ಪ್ರೀತಿ ಹೆಸರಲ್ಲಿ ನರಸಿಂಹನಿಗೆ ಮೋಸ.. ಸಂಜನಾ ಕಳ್ಳಾಟ ದೀಪಾ ಮುಂದೆ ಬಯಲಾಗುತ್ತಾ?

author-image
Veena Gangani
Updated On
ಪ್ರೀತಿ ಹೆಸರಲ್ಲಿ ನರಸಿಂಹನಿಗೆ ಮೋಸ.. ಸಂಜನಾ ಕಳ್ಳಾಟ ದೀಪಾ ಮುಂದೆ ಬಯಲಾಗುತ್ತಾ?
Advertisment
  • ಸೌಂದರ್ಯ ಸೇರು ಅಂದ್ರೇ, ನಾನು ಸವಾ ಸೇರು ಅಂತಿದ್ದಾಳೆ ದೀಪಾ
  • ಟಿಆರ್​ಪಿನಲ್ಲಿ ಸಖತ್​ ಸೌಂಡ್​ ಮಾಡ್ತೀದೆ ಬ್ರಹ್ಮಗಂಟು ಸೀರಿಯಲ್​​
  • ಪ್ರೀತಿ ಹೆಸರಲ್ಲಿ ನರಸಿಂಹನಿಗೆ ಮಹಾ ಮೋಸ ಮಾಡ್ತಿದ್ದಾಳೆ ಸಂಜನಾ ​

ಟಿಆರ್​ಪಿನಲ್ಲಿ ಬ್ರಹ್ಮಗಂಟು ಸೀರಿಯಲ್​​ ಸಖತ್​ ಸೌಂಡ್​ ಮಾಡುತ್ತಿದೆ. ದೀಪಾ ರೆಬಲ್​ ಆಗಿರೋದು ವರ್ಕೌಟ್​ ಆಗ್ತಿದೆ. ಸೌಂದರ್ಯ ಸೇರು ಅಂದ್ರೇ ದೀಪಾ ಸವಾ ಸೇರು ಅಂತಿದ್ದಾಳೆ.

publive-image

ಅಲ್ಲದೇ ಓರಗಿತ್ತಿಯರ ಕಾದಾಟ ಕಿಕ್​ ಕೊಡ್ತಿದೆ. ಕಳೆದ ಕೆಲವಾರಗಳಿಂದ ಟಾಪ್​ ಹತ್ತು ಧಾರಾವಾಹಿಗಳ ಲಿಸ್ಟ್​ನಲ್ಲಿ ಬ್ರಹ್ಮಗಂಟು ಖಾಯಂ ಸ್ಥಾನ ಪಡೆದಿರೋದೇ ಸಾಕ್ಷಿ.

ಇದನ್ನೂ ಓದಿ: ನೇಹಾ ಗೌಡ ತಮ್ಮ ಮುದ್ದಾದ ಮಗಳಿಗೆ ಶಾರದ ಅಂತಾ ಹೆಸರು ಇಟ್ಟಿದ್ದೇಕೆ; ಗುಟ್ಟು ಬಿಚ್ಚಿಟ್ಟ ನಟಿಯ ತಂದೆ

publive-image

ದೀಪಾ-ಚಿರು ನಿಧಾನವಾಗಿ ಹತ್ತಿರ ಆಗ್ತಿದ್ದಾರೆ. ಇವ್ರಷ್ಟೇ ಫೇಮಸ್​​ ಆಗಿರೋ ಜೋಡಿ ಸಂಜನಾ-ನರಸಿಂಹ. ಇವರಿಬ್ಬರ ಕೋಳಿ ಜಗಳಕ್ಕೆನೇ ಸಪರೇಟ್​ ಫ್ಯಾನ್​ ಬೇಸ್​ ಇದೆ.

publive-image

ಸದ್ಯ ಸಂಜನಾ ಕಿಡ್ನಾಪ್​ ಆಗಿದ್ದಾಳೆ. ನಾಯಕಿನ ಕಾಪಾಡೋಕೆ ಹೀರೋ ಗತ್ತಲ್ಲೇ ನರಸಿಂಹ ಎಂಟ್ರಿ ಕೊಟ್ಟಿದ್ದಾನೆ. ಬಾಮೈದಿನಿಗೆ ಸಪೋರ್ಟ್​ ಮಾಡೋಕೆ ಭಾವ ಚಿರು ಕೂಡ ರಗಡ್​ ಆಗಿ ಅಡ್ಡಾಗೆ ಕಾಲಿಟ್ಟಿದ್ದಾನೆ.

publive-image

ಬ್ರಹ್ಮಗಂಟು ಸೀರಿಯಲ್​ನಲ್ಲಿ ಜಬರ್ದಸ್ತ್​ ಫೈಟ್​ ಸೀನ್​ ನೋಡಿ ವೀಕ್ಷಕರು ಫುಲ್ ಥ್ರೀಲ್​ ಆಗಿದ್ದಾರೆ. ಇನ್ನೂ, ಪ್ರೀತಿ ಹೆಸರಲ್ಲಿ ಸಂಜನಾ ನರಸಿಂಹನಿಗೆ ಕಾಲ್​ ಮಾಡ್ತಾ ಇರೋದು ದೀಪಾಗೆ ಗೊತ್ತಾಗಿದೆ. ಅಣ್ಣನಿಗೆ ಎಲ್ಲಾ ಹೇಳ್ತಿನಿ ಅಂತ ದೀಪಾ ಹೇಳೋ ದೃಶ್ಯದ ಸಂಚಿಕೆಯನ್ನು ಮಿಸ್​ ಮಾಡಿದೆ ನೋಡಲೇಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment