ವೀಕ್ಷಕರಿಗೆ ಗುಡ್​ನ್ಯೂಸ್​; ​ಥ್ರಿಲ್ಲಿಂಗ್​ ಎಲಿಮೆಂಟ್ಸ್ ಮೂಲಕ ಬರ್ತಿದೆ ಕರಿಮಣಿ​ ಸೀರಿಯಲ್​..!

author-image
Veena Gangani
Updated On
ವೀಕ್ಷಕರಿಗೆ ಗುಡ್​ನ್ಯೂಸ್​; ​ಥ್ರಿಲ್ಲಿಂಗ್​ ಎಲಿಮೆಂಟ್ಸ್ ಮೂಲಕ ಬರ್ತಿದೆ ಕರಿಮಣಿ​ ಸೀರಿಯಲ್​..!
Advertisment
  • ಕರಿಮಣಿ ಸೀರಿಯಲ್​ನಲ್ಲಿ ಬರಲಿದೆ ಕರ್ಣನ ಸಖತ್​ ಮಾಸ್​ ಅವತಾರ
  • ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ ಕರಿಮಣಿ ಧಾರಾವಾಹಿ
  • ಹಂತ ಹಂತವಾಗಿ ಟಿಆರ್​ಪಿ ಲಿಸ್ಟ್​ನಲ್ಲಿ ಸ್ಥಾನವನ್ನು ಬದಲಾಯಿಸುತ್ತಿದೆ

ಕರಿಮಣಿ ಧಾರಾವಾಹಿಗೆ ವೀಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಟಿಆರ್​ಪಿ ಲಿಸ್ಟ್​ನಲ್ಲಿ ಸ್ಥಾನ ಪಡೆದ ಟಾಪ್​ ಹತ್ತು ಧಾರಾವಾಹಿಗಳಲ್ಲಿ ಇದು ಕೂಡ ಒಂದು. ರೋಮ್ಯಾನ್ಸ್, ಕಾಮಿಡಿ, ದ್ವೇಷ, ಥ್ರಿಲ್ಲಿಂಗ್​ ಎಲಿಮೆಂಟ್ಸ್​ ಮೂಲಕ ಸ್ಟೋರಿನ ಹದವಾಗಿ ಬಿಲ್ಡ್​ ಮಾಡ್ಕೊಂಡು ಹೋಗ್ತಿದೆ ಈ ಸೀರಿಯಲ್ ತಂಡ. ಹೀಗಾಗಿನೇ ವೀಕ್ಷಕರ ದಿಲ್ ​ಕದ್ದಿದೆ ಕರಿಮಣಿ.

publive-image

ಇದನ್ನೂ ಓದಿ: ವೀಕ್ಷಕರಿಗೆ ಗುಡ್​ನ್ಯೂಸ್​​.. ​ಬಿಗ್ ಬಾಸ್ ಕನ್ನಡ ಸೀಸನ್ 11 ಶುರು ಯಾವಾಗ?

ಲಾಂಚಿಂಗ್​ನಲ್ಲೇ ಸೂಪರ್​ ಆಗಿರೋ ಫೈಟ್​ ನೀಡಿದ್ದ ತಂಡ ಈಗ ಮತ್ತೊಂದು ಫೈಟ್​ ಸೀನ್​ನ ಕಂಪೋಸ್ ಮಾಡಿದೆ. ಚಿಕ್ಕಪ್ಪ ಮಾಡಿದ ತಪ್ಪಿಗೆ ಸಾಹಿತ್ಯ ಬಲಿಯಾಗಿದ್ದಾಳೆ. ಗಜಗಾಮಿನಿ ಆರ್ಭಟಕ್ಕೆ ಬ್ರೇಕ್​ ಹಾಕೋಕೆ ಕರ್ಣನೇ ಬರಬೇಕಿದೆ. ಈ ಸಂದರ್ಭದಲ್ಲಿ ಭರ್ಜರಿ ಫೈಟ್​ ಸೀನ್​ ಇದ್ದು, ಕರ್ಣನ ಮಾಸ್​ ಅವತಾರ ಸಖತ್​ ಎಂಟರ್​ಟೈನಿಂಗ್​ ಆಗಿರಲಿದೆ.

publive-image

ಇತ್ತೀಚಿಗಷ್ಟೇ ಕರಿಮಣಿ ಸೀರಿಯಲ್​ ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿರೋ ಸಂಭ್ರಮದಲ್ಲಿದೆ. ಈ ಸಂಭ್ರಮದ ಹಿನ್ನಲೆಯಲ್ಲಿ ಸಖತ್​ ಥ್ರಿಲ್ಲಿಂಗ್​ ಸನ್ನಿವೇಶಗಳನ್ನ ಫ್ಯಾನ್ಸ್​ಗೆ ಗಿಫ್ಟ್​ ಆಗಿ ನೀಡಲಿದೆ. ಸಿನಿಮಾ ರೀತಿಯಲ್ಲೇ ಜಬರ್ದಸ್ತ್​ ಫೈಟ್​ ಸೀನಗಳನ್ನು ನೀಡ್ತಿರೋ ಕರಿಮಣಿಗೆ ಫ್ಯಾನ್ಸ್ ಅಂತೂ ಫುಲ್​ ಫಿದಾ ಆಗಿ ಬಿಟ್ಟಿದ್ದಾರೆ. ಒಟ್ಟಿನಲ್ಲಿ ಕಂಪ್ಲೀಟ್​ ಮನರಂಜನೆಯ ಪವರ್​​ ಪ್ಯಾಕ್​ ಸಂಚಿಕೆಗಳನ್ನ ಎಂಜಾಯ್​ ಮಾಡೋಕೆ ಪ್ರತಿ ದಿನ ರಾತ್ರಿ 9.30ಕ್ಕೆ ಕರಿಮಣಿ ಸೀರಿಯಲ್​ ಅನ್ನು ಕಣ್ತುಂಬಿಕೊಳ್ಳಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment