ಬೆಂಗಳೂರಲ್ಲಿ ಪತ್ನಿ ಕೊಲೆ ಕೇಸ್​ಗೆ ಟ್ವಿಸ್ಟ್​; ಆ ರಾತ್ರಿ ಇಬ್ಬರ ಮಧ್ಯೆ ನಡೆದಿದ್ದೇನು?

author-image
Veena Gangani
Updated On
ಬೆಂಗಳೂರಲ್ಲಿ ಪತ್ನಿ ಕೊಲೆ ಕೇಸ್​ಗೆ ಟ್ವಿಸ್ಟ್​; ಆ ರಾತ್ರಿ ಇಬ್ಬರ ಮಧ್ಯೆ ನಡೆದಿದ್ದೇನು? 
Advertisment
  • ಪತ್ನಿಯನ್ನು ಕೊಂದು ಸೂಟ್​ಕೇಸ್​ಗೆ ತುಂಬಿದ್ದೇಕೆ ಪತಿ?
  • ರಾತ್ರಿಯೇ ಪತ್ನಿಯನ್ನು ಕೊಲೆ ಮಾಡೋದಕ್ಕೆ ಕಾರಣವೇನು?
  • ಪತ್ನಿ ಕೊಲೆಗೈದು ಎಸ್ಕೇಪ್ ಆಗಲು ಏನೆಲ್ಲಾ ಪ್ಲಾನ್​ ಮಾಡಿದ್ದ?​

ಬೆಂಗಳೂರು: ಪತ್ನಿಯನ್ನು ಕೊಂದು ಸೂಟ್​ಕೇಸ್​ಗೆ ತುಂಬಿದ ಪ್ರಕರಣಕ್ಕೆ ಸಂಬಂಧಿಸಿ ಒಂದೊಂದೇ ಮಾಹಿತಿ ಹೊರ ಬರುತ್ತಿದೆ. ಪತ್ನಿ ಗೌರಿಯನ್ನು ಕೊಲೆಗೈದ ಪತಿ ರಾಕೇಶ್, ಕೇಸ್ ಮುಚ್ಚಿ ಹಾಕಲು ಏನೆಲ್ಲ ಯೋಜನೆ ರೂಪಿಸಿದ್ದ ಅನ್ನೋದು ರಿವೀಲ್ ಆಗಿದೆ.

publive-image

ಆ ರಾತ್ರಿ ನಡೆದಿದ್ದೇನು?

ಬುಧವಾರ ರಾತ್ರಿ ಕೆಲಸದ ವಿಚಾರವಾಗಿ ಪತಿ-ಪತ್ನಿಯ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯ ಮಧ್ಯೆ ಪತಿ ಮೇಲೆ ಪತ್ನಿ ಚಾಕು ಎಸೆದಿದ್ದಾಳಂತೆ. ನಂತರ ಕೋಪದಲ್ಲಿ ಅದೇ ಚಾಕುವಿನಿಂದ ಪತ್ನಿಯನ್ನು ಇರಿದು ಹತ್ಯೆ ಮಾಡಿದ್ದಾನಂತೆ. ಪತ್ನಿಯ ಹೊಟ್ಟೆ, ಕತ್ತು ಕೊಯ್ದು ಸೂಟ್ ಕೇಸ್​ಗೆ ತುಂಬಿದ. ಆ ಬಳಿಕ ಸೂಟ್ ಕೇಸ್ ಸಮೇತ ಎಸ್ಕೇಪ್​ ಆಗೋದಕ್ಕೆ ಪ್ಲಾನ್​ ಮಾಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

ಕೊಲೆ ಮಾಡಿದ ಬಳಿಕ ಮನೆಯಲ್ಲಿ ಕೂತು ಊಟ ಮಾಡಿದ್ದಾನೆ. ರಾತ್ರಿ 11 ಗಂಟೆಯ ಬಳಿಕ ಕಾರಿಗೆ ಬಾಡಿ ಶಿಪ್ಟ್ ಮಾಡುವ ಪ್ಲಾನ್ ಮಾಡಿದ್ದ. ಆದರೆ ಅದು ಸಕ್ಸಸ್ ಆಗಿಲ್ಲ. ಹೀಗಾಗಿ ಬಾತ್​ ರೂಮಿನಲ್ಲಿ ಶವ ಇಟ್ಟು ಅಲ್ಲಿಂದ ಪರಾರಿ ಆಗಿದ್ದಾನೆ. ಬಾಡಿಗೆ ಮನೆಯಿಂದ ಓಡಿ ಹೋಗುವ ವೇಳೆ ಕುಟುಂಬಸ್ಥರಿಗೆ ಕರೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಅಲ್ಲದೇ ಪಕ್ಕದ ಮನೆಯ ಬಾಡಿಗೆದಾರನಿಗೂ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿ ಮಹಾರಾಷ್ಟ್ರಕ್ಕೆ ಪರಾರಿ ಆಗಿದ್ದಾನೆ. ಬಳಿಕ ಪಕ್ಕದ ಮನೆಯ ಬಾಡಿಗೆದಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಳಿಮಾವು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

publive-image

ಮಹಾರಾಷ್ಟ್ರ ಮೂಲದ ರಾಕೇಶ್, ಗೌರಿ ಅನಿಲ್ ಸಾಂಬೆಕರ್, ಎರಡು ವರ್ಷದ ಹಿಂದಷ್ಟೆ ಮದುವೆ ಆಗಿದ್ದರು. ಬದುಕು ಸಾಗಿಸಲು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ರು, ಪತಿ ರಾಕೇಶ್​ ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ. ಪತ್ನಿ ಗೌರಿ, ಮನೆಯಲ್ಲೇ ಇದ್ದು ಕೆಲಸವನ್ನು ಹುಡುಕುತ್ತಿದ್ದಳು. 1 ತಿಂಗಳ ಹಿಂದಷ್ಟೇ ಹುಳಿಮಾವು ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದರು. ಪತಿ ರಾಕೇಶ್​ ವರ್ಕ್​ ಫ್ರಮ್​ ಹೋಮ್ ಕೆಲಸ​ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment