/newsfirstlive-kannada/media/post_attachments/wp-content/uploads/2025/03/Amruthadhaare1.jpg)
ಭೂಮಿಕಾ ಗೌತಮ್ ಕೋಳಿ ಜಗಳ ಜೊತೆ ಶುರುವಾಗಿದ್ದ ಅಮೃತಧಾರೆ ಮಹಾ ತಿರುವು ಪಡೆದುಕೊಳ್ತಿದೆ. ಈ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಈ ನಡುವೆ ಹೊಸ ಹೀರೋಯಿನ್ ಕೂಡ ಎಂಟ್ರಿ ಪಡೆದುಕೊಂಡಿದ್ದಾರೆ. ಏನಾಗ್ತಿದೆ ಭೂಮಿಕಾ ಲೈಫ್ನಲ್ಲಿ?
ಇದನ್ನೂ ಓದಿ: ಅನಂತ್ ಅಂಬಾನಿ ವಂತಾರಾದಲ್ಲಿ ಪ್ರಧಾನಿ ಮೋದಿ ಹುಲಿ, ಸಿಂಹದ ಮರಿಗಳ ಜೊತೆ ಆಟ; ವಿಡಿಯೋ ಇಲ್ಲಿದೆ!
ವೀಕ್ಷಕರಿಗೆ ತುಂಬಾ ಹತ್ತಿರವಾಗಿರೋ ಪಾತ್ರ ಭೂಮಿಕಾ. ವೀಕ್ಷಕರ ನಿರೀಕ್ಷೆ ಹುಸಿ ಮಾಡದಂತೆ ಅದ್ಭುತವಾಗಿ ಪಾತ್ರವನ್ನ ಛಾಯಾ ಸಿಂಗ್ ನಿರ್ವಹಿಸ್ತಿದ್ದಾರೆ. ಗೌತಮ್ ದಿವಾನ್ ಪಾತ್ರದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಿದ ರಾಜೇಶ್ ನಟರಂಗ ಅವರನ್ನು ಜನ ಒಪ್ಪಿ ಅಪ್ಪಿದ್ದಾರೆ. ಕರ್ನಾಟಕಕ್ಕೆ ಮೋಡಿ ಮಾಡಿರೋ ಜೋಡಿ ಇದು. ಇವರಿಬ್ಬರ ನಡುವೆ ಹೊಸ ಪಾತ್ರ ಎಂಟ್ರಿಯಾಗಿದೆ. ಮಧುರಾ ಎಂಬ ಪಾತ್ರದಲ್ಲಿ ರಾಧಾ ಮಿಸ್ ಖ್ಯಾತಿಯ ನಟಿ ಶ್ವೇತಾ ಪ್ರಸಾದ್ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಮನಸ್ತಾಪದ ಜೊತೆಗೆ ಶುರುವಾದ ಭೂಮಿಕಾ ಗೌತಮ್ ದಾಂಪತ್ಯ, ನಂತರ ದಿನಗಳಲ್ಲಿ ಇಬ್ಬರ ನಡುವೆ ಗಾಢವಾದ ಪ್ರೀತಿ ಮೊಳಕೆಯೊಡೆಯುತ್ತೆ. ಪ್ರೀತಿಯ ಸಂಕೇತವಾಗಿ ಭೂಮಿಕಾ ಪ್ರೆಗ್ನೆಂಟ್ ಆಗ್ತಾರೆ. ಆದ್ರೇ ಅತ್ತೆ ಶಕುಂತಲಾ ಕುತಂತ್ರಕ್ಕೆ ಭೂಮಿಕಾ ಮಗು ಬಲಿಯಾಗುತ್ತೆ. ಈ ನಡುವೆ ಹೊಸ ಪ್ಲ್ಯಾನ್ ಮಾಡಿರೋ ಶಕುಂತಲಾ, ಭೂಮಿಗೆ ಇನ್ಮುಂದೆ ಮಕ್ಕಳಾಗಲ್ಲ ಅಂತ ಡಾಕ್ಟರ್ ಹತ್ತಿ ಸುಳ್ಳು ಹೇಳಿಸಿದ್ದಾಳೆ. ಅತ್ತೆ ಮಾತು ನಂಬಿದ ಭೂಮಿ ಗಂಡನಿಗೆ ಇನ್ನೊಂದು ಮದುವೆ ಮಾಡಿಸೋಕೆ ರೆಡಿಯಾಗಿದ್ದಾಳೆ. ಗೌತಮ್ಗೆ ಹುಡುಕಿರೋ ಹುಡುಗಿಯೇ ಈ ಮಧುರಾ.
ಮಧುರಾ ಪಾತ್ರದ ಎಂಟ್ರಿಗೆ ವೀಕ್ಷಕರು ಬೇಸರ ಹೋರ ಹಾಕ್ತಿದ್ದಾರೆ. ರಾಧಾ ಮಿಸ್ ನೀವು ಅಮೃತಧಾರೆಗೆ ಎಂಟ್ರಿ ಕೊಟ್ಟಿರೋದು ತುಂಬಾ ಖುಷಿ ಆಯ್ತು. ಆದರೆ ನಮ್ಮ ಭೂಮಿ-ಗೌತಮ್ ಮಧ್ಯ ಬರಬೇಡಿ. ಇಬ್ಬರನ್ನೂ ಮಿಸ್ ಮಾಡದೇ ಒಂದು ಮಾಡಿ. ವಿಲನ್ ಆಗ್ಬೇಡಿ, ಚನ್ನಾಗಿದ್ದ ಸ್ಟೋರಿನ ಹಾಳು ಮಾಡ್ಬೇಡಿ ಡೈರೆಕ್ಟ್ರೇ ಅಂತ ಸೋಷಿಯಲ್ ಮೀಡಿಯಾದಲ್ಲಿ ಬೇಸರದ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.
ಇದು ಗೌತಮ್ ಹಾಗೂ ಭೂಮಿನ ವೀಕ್ಷಕರು ಎಷ್ಟು ಹಚ್ಕೊಂಡಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಆದರೆ ಡೊಂಟ್ ವರಿ ಭೂಮಿ ಗೌತಮ್ ಬೇರೆ ಬೇರೆ ಆಗೋದಿಲ್ಲ. ರಾಧಾ ಮಿಸ್ ನಿಮ್ಮ ನಿರೀಕ್ಷೆಯನ್ನ ಹುಸಿ ಮಾಡಲ್ಲ. ಖಂಡಿತ ಊಹೆಗೂ ಮೀರಿದ ಸಂಚಿಕೆಗಳು ಪ್ರಸಾರವಾಗಲಿವೆ. ಸದ್ಯ ಮಧುರಾ-ಗೌತಮ್ ಮುಖಾಮುಖಿಯಾಗಿದ್ದಾರೆ. ಭೂಮಿ ಕಣ್ಣೀರ ನಡುವೆ ಇಬ್ಬರನ್ನೂ ಒಂದು ಮಾಡೋ ಪ್ರಯತ್ನ ಮಾಡ್ತಿದ್ದಾಳೆ. ಎಲ್ಲಾ ಗೊತ್ತಿದ್ದು ಮಧುರಾ ಗೌತಮ್ನ ಮದುವೆ ಆಗೋಕೆ ಒಪ್ಪಿಕೊಂಡಿದ್ದಾಳಾ? ಗೌತಮ್ ಮರು ಮದುವೆಗೆ ಸಮ್ಮತಿಸ್ತಾನಾ? ತಂತ್ರ ಕುತಂತ್ರಗಳು ವರ್ಕೌಟ್ ಆಗುತ್ತಾ? ಈ ಎಲ್ಲಾ ಕೂತುಹಲದ ಅಂಶಗಳನ್ನ ತಿಳಿಯೋಕೆ ಅಮೃತಧಾರೆ ನೋಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ