ಮಾಡಿದರು. ಗಲಾಟೆ ಬಳಿಕ ಅಮ್ಮನ ಮನೆಗೆ ತಂದು ಬಿಟ್ಟು ಹೋದರು. ಈಗ ಆತನಿಗೆ ನಾನು ಬೇಡ ಎಂದು ಹೇಳುತ್ತಿದ್ದಾನೆ. ನನ್ನ ಸಂಬಂಧಿಯಾದ ಕಾರಣ ಮನೆಯವರು ಮದುವೆ ಮಾಡಿದರು. ಆತ ನನಗೆ ಅತ್ತೆ ಮಗ. ನಾನು ಓದಿರೋದು 8 ತರಗತಿ. ಮನೆಯವರ ಒಪ್ಪಿಗೆ ಮೆರೆಗೆ ಮದುವೆ ಆಗಿದ್ದೇವು.
ವಿಡಿಯೋ ನೋಡಿದ ಮೇಲೆ ನನ್ನ ಮನೆಯವರು ಕೂಡ ನಾನೇ ದಬ್ಬಿದ್ದೇನೆ ಅಂತಾ ನಂಬಿದ್ದಾರೆ. ವಿಡಿಯೋ ತುಂಬಾ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲ, ನಾನೇ ತಳ್ಳಿದ್ದೇನೆ ಎಂದು ಹೇಳಿದ್ದಾರೆ. ಮನೆಯವರು ಕೂಡ ನನ್ನ ಬೆಂಬಲಕ್ಕೆ ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ರಾಯಚೂರು ಮೂಲದ ತಾತಪ್ಪಾ ಮತ್ತು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ದೇವರಗಡ್ಡಿ ಗ್ರಾಮದ ಗದ್ದೆಮ್ಮ ಮದುವೆಯಾಗಿ ಕೇವಲ ಮೂರೇ ತಿಂಗಳಲ್ಲಿ ಈ ಗಲಾಟೆ ನಡೆದಿದೆ.
ಮಾತುಕತೆಯ ಸಂಪೂರ್ಣ ವಿವರಕ್ಕಾಗಿ ಈ ವಿಡಿಯೋ ಕ್ಲಿಕ್ ಮಾಡಿ..