/newsfirstlive-kannada/media/post_attachments/wp-content/uploads/2025/04/laxmi-nivasa.jpg)
ಸಖತ್ ಪಾಪ್ಯೂಲರ್ ಆಗಿವೆ ಲಕ್ಷ್ಮೀ ನಿವಾಸದ ಚಿನ್ನು ಮರಿ.. ಮುದ್ದು ಮರಿ ನಿಕ್ ನೇಮ್ಸ್. ಲಕ್ಷ್ಮೀ ನಿವಾಸ ನೋಡೋ ವೀಕ್ಷಕರಿಗೆ ಈ ಎರಡೂ ಹೆಸರು ಕೇಳದೇ ನಿದ್ದೆನೇ ಬರೋದಿಲ್ಲ ಅಂತಾಗಿದೆ. ಈಗ ವಿಷ್ಯ ಏನೆಂದರೆ ಲಕ್ಷ್ಮೀ ನಿವಾಸ ಸೀರಿಯಲ್ ಮಹಾ ತಿರುವು ಪಡೆದುಕೊಂಡಿದೆ. ಚಿನ್ನುಮರಿ ಸಮುದ್ರ ಪಾಲಾಗಿದ್ದಾಳೆ. ನೋವು ಸಂಕಟದಲ್ಲಿ ಜಯಂತ್ ಒದ್ದಾಡ್ತಿದ್ದಾನೆ. ಸೈಕೋ ಜಯಂತನ ಅಭಿನಯಕ್ಕೆ ವೀಕ್ಷಕರು ದಂಗಾಗಿದ್ದಾರೆ. ಅವರ ಬಾಯಿಂದ ಬರ್ತಿರೋ ಉದ್ಘಾರ ಒಂದೇ.. ವಾವ್... ವಾವ್.. ಏನ್ ಆ್ಯಕ್ಟಿಂಗ್ ಗುರೂ ಅಂತ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
ಲಕ್ಷ್ಮೀ ನಿವಾಸ ಹಲವು ಆಯಾಮಗಳಲ್ಲಿ ವೀಕ್ಷಕರಿಗೆ ಮನರಂಜನೆ ನೀಡ್ತಿದೆ. ಜೊತೆಗೆ ಒಂದಿಷ್ಟು ಒಳ್ಳೆಯ ಮೆಸೇಜ್ ಕೊಡುತ್ತಿದೆ. ಇದರಲ್ಲಿ ಎಚ್ಚರಿಕೆನೂ ಇದೆ. ಚಿಕಿತ್ಸೆನೂ ಅಡಗಿದೆ. ಚಿನ್ನು ಮರಿ.. ಮುದ್ದು ಮರಿ ಅಭಿನಯಕ್ಕೆ ಭಾರೀ ಪ್ರಶಂಸೆ ಸಿಗುತ್ತಿದೆ. ಹೌದು, ಜಯಂತ್ ಪಾತ್ರದಲ್ಲಿ ದೀಪಕ್ ಸುಬ್ರಮಣ್ಯ ಅಭಿನಯಿಸ್ತಿದ್ದು, ಅದ್ಭುತ ನಟನೆ ಮೂಲಕ ರೋಮಾಂಚನ ಸೃಷ್ಟಿಸ್ತಿದ್ದಾರೆ. ದೀಪಕ್ ವರ್ಸಿಟೈಲ್ ಆ್ಯಕ್ಟರ್ ಅನ್ನೋದರಲ್ಲಿ ನೋ ಡೌಟ್. ಎಂತಹದ್ದೇ ಪರಿಸ್ಥಿತಿ, ಪಾತ್ರ ಇದ್ರೂ ಜೀವ ತುಂಬೋ ಮಾಂತ್ರಿಕ ದೀಪಕ್.
ಇನ್ನೂ, ನಟ ದೀಪಕ್ ಅವರು ರಂಗಭೂಮಿ ಕಲಾವಿದ. ಇಂಡಸ್ಟ್ರೀಗೆ ಬಂದು ವರ್ಷಗಳೇ ಉರಳಿದ್ರೂ ಅದ್ಯಾಕೋ ಎಲೆಮರೆ ಕಾಯಿಯಂತೆ ಉಳಿದುಬಿಟ್ಟರು. ಸುಮಾರು 12 ಸಿನಿಮಾಗಳನ್ನ ಮಾಡಿದ್ದಾರೆ. ಆಗಾಧ ಪ್ರತಿಭೆ ಇದ್ರೂ ಹೆಸರು ಜನಪ್ರಿಯತೆ ಸಿಕ್ಕಿದ್ದು ಮಾತ್ರ ಇತ್ತೀಚಿಗೆ. ಕಲರ್ಸ್ ವಾಹಿನಿಯ ದಾಸ ಪುರಂದರ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ದೀಪಕ್ಗೆ ಪ್ರತಿಭೆ ಜೊತೆಗೆ ಅದೃಷ್ಟವು ಕೈ ಹಿಡಿಯಿತು. ಪೌರಾಣಿಕ ಧಾರಾವಾಹಿ ಆಗಿದ್ದರಿಂದ ಪಾತ್ರವಾಗಿಯೇ ದೀಪಕ್ ಜನರಿಗೆ ಗೊತ್ತಿದ್ರು. ಆದ್ರೇ ದೀಪಕ್ ಯಾರು? ಅವರ ನಟನಾ ಶಕ್ತಿ ಎಂತಹದ್ದು ಅಂತ ಅನಾವರಣ ಆಗಿದ್ದೇ ಲಕ್ಷ್ಮೀ ನಿವಾಸದಲ್ಲಿ. ಜಯಂತ್ ಪಾತ್ರ ನವರಸಗಳನ್ನ ಹಿಂಡಿ ತೆಗೆದಂತಿದೆ. ಸೈಕೋ, ಪಾಗಲ್ ಪ್ರೇಮಿ, ಶ್ರೀಮಂತ ಉದ್ಯಮಿ, ಅನುಮಾನದ ಪಿಶಾಚಿ, ತಂಟಗೆ ಬರದೇ ಇದ್ರೇ ಸ್ನೇಹಿತ, ಹಳೆದನ್ನ ಕೆದಕಿದ್ರೇ ಕೊಲೆಗಾರ, ಈ ಎಲ್ಲಾ ಭಿನ್ನ ವಿಭಿನ್ನ ಶೇಡ್ನಲ್ಲಿ ದೀಪಕ್ ವೀಕ್ಷಕರ ಮನಸ್ಸು ಗೆದ್ದಿದ್ದಾರೆ. ಇವರನ್ನು ಬಿಟ್ರೇ ಬೇರೆ ಯಾರು ಜಯಂತ್ ಪಾತ್ರ ಮಾಡೋದಕ್ಕೆ ಸಾಧ್ಯನೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅಭಿನಯದ ಸವಿ ನೀಡಿದ್ದಾರೆ.
ಸದ್ಯ ಸ್ಟೋರಿಗೆ ಬರೋದಾದ್ರೇ, ಜಯಂತ್ ಸೈಕೋ ಸಮಸ್ಯೆ, ಮಗು ಸಾವಿಗೆ ಕಾರಣ ಆಗಿರೋದು ಜಾಹ್ನವಿಗೆ ಆಘಾತ ತಂದಿತ್ತು. ಅಜ್ಜಿಯನ್ನ ಕೊಲೆ ಮಾಡೋಕೆ ಹೋಗಿದ್ದ ಗುಟ್ಟು ರಟ್ಟಾಗಿತ್ತು. ಈಗ ವೆಂಕಿ ಬಾಲ್ಯ ಸ್ನೇಹಿತ ಜಯಂತ್ ಅನ್ನೋದು ಜಾನು ಮುಂದೆ ಜಯಂತ್ ಹಳೆ ಗೆಳೆಯ ಅನಾವರಣ ಮಾಡಿದ್ದಾನೆ. ಜಾನು ಜಯಂತ್ನ ಕೊಲೆ ಮಾಡ್ಬೀಡು ಇಲ್ಲ ಅಂದ್ರೇ ಯಾರಿಗೂ ಉಳಿಗಾಲ ಇಲ್ಲ ಅಂತಾನೆ. ಆದ್ರೆ, ಜಾನು ಜಯಂತನನ್ನ ಒಂದೇ ಸಾರಿ ಹತ್ಯೆ ಮಾಡಿದ್ರೇ ಸಾಕಾಗಲ್ಲ. ಪ್ರತಿ ದಿನ ಕೊರಗ್ಬೇಕು ಅನ್ನೋ ಕಾರಣಕ್ಕೆ ತಾನೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಾನುನ ಕಳೆದುಕೊಂಡ ಜಯಂತ ವಿಲವಿಲ ಅಂತ ಒದ್ದಾಡ್ತಿದ್ದಾನೆ. ಜಾನು ಮನೆಯವ್ರಿಗೆ ಜಾನು ಕಾಲು ಜಾರಿ ಸಮುದ್ರಕ್ಕೆ ಹಾರಿದ್ಳು ಅಂತ ಸುಳ್ಳು ಹೇಳಿದ್ದಾನೆ. ಇಡೀ ಮನೆ ಶಾಕ್ನಲ್ಲಿದೆ.
ಆದ್ರೆ, ಇದರೆ ಮಧ್ಯೆ ಸಮುದ್ರಕ್ಕೆ ಹಾರಿದ ಜಾಹ್ನವಿ ದಡದಲ್ಲಿ ಪತ್ತೆಯಾಗಿದ್ದಾಳೆ. ಆದ್ರೆ ಆಕೆಯನ್ನು ನೋಡುತ್ತಿದ್ದಂತೆ ಸ್ಥಳೀಯರು ಓಡೋಡಿ ಬಂದಿದ್ದಾರೆ. ಇದರ ಜೊತೆಗೆ ರಿಲೀಸ್ ಆಗಿರೋ ಪ್ರೋಮೋದಲ್ಲಿ ಮತ್ತೊಬ್ಬ ಹೀರೋನಾ ಆಗಮನವಾಗಿದೆ. ವೀಕ್ಷಕರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ ಲಕ್ಷ್ಮೀ ನಿವಾಸ ತಂಡ. ಜಾನು ಏನ್ ಆದ್ಳು ಅನ್ನೋ ಸತ್ಯ ಇನ್ನಷ್ಟೇ ಹೊರಗಡೆ ಬರಬೇಕು. ಆದ್ರೇ ಇಲ್ಲಿ ರೋಮಾಂಚನಕಾರಿ ಅನುಭವ ನೀಡುತ್ತಿರೋದು ದೀಪಕ್ ಅಭಿನಯ. ಪ್ರತಿ ಪ್ರೋಮೋದಲ್ಲೂ ಜಯಂತ್ಗೆ ವೀಕ್ಷಕರು ಬೈತಿದ್ದಾರೆ. ಹಾಗೇ ಅಭಿನಯಕ್ಕೆ ಪ್ರಶಂಸೆಯ ಮಹಾಪೂರವೇ ಹರಿದು ಬರ್ತಿದೆ. ನೂರಾರು ವೀಕ್ಷಕರು ಸೋಷಿಯಲ್ ಮಿಡಿಯಾದಲ್ಲಿ ಕಾಮೆಂಟ್ ಮಾಡಿ ದೀಪಕ್ ಅಭಿನಯವನ್ನ ಹಾಡಿ ಹೊಗಳುತ್ತಿದ್ದಾರೆ. ಹೆಚ್ಚು.. ಹೆಚ್ಚು ಅವಕಾಶಗಳು ನಿಮಗೆ ಸಿಗುವಂತಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ